Sunday, October 24, 2021
HomeAirportಬೆಳಗಾವಿಯಿಂದ ದೆಹಲಿಗೆ ಸ್ಪೈಸ್ ಜೆಟ್ ನೇರ ವಿಮಾನ ಸೇವೆ

ಬೆಳಗಾವಿಯಿಂದ ದೆಹಲಿಗೆ ಸ್ಪೈಸ್ ಜೆಟ್ ನೇರ ವಿಮಾನ ಸೇವೆ

ಉತ್ತರ ಕರ್ನಾಟಕದ ಜನತೆ, ಅದರಲ್ಲೂ ಬೆಳಗಾವಿ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಬೆಳಗಾವಿ – ದೆಹಲಿ ನೇರ ವಿಮಾನ ಸೇವೆಗೆ ಈಗ ಕಾಲ ಕೂಡಿ ಬಂದಿದ್ದು ವಿಮಾನ ಸೇವೆ ಮುಂದಿನ ತಿಂಗಳು 13 ನೇ ತಾರಿಖಿನಂದು ಪ್ರಾರಂಭವಾಗಲಿದೆ.

ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಬೆಳಗಾವಿ ಮತ್ತು ದೆಹಲಿ ಮದ್ಯೆ ಈ ವಿಮಾನ ಸಂಚಾರ ಆರಂಭಿಸಲು ಮುಂದೆ ಬಂದಿದ್ದು, ಆರಂಭದಲ್ಲಿ ವಾರದಲ್ಲಿ 2 ದಿನ ಹಾರಾಟ ಹಾರಾಟ ನಡೆಸಲಿದೆ. ಈ ಮಾರ್ಗದಲ್ಲಿ ದೊಡ್ಡ ವಿಮಾನ ಬೋಯಿಂಗ್ 737-700 ವಿಮಾನವನ್ನು ಸ್ಪೈಸ್ ಜೆಟ್ ಬಳಸಿಕೊಳ್ಳಲಿದೆ.

ಈ ವಿಮಾನವು ಬೋಯಿಂಗ್ 737-700 ಆಗಿದ್ದು, 149 ಆಸನಗಳನ್ನು ಹೊಂದಿರುತ್ತದೆ. ಪ್ರಯಾಣಿಕರು ಕೇವಲ 2 ಘಂಟೆ 20 ನಿಮಿಷದಲ್ಲಿ ಬೆಳಗಾವಿಯಿಂದ ದೆಹಲಿಗೆ ತಲುಪಬಹುದಾಗಿದೆ.

ವೇಳಾಪಟ್ಟಿ – ಈ ವಿಮಾನವು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮದ್ಯಾಹ್ನ 2.30 ಕ್ಕೇ ಹೊರಟು ಸಂಜೆ 4.45 ಕ್ಕೆ ಬೆಳಗಾವಿ ವಿಮಾನ ನಿಲ್ದಾಣ ತಲುಪಲಿದೆ. ಇದೇ ವಿಮಾನ ಮರಳಿ ದೆಹಲಿ 05.05 ಕ್ಕೆ ಹೊರಟು, ಸಂಜೆ 7.25 ಕ್ಕೆ ತಲುಪಲಿದೆ.

ಲೇಹ್- ದೆಹಲಿ – ಬೆಳಗಾವಿ : ಈ ವಿಮಾನವು ಲೇಹ್ ನಿಂದ ಹೊರಟು ದೆಹಲಿ ತಲುಪಲಿದೆ. ನಂತದಲ್ಲಿ ಬೆಳಗಾವಿಗೆ ಆಗಮಿಸಲಿದೆ. ಇದು ಮರಳಿ ಲೇಹ್ ಗೆ ಹೋಗುವುದಿಲ್ಲ, ದೆಹಲಿವರೆಗೆ ಮಾತ್ರ ಸಂಚರಿಸಲಿದೆ.

ಬೆಂಗಳೂರಿನ ನಂತರ ದೆಹಲಿಗೆ ನೇರ ಸೇವೆ ಹೊಂದಿದ ಏಕೈಕ ವಿಮಾನ ನಿಲ್ದಾಣ –

ಬೆಳಗಾವಿಯ ವಿಮಾನ ನಿಲ್ದಾಣವು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಂತರದ ಏಕೈಕ ವಿಮಾನ ನಿಲ್ದಾಣ ದೆಹಲಿಯೊಂದಿಗೆ ಸಂಪರ್ಕ ಹೊಂದಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಕೊವಿಡ್ ಎರಡನೇ ಅಲೆಯ ಮೊದಲು ಸೇವೆ ಇತ್ತಾದರೂ, ಆನಂತರದಲ್ಲಿ ವಿಮಾನ ಸಂಸ್ಥೆಗಳು ಆ ಸೇವೆ ಮರು ಆರಂಭಿಸಿಲ್ಲ. ಹೀಗಾಗಿ, ಬೆಳಗಾವಿ ವಿಮಾನ ನಿಲ್ದಾಣವೊಂದೇ ಈಗ ದೆಹಲಿಗೆ ನೇರ ಸೇವೆ ಹೊಂದಿದ ವಿಮಾನ ನಿಲ್ದಾಣವಾಗಿದೆ.

ಬೇಡಿಕೆ ಈಡೇರಿಕೆ – ಉತ್ತರ ಕರ್ನಾಟಕ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ, ಬೆಳಗಾವಿ ದೆಹಲಿ ವಿಮಾನ ಸೇವೆಗೆ ಅಂತೂ ಚಾಲನೆ ದೊರೆಯಲಿದೆ. ಈ ಭಾಗದ ಜನಪ್ರತಿನಿಧಿಗಳು, ಉದ್ಯಮಿಗಳು, ವಿಧ್ಯಾರ್ಥಿಗಳು, ಸೈನಿಕರಿಗೆ ಇದು ತುಂಬಾ ಅನುಕೂಲಕರವಾಗಿದೆ.

RELATED ARTICLES
- Advertisment -