ಬೆಳಗಾವಿ ದಂಡು ಮಂಡಳಿ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ 3 ವರ್ಷದಲ್ಲಿ 32.78 ರೂ ಕೋಟಿ ಅನುದಾನ
ಇತ್ತೀಚೆಗೆ ಲೋಕಸಭೆ ಕಲಾಪದಲ್ಲಿ ಬೆಳಗಾವಿ ಸಂಸದೆ ಮಂಗಲ ಅಂಗಡಿ ಅವರು, ದಂಡು ಮಂಡಳಿಯ ಪ್ರದೇಶದಲ್ಲಿರುವ ರಸ್ತೆಗಳು ತುಂಬಾ ಹದಗೆಟ್ಟಿದ್ದು, ಅವುಗಳ ದುರಸ್ತಿಗೆ ಲಿಖಿತ ರೂಪದಲ್ಲಿ ಉತ್ತರಿಸಿದರು. ರಕ್ಷಣಾ ಇಲಾಖೆ ಅನುದಾನ ನೀಡಿದೆಯೇ ಎಂಬ ಪ್ರಶ್ನೆಗೆ ಅವರು ಲಿಖಿತ ರೂಪದಲ್ಲಿ ಉತ್ತರಿಸಿದರು
2019-20ರಲ್ಲಿ 5 ಕೋಟಿ ರೂ.,2020-21ರಲ್ಲಿ 3.28 ಕೋಟಿ ರೂ. ಹಾಗೂ 2021-22ರ ವರೆಗೆ 5 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸೇವೆಗಳ ಖರ್ಚು:
ದಂಡು ಮಂಡಳಿ ವ್ಯಾಪ್ತಿಯಲ್ಲಿರುವ (ಮಿಲಿಟರಿ ಪ್ರದೇಶದಲ್ಲಿ) ಮಾಡುವ ಅಭಿವೃದ್ಧಿ ಕಾರ್ಯಗಳಿಗೆ ತೆರಿಗೆ ವಿಧಿಸುವುದಿಲ್ಲ. ಹಾಗಾಗಿ ಅಕೌಂಟ್ ಮೂಲಕ 2019-20ರಲ್ಲಿ 6 ಕೋಟಿ ರೂ, 2020-21ರಲ್ಲಿ 6.28 ಕೋಟಿ ರೂ. ಹಾಗೂ 2021-22ರ ವರೆಗೆ 5.50 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಸಚಿವ ಅಜಯ ತಿಳಿಸಿದರು. ಜತೆಗೆ 15ನೇ ಹಣಕಾಸು ಆಯೋಗದಿಂದ 2020-21ರಲ್ಲಿ 1.15 ಕೋಟಿ ರೂ., 2021-22ರ ಮಾರ್ಚ್ 25ರ ವರೆಗೆ 85 ಲಕ್ಷ ರೂ. ಅನುದಾನ ನೀಡಲಾಗಿದೆ.
ರಾಜ್ಯ ಹಣಕಾಸು ಆಯೋಗದಿಂದ ಕಳೆದ ಮೂರು ವರ್ಷಗಳಲ್ಲಿ ಒಟ್ಟು 1.84 ಕೋಟಿ ರೂ. ಸೇರಿ ಒಟ್ಟು 32.78 ಕೋಟಿ ರೂ. ಅನುದಾನ ನೀಡಲಾಗಿದೆ. ಜತೆಗೆ ಕ್ಯಾಂಪ್ ಪ್ರದೇಶದಲ್ಲಿರುವ ತಿಮ್ಮಯ್ಯ ರಸ್ತೆಯನ್ನು 39.43 ಲಕ್ಷ ರೂ. ಹಾಗೂ ರಾಮಘಾಟ್ ರಸ್ತೆಯನ್ನು 42.49 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
Belagaviinfra.co.in