26. ಸಾರ್ವಜನಿಕರ ಅನುಕೂಲಕ್ಕಾಗಿ ಆಸ್ತಿ ತೆರಿಗೆ, ನೀರಿನ ಕರ ಬಾಕಿ ಇರುವ ಕುರಿತು ತಂತ್ರಜ್ಞಾನವನ್ನು ಬಳಸಿ ಎಸ್.ಎಂ.ಎಸ್. ಮೂಲಕ ತೆರಿಗೆ ವಿವರದ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು. 27. ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ 58 ವಾರ್ಡುಗಳ ಸರ್ವತೋಮುಖ ಅಭಿವೃದ್ಧಿ ಸೃಜಿಸಿ ಕಾಪಾಡುವದು ಹಾಗೂ ಸಮಸ್ತ ನಾಗರೀಕರಿಗೆ ಉತ್ಕೃಷ್ಟವಾದ ಸೇವೆ ಒದಗಿಸಲು ಮಹಾನಗರ ಪಾಲಿಕೆ ಸದಾ ಶ್ರಮಿಸುತ್ತಿದೆ. ಆಯವ್ಯಯದಲ್ಲಿ ಅಳವಡಿಸಿದ ಎಲ್ಲ ಕಾರ್ಯಕ್ರಮಗಳು ನಿಗಧಿತ ವೇಳೆಯಲ್ಲಿ ಅನುಷ್ಠಾನಗೊಳಿಸಲಾಗುವುದೆಂಬ ಆಶಾಭಾವನೆ ಹೊಂದಿದ್ದು, 2022-23 ನೇ ಸಾಲಿನಲ್ಲಿ ಬೆಳಗಾವಿ ನಗರದ ಸಮಗ್ರ ಮೂಲಭೂತ ಸೌಕರ್ಯಗಳನ್ನು ಹಾಗೂ ನಾಗರೀಕರ ನಿರೀಕ್ಷೆಯನ್ನು ತಲುಪಲು ಮತ್ತು ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು.