ಕರ್ನಾಟಕದ ಎರಡನೇ ರಾಜಧಾನಿ ಎಂದೇ ಕರೆಯಲ್ಪಡುವ ಬೆಳಗಾವಿಯಿಂದ ಮಹಾರಾಷ್ಟ್ರದ ಎರಡನೇ ರಾಜಧಾನಿ ನಾಗಪುರ ಕ್ಕೆ ನಾಳೆ (ಏ.16) ರಿಂದ ನೇರ ವಿಮಾನ ಸೇವೆ ಆರಂಭವಾಗಲಿದೆ.
ಈ ಮಾರ್ಗ ಉಡಾನ್ (UDAN) ಯೋಜನೆಯಡಿಯಲ್ಲಿದ್ದು, ಅತೀ ಕಡಿಮೆ ದರದಲ್ಲಿ, ಕಡಿಮೆ ಸಮಯದಲ್ಲಿ ಪ್ರಯಾಣಿಸಬಹುದು. ಸಂಜಯ ಘೋಡಾವತ (Sanjay Ghodawat Group) ಒಡೆತನದ ಸ್ಟಾರ್ ಏರ್ (Star Air) ವಿಮಾನ ಸಂಸ್ಥೆ ಈ ಮಾರ್ಗದಲ್ಲಿ ಹಾರಾಟ ನಡೆಸಲಿದೆ.
ರಾಜ್ಯದಲ್ಲಿ ಬೆಂಗಳೂರು (Bengaluru) ಹೊರತುಪಡಿಸಿದರೆ, ಕೇವಲ ಬೆಳಗಾವಿ ವಿಮಾನ ನಿಲ್ದಾಣ (Belagavi Airport) ದಿಂದ ಈ ಸೇವೆ ದೊರೆಯಲಿದ್ದು, ಈ ಮಾರ್ಗದ ವಿಮಾನ ಹಾರಾಟಕ್ಕೆ ನಾಳೆ ಅಧಿಕೃತ ಚಾಲನೆ ದೊರೆಯಲಿದೆ.
ಈಗಿರುವ ಬೆಳಗಾವಿ (Belagavi) ಮತ್ತು ನಾಗಪುರ (Nagpur) ನಗರಗಳ ರಸ್ತೆ ಮಾರ್ಗದ ಅಂತರ 762 ಕಿಮೀ ಇದ್ದು, ಪ್ರಯಾಣಿಸಲು 19 ಘಂಟೆ ಸಮಯ ಬೇಕಾಗುತ್ತದೆ ಆದರೆ ಇದೇ ವಿಮಾನದಲ್ಲಿ ಸಂಚರಿಸಿದರೆ ಕೇವಲ 1 ಘಂಟೆ 30 ನಿಮಿಷದಲ್ಲಿ ತಲುಪಬಹುದು.
ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಈ ಸೇವೆ ಕೊನೆಗೂ ಅರಾಂಭವಾಲಿದ್ದು, ಈ ಭಾಗದ ಪ್ರಯಾಣಿಕರಿಗೆ ಸಂತಸದ ವಿಷಯವಾಗಿದೆ. ಈ ಸೇವೆಯು ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶನಿವಾರ ಇರಲಿದೆ.
ವೇಳಾಪಟ್ಟಿ : ಸ್ಟಾರ್ ಏರ್ ನ ವಿಮಾನವು ಬೆಳಿಗ್ಗೆ 8.30 ಕ್ಕೆ ಬೆಳಗಾವಿಯಿಂದ ಹೊರಟು ಮುಂಜಾನೆ 10.00 ಕ್ಕೆ ನಾಗಪುರ ತಲುಪಲಿದೆ. ಇದೇ ವಿಮಾನವು ಮುಂಜಾನೆ 10.30 ಕ್ಕೆ ನಾಗಪುರದಿಂದ ಹೊರಟು ಮದ್ಯಾಹ್ನ 12 ಕ್ಕೆ ತಲುಪಲಿದೆ.
ಸ್ಟಾರ್ ಏರ್ ವಿಮಾನ ಸಂಸ್ಥೆಯು ಈಗಾಗಲೇ ಬೆಳಗಾವಿಯಿಂದ ಮುಂಬೈ, ಅಹ್ಮದಾಬಾದ್, ಇಂದೋರ್, ನಾಶಿಕ್, ಜೋಧಪುರ, ಸೂರತ್, ತಿರುಪತಿ ನಗರಗಳಿಗೆ ನೇರ ವಿಮಾನ ಸೇವೆ ನೀಡುತ್ತಿದೆ. ಹಾಗೂ ಕಲಬುರ್ಗಿ, ಕಿಶಂಗರ್ ನಗರಗಳಿಗೆ ವನ್ ಸ್ಟಾಪ್ ಮೂಲಕ ಸೇವೆ ನೀಡುತ್ತಿದೆ.
Photo : Ashwin Patil