ಮರಾಠಾ ಲಘು ಪದಾತಿ ದಳ ಕೇಂದ್ರದಲ್ಲಿ “ವಿಜಯ ದಿವಸ”: ಹುತಾತ್ಮ ಯೋಧರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಗೌರವ ಸಮರ್ಪಣೆ
Latest News

ಮರಾಠಾ ಲಘು ಪದಾತಿ ದಳ ಕೇಂದ್ರದಲ್ಲಿ “ವಿಜಯ ದಿವಸ”: ಹುತಾತ್ಮ ಯೋಧರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಗೌರವ ಸಮರ್ಪಣೆ

Belagavi Maratha Light Regimental Centre,Belagavi Maratha Light Regimental Centre cm bommai,Vijay divas at Belagavi Maratha Light Regimental Center,Vijay divas at Belagavi Maratha Light infantry

ಸೈನಿಕರ ಕ್ಷೇಮಾಭಿವೃದ್ಧಿಗೆ ಸರಕಾರ‌ ಬದ್ಧ : ಭಾರತವು 1971 ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ದದಲ್ಲಿ ಜಯಸಾಧಿಸಿ 50 ವರ್ಷ ಪೂರೈಸಿದ ಸಂದರ್ಭದಲ್ಲಿ ಹಮ್ಮಿಕೊಳ್ಳಲಾದ “ವಿಜಯ ದಿವಸ” ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 1971ರ ಇಂಡೋ-ಪಾಕ್ ಯುದ್ಧದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದರು.

ಬೆಳಗಾವಿಯ ಮರಾಠಾ ಲಘು ಪದಾತಿ ದಳ ಕೇಂದ್ರ(ಎಂ.ಎಲ್.ಐ.ಆರ್.ಸಿ)ದ ಆವರಣದಲ್ಲಿ ಗುರುವಾರ(ಡಿ.16) ಹಮ್ಮಿಕೊಳ್ಳಲಾಗಿದ್ದ ವಿಜಯ ದಿವಸ” ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು.

1971 ರ ಇಂಡೋ-ಪಾಕ್ ಯುದ್ಧದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದು ಬಾಂಗ್ಲಾ ದೇಶ ಉದಯಕ್ಕೆ ಕಾರಣರಾದ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಇಂಡೋ-ಪಾಕ್ ಯುದ್ಧವು ಚರಿತ್ರೆಯಲ್ಲಿ ಭಾರತದ ಶಕ್ತಿಗೆ ಸ್ಥಾನ ಒದಗಿಸಿದೆ. ದೇಶವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಇದು ನಮಗೆ ಮತ್ತಷ್ಟು ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.

ಸೇನೆ ದೇಶ ರಕ್ಷಣೆಯ ಜತೆಗೆ ಆಂಯರಿಕ ಭದ್ರತೆಯಲ್ಲೂ ಪ್ರಮುಖ‌ ಪಾತ್ರ ವಹಿಸುತ್ತಿದೆ. ಗಡಿಯಾಚೆಗಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿದೆ. ಇಂಡೋ-ಪಾಕ್ ಯುದ್ಧವು ದೇಶದ ಮೂರೂ ಸೇನಾ ಪಡೆಗಳ ಕಾರ್ಯಕ್ಷಮತೆಗೆ ಸಾಕ್ಷಿ. 13 ದಿನಗಳ ಯುದ್ಧದಲ್ಲಿ ಅನೇಕ ಜನರು ಹುತಾತ್ಮರಾದರು.
90 ಸಾವಿರಕ್ಕೂ ಅಧಿಕ ಪಾಕಿಸ್ತಾನ ಸೈನಿಕರು ಶರಣಾದರು. ಈ ಯುದ್ಧ ಕಲೆಯು ಇಡೀ ಜಗತ್ತು ಭಾರತದ ಸೇನಾಶಕ್ತಿಯ ಕಡೆ ನೋಡುವಂತೆ ಆಯಿತು. ಈ ಯುದ್ಧದ ಬಳಿಕ ಭಾರತ ಸೇನೆ ಮತ್ತಷ್ಟು ಬಲಿಷ್ಢವಾಗಿದೆ. ಪ್ರಸ್ತುತ ಸಮರಕಲೆಯಲ್ಲಿ ತಂತ್ರಜ್ಞಾಯಪ್ರಮುಖ ಪಾತ್ರ ವಹಿಸುತ್ತಿದೆ. ಭಾರತ ಕೂಡ ಬದಲಾಗುತ್ತಿರುವ ಸನ್ನಿವೇಶಕ್ಕೆ ತಕ್ಕಂತೆ ಬಲಿಷ್ಠಗೊಳ್ಳುತ್ತಿದೆ. ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಭಾರತೀಯ ಸೇನೆಯು ಗಡಿಯನ್ನು ಸುರಕ್ಷಿತವಾಗಿಸಿದೆ.

ಇಂಡೋ-ಪಾಕ್ ಯುದ್ಧವು ಚರಿತ್ರೆಯಲ್ಲಿ ಭಾರತದ ಶಕ್ತಿಗೆ ಸ್ಥಾನ ಒದಗಿಸಿದೆ. ದೇಶವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಇದು ನಮಗೆ ಮತ್ತಷ್ಟು ಸ್ಫೂರ್ತಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಸಿಡಿಎಸ್ ಬಿಪಿನ್ ರಾವುತ್ ಹಾಗೂ ಇತರ ಹನ್ನೆರಡು ಜನರಿಗೆ ಕೂಡ ಅವರು ನುಡಿ ನಮನ ಸಲ್ಲಿಸಿದರು.
ಭಾರತ ಮಾತೆ ಸೇವೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ನಾವು ಯಾವುದೇ ವೃತ್ತಿಯಲ್ಲಿ ಇದ್ದರೂ ದೇಶ ಸೇವೆಗೆ ಸಮರ್ಪಿಸಿಕೊಳ್ಳಬೇಕು.

ಪ್ರೋತ್ಸಾಹ ಧನ ಹೆಚ್ಚಿಸಿ ಆದೇಶ: ಪರಮವೀರ ಚಕ್ರ ಪ್ರಶಸ್ತಿಗೆ 1.50 ಕೋಟಿ ರೂಪಾಯಿ ಅನುದಾನ, ಅಶೋಕ ಚಕ್ರ ಕೂಡ 1.50 ಕೋಟಿ, ಕೀರ್ತಿ ಚಕ್ರ, ಶೌರ್ಯ ಚಕ್ರ ಪ್ರಶಸ್ತಿಗೆ ನೀಡಲಾಗುತ್ತಿದ್ದ ಅನುದಾನ ಹಾಗೂ ಪ್ರೋತ್ಸಾಹ ಮೊತ್ತವನ್ನು ಕೂಡ ಹೆಚ್ಚಿಸಲಾಗಿದೆ. ಇದೇ ರೀತಿ ಸೇನಾ ಮೆಡೆಲ್ ಗಳಿಗೆ ರಾಜ್ಯ ಸರಕಾರದಿಂದ ಅನುದಾನ ಹಾಗೂ ಪ್ರೋತ್ಸಾಹವನ್ನು ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದರು. ರಾಜ್ಯ ಸರಕಾರವು ಯಾವಾಗಲೂ ಸೈನಿಕರ ಕಲ್ಯಾಣಕ್ಕೆ ಆದ್ಯತೆ ನೀಡುತ್ತಿದೆ. ನಿವೃತ್ತ ಯೋಧರು ಹಾಗೂ ಹುತಾತ್ಮರ ಕುಟುಂಬದ ಸದಸ್ಯರ ಕ್ಷೇಮಾಭಿವೃದ್ಧಿ ಗೆ ಬದ್ಧವಾಗಿದೆ ಎಂದರು.

ಕರ್ನಾಟಕ ಮತ್ತು ಕೇರಳ ಉಪ ಕ್ಷೇತ್ರದ ಜನರಲ್ ಕಮಾಂಡಿಂಗ್ ಆಫೀಸರ್ ಮೇಜರ್ ಜನರಲ್ ಜೆ.ವಿ.ಪ್ರಸಾದ್, ಡಿಜಿಪಿ ಪ್ರವೀಣ ಸೂದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಕೂಡ ಯುದ್ಧ ಸ್ಮಾರಕಕ್ಕೆ ಮಾಲಾರ್ಒಣೆ ಮಾಡುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದರು.

ಶಾಸಕ ಅನಿಲ್ ಬೆನಕೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಎಂ.ಎಲ್.ಐ.ಆರ್.ಸಿ. ಕಮಾಂಡಂಟ್ ಬ್ರಿಗೇಡಿಯರ್ ರೋಹಿತ್ ಚೌಧರಿ, ಹಿರಿಯ ಸೇನಾಧಿಕಾರಿಗಳು, ನಿವೃತ್ತ ಯೋಧರು, ಗಣ್ಯರು ಸೇರಿದಂತೆ ನೂರಾರು ಜನರು ವಿಜಯ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply