ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (Visvesvaraya Technological University, Belagavi -VTU)) ದ ರಜತ ಮಹೋತ್ಸವ ವರ್ಷಾಚರಣೆ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿತಾವಿಯ ಪ್ರಸಾರಾಂಗ ವಿಭಾಗ ಮತ್ತು ಎನ್.ಎಸ್.ಎಸ್. ಘಟಕವು ಯುವ ಬ್ರಿಗೇಡ್ (Yuva-Brigade) ಸಹಯೋಗದಲ್ಲಿ “ಜ್ಞಾನ ರಥ” (ಲ್ಯಾಬ್ ಆನ್ ವೀಲ್ಸ್) (Knowledge Chariot), “ಜನಪ್ರಿಯ ತಾಂತ್ರಿಕ ಶಿಕ್ಷಣ ಮಾಲೆ ನಾಲ್ಕನೇ ಸರಣಿ ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಡಾ ಟಿ.ಆರ್. ಅನಂತರಾಮು ವಿಜ್ಞಾನ ಪ್ರತಿಷ್ಠಾನದಿಂದ ಪ್ರಕಟಣೆಗೊಳ್ಳುತ್ತಿದ್ದ ಜನಪ್ರಿಯ ವಿಜ್ಞಾನ ಮಾಸಪತ್ರಿಕೆ “ಸೂತ್ರ” ಪತ್ರಿಕೆಯ ಪ್ರಕಟಣಾ ಹಕ್ಕನ್ನು ವಿತಾವಿ ಪ್ರಸಾರಂಗಕ್ಕೆ ಹಸ್ತಾಂತರಿಸುವ ಕಾರ್ಯಕ್ರಮವನ್ನು ದಿನಾಂಕ 13.09.2022 ರಂದು ಮಧ್ಯಾಹ್ನ 3.00 ಗಂಟೆಗೆ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಪ್ರೇಕ್ಷಾಗೃಹ, ವಿತಾವಿ, ಬೆಳಗಾವಿ (Belagavi) ಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ. ಚಕ್ರವರ್ತಿ ಸೂಲಿಬೆಲೆ, ಪ್ರಖ್ಯಾತ ವಾಗ್ಮಿಗಳು ಮತ್ತು ಚಿಂತಕರು, ಬೆಂಗಳೂರು, ಅಧ್ಯಕ್ಷತೆಯನ್ನು ವಹಿಸಿದ್ದ ವಿತಾವಿ ಕುಲಪತಿಗಳಾದ ಪ್ರೋ. ಕರಿಸಿದ್ದಪ್ಪ ಹಾಗೂ ಗೌರವ್ ಅತಿಥಿಗಳಾದ ಡಾ. ಸಿ.ಕೆ. ಸುಬ್ಬರಾಯ, ಅಧ್ಯಕ್ಷರು, ಕನ್ನಡ ಪುಸ್ತಕ ಆಯ್ಕೆ ಸಮಿತಿ, ವಿತಾವಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದಂರ್ಭದಲ್ಲಿ ವಿತಾವಿಯ ಕುಲಸಚಿವರಾದ ಪ್ರೋ. ಆನಂದ ದೇಶಪಾಂಡೆ, ಕುಲಸಚಿವರು ಮೌಲ್ಯಮಾಪನ, ಪ್ರೋ. ಬಿ.ಈ. ರಂಗಸ್ವಾಮಿ, ಹಣಕಾಸು ಅಧಿಕಾರಿಗಳು, ಶ್ರೀಮತಿ ಎಂ.ಎ.ಸಪ್ನಾ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಉದ್ಘಾಟನೆ ಹಾಗೂ ಕನ್ನಡ ಪುಸ್ತಕಗಳ ಬಿಡುಗಡೆ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ ಶ್ರೀ. ಚಕ್ರವರ್ತಿ ಸೂಲಿಬೆಲೆ ಇವರು ಮಗುವಿನ ಕೌಶಲ್ಯಗಳ ಬೆಳವಾಣಿಗೆಯಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ತುಂಬಾ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು. ಕನ್ನಡವನ್ನು ಕಟ್ಟುವ ಮತ್ತು ಅದರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಾಹಿತ್ಯವನ್ನು ಬೆಳೆಸುವ ಮಹೋನ್ನತ ಕಾರ್ಯವನ್ನು ಮಾಡುವ ನಿಟ್ಟಿನಲ್ಲಿ ವಿ ಟಿ ಯು ಹಮ್ಮಿಕೊಂಡ ಅನೇಕ ಕಾರ್ಯಕ್ರಮಗಳನ್ನು ಅವರು ನೆನಪಿಸಿ ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುಲಪತಿಗಳಾದ ಪ್ರೋ. ಕರಿಸಿದ್ದಪ್ಪರ ಅವರು ಅಧ್ಯಕ್ಷೀಯ ನುಡುಗಳನ್ನಾಡಿದರು.
- Advertisement -
“ಜ್ಞಾನ ರಥ” (ಲ್ಯಾಬ್ ಆನ್ ವೀಲ್ಸ್): (Jnana Ratha – Lab on Wheels)
- Advertisement -
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ( Visvesvaraya Technological University (VTU) ತನ್ನ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ವೈಜ್ಞಾನಿಕ ಹಾಗೂ ಹೊಸ ತಂತ್ರಜ್ಞಾನಗಳ ಮಾಹಿತಿಯ ಜೊತೆಗೆ ಅವುಗಳು ವಿಜ್ಞಾನದ ಯಾವ ಮೂಲ ವಿಷಯಗಳ ಮೇಲೆ ಅದು ಕೆಲಸ ಮಾಡುತ್ತದೆ ಎಂಬುದನ್ನು ತಿಳಿಸಿ ವೈಜ್ಞಾನಿಕ ಚಿಂತನೆಯನ್ನು ಬೆಳೆಸುವ ಉದ್ದೇಶದೊಂದಿಗೆ ವಿತಾವಿಯ ಮಾನ್ಯ ಕುಲಪತಿಗಳ ಆಶಯದಂತೆ, ವಿತಾವಿಯು ತನ್ನ ಹಳೆಯದಾದ ಬಸ್ಸನ್ನು ನವೀಕರಿಸಿ “ಜ್ಞಾನ ರಥ” ಎಂಬ ಹೆಸರಿನಡಿಯಲ್ಲಿ ಸಂಚಾರಿ ಪ್ರಯೋಗಾಲಯವನ್ನು ನಿರ್ಮಿಸಿದೆ. ಇದರ ವಿಶೇಷತೆ ಏನೆಂದರೆ ಇದರ ಪ್ರತಿ ಭಾಗಗಳು ಒಂದೊಂದು ವಿಷಯಗಳನ್ನು ಕಲಿಸಿಕೊಡುತ್ತವೆ. ಇದರಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ಮಾಹಿತಿಯನ್ನು ಮತ್ತು ಪ್ರಾಚೀನ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನವು ಎಷ್ಟೋಂದು ಶ್ರೀಮಂತವಾಗಿತ್ತು ಎಂಬುದನ್ನು ತಿಳಿಸಿ ಕೊಡುತ್ತದೆ. ಬಸ್ಸಿನ ಮೇಲಚಾವಣೆಯು ಭಾಗವನ್ನು ಬ್ರಹ್ಮಾಂಡದ ಅಧ್ಯಯನಕ್ಕೆ ಮೀಸಲಿಟ್ಟಿದ್ದು ಹತ್ತುವಾಗು “ನಾವೇಷ್ಟು ದೊಡ್ಡವರು” ಎಂಬ ಪ್ರಶ್ನೆಯೊಂದಿಗೆ ಆರುಜಗೊಂಡು ಇಳಿಯುವಾಗ ದ.ರಾ.ಬೇಂದ್ರೆಯವರ ಸಾಲುಗಳಾದ “ವಿಶ್ವ ಮಾತೆಯ ಗರ್ಭ ಕಮಲ ಜಾತ” ನೆನೆಸಿಗೊಂಡು ನಾನು ತುಂಬಾ ಚಿಕ್ಕವನೆಂಬ ಭಾವನೆ ಮೂಡುತ್ತದೆ
“ಜ್ಞಾನ ರಥ” ವು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ, ವಿಜ್ಞಾನ ಹಾಗೂ ಗಣಿತ ವಿಷಯಗಳಿಗೆ ಸಂಬಂಧಿಸಿದ ಸುಮಾರು 20ಕ್ಕಿಂತ ಹೆಚ್ಚು ಪ್ರಯೋಗಗಳನ್ನು ಹೊಂದಿದೆ. ಇದಲ್ಲದೆ ಈ ಪ್ರಯೋಗಾಲಯವು ಸಂಪೂರ್ಣವಾಗಿ ವಿದ್ಯುತ್ ಶಕ್ತಿ ಸ್ವಾವಲಂಬಿಯಾಗಿದ್ದು ಸೌರವ್ ವಿದ್ಯುತ್ವನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಅಂತರ್ಜಾಲದ ಮುಖಾಂತರ ಹಾಗೂ ದೂರದರ್ಶನದ ಮುಖಾಂತರ್ ಹಲವಾರು ವಿಶೇಷತೆಗಳನ್ನು ತೋರಿಸುವ ಒಂದು ಸ್ಮಾರ್ಟ ಟಿ.ವಿ.ಯನ್ನು ಅಳವಡಿಸಲಾಗಿದೆ. ಹಾಗೆಯೇ, ಜಿ.ಪಿ.ಎಸ್. ಸಿಸ್ಟೀಮ್, ಅಗ್ನಿ ಸುರಕ್ಷತಾ ವ್ಯವಸ್ಥೆ ಹಾಗೂ ಪ್ರಥಮ ಚಿಕಿತ್ಸೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಪ್ರಥಮ ಹಂತದಲ್ಲಿ ಬೆಳಗಾವಿ (Belagavi) ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಸಂಚರಿಸಲಿದೆ.
ಜನಪ್ರಿಯ ತಾಂತ್ರಿಕ ಶಿಕ್ಷಣ ಮಾಲೆಯ ನಾಲ್ಕನೇ ಸರಣಿಯ ಒಟ್ಟು ೩೯ ಪುಸ್ತಕಗಳನ್ನು ಇಲ್ಲಿ ಬಿಡುಗಡೆಗೊಳಿಸಿ ಎಲ್ಲ ಲೇಖಕರನ್ನು ಸನ್ಮಾನಿಸಲಾಯಿತು.
- Advertisement -
“ಸೂತ್ರ” ಪತ್ರಿಕೆಯ ಹಕ್ಕು:
ಡಾ.ಟಿ.ಆರ್.ಅನಂತರಾಮು ವಿಜ್ಞಾನ ಪ್ರತಿಷ್ಠಾನ (ರಿ), ಬೆಂಗಳೂರು ಇವರು “ಸೂತ್ರ” ಪತ್ರಿಕೆಯನ್ನು ನಡೆಸುತ್ತಿದ್ದು, ಈಗ ವಿಜ್ಞಾನ-ತಂತ್ರಜ್ಞಾನಗಳ ಶಿಕ್ಷಣದಲ್ಲಿ ಅಪಾರ ಅನುಭವವಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ವಿಜ್ಞಾನ-ಗಣಿತ-ತಂತ್ರಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಲೇಖನಗಳ ಮೂಲಕ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹಾಗೂ ಶಾಲಾಸಮೂಹವನ್ನು ತಲುಪಿಸಿ ಅದರಲ್ಲಿ ವೈಜ್ಞಾನಿಕ ಚಿಂತನೆಯನ್ನು ಜಾಗೃತಗೊಳಿಸುವ ಉದ್ದೇಶದೊಂದಿಗೆ ಹಾಗೂ ಕನ್ನಡ ಭಾಷೆಯಲ್ಲಿ ವೈಜ್ಞಾನಿಕ ವಿಷಯಗಳನ್ನು ಬರೆಯುವ ಬರಹಗಾರರನ್ನು ಪ್ರೋತ್ಸಾಹಿಸಲು ಮತ್ತು ಹೊಸ ಲೇಖಕರಿಗೆ ಅವಕಾಶವನ್ನು ನೀಡುವ ನಿಟ್ಟಿನಲ್ಲಿ ಇದರ ಮಾಲಿಕತ್ವವನ್ನು ವಹಿಸಿಕೊಳ್ಳುತ್ತಿದ್ದು ಅದರು ಮಾಲಕತ್ವ ಹಾಗೂ ಪ್ರಕಟಣೆಯ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಡಾ.ಟಿ.ಆರ್.ಅನಂತರಾಮು ಅವರು ಧರ್ಮಪತ್ನಿ ಮತ್ತು ಸಂಪಾದಕ ಮಂಡಳಿಯ ಅಧ್ಯಕ್ಷರಾದ ಡಾ. ರೋಹಿತ ಚಕ್ರತಿರ್ಥ ಹಾಜರಿದ್ದರು.
ಇದಕ್ಕೂ ಮೊದಲು ವಿತಾವಿಯ ಕುಲಸಚಿವರಾದ ಪ್ರೋ. ಆನಂದ ದೇಶಪಾಂಡೆ ಸ್ವಾಗತಿಸಿದರು. ಪ್ರೊ ಮಹಾಂತೇಶ ಬಿರ್ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು ಕುಲಸಚಿವರು (ಮೌಲ್ಯಮಾಪನ) ಪ್ರೋ. ಬಿ.ಈ.ರಂಗಸ್ವಾಮಿ ವಂದಿಸಿದರು.