ಬೆಳಗಾವಿ ದೆಹಲಿ ನಡುವಿನ ವಿಮಾನ ಸೇವೆಗೆ ಇಂದು ಚಾಲನೆ ದೊರಕಿತು. ದೆಹಲಿಗೆ ನೇರ ವಿಮಾನ ಸೇವೆ ಹೊಂದಿದ ಏಕೈಕ ಉತ್ತರ ಕರ್ನಾಟಕದ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಬೆಳಗಾವಿ ವಿಮಾನ ನಿಲ್ದಾಣ ಸಾಕ್ಷಿಯಾಯಿತು.
ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿಯಿಂದ ದೆಹಲಿಗೆ ನೇರ ವಿಮಾನ ಸೇವೆ ಈಗ ಇಡೆರಿದ್ದು, ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಈ ಸೇವೆಯನ್ನು ಆರಂಭಿಸಿದೆ. ಈ ಮಾರ್ಗ ಕ್ಕಾಗಿ ಸ್ಪೈಸ್ ಜೆಟ್ ದೊಡ್ಡ ವಿಮಾನ ಬೋಯಿಂಗ್ 737 ವಿಮಾನವನ್ನು ಬಳಸುತ್ತಿದ್ದು, ಇದು ಒಟ್ಟು 149 ಆಸನವನ್ನು ಹೊಂದಿದೆ.
ಶುಕ್ರವಾರ ಆಗಸ್ಟ್ 13 – ಬೆಳಗಾವಿ ಮತ್ತು ಇಡೀ ಉತ್ತರ ಕರ್ನಾಟಕಕ್ಕೆ ಐತಿಹಾಸಿಕ ದಿನವಾಯಿತು. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸಣ್ಣ ಉದ್ಘಾಟನಾ ಕಾರ್ಯಕ್ರಮ ಏರ್ಪಡಿಲಾಗಿತ್ತು ಹಾಗೂ ವಿಷನ್ ಫ್ಲೈ ವಿದ್ಯಾರ್ಥಿಗಳು ನೃತ್ಯದ ಮೂಲಕ ವಿಮಾನವನ್ನು ಆಗಮಿಸಿದರು. ಅಪ್ಟೆಕ್ ಸಂಸ್ತೆಯ ವಿದ್ಯಾರ್ಥಿಗಳು ಹೂವು ಗಳಿಂದ ಪ್ರಯಾಣಿಕರನ್ನು ಸ್ವಾಗತಿಸಿದ್ದರು.
ಮೊದಲ ಫ್ಲೈಟ್ ಗೆ ಭರ್ಜರಿ ರೆಸ್ಪಾನ್ಸ್ – ಬೆಳಗಾವಿ ದೆಹಲಿ ನಡುವಿನ ನೇರ ವಿಮಾನ ಸೇವೆಗೆ ಭರ್ಜರಿ ಪ್ರತಿಕ್ರಿಯೆ ಬಂದಿದ್ದು, ಮೊದಲ ದಿನವೇ ಶೇಕಡಾ 100 ರಷ್ಟು ಬುಕಿಂಗ್ ಆಗಿತ್ತು. ಹೌದು, ಮೊದಲ ವಿಮಾನಕ್ಕೆ ಬೆಳಗಾವಿ ಯಿಂದ ದೆಹಲಿಗೆ 149 ಪ್ರಯಾಣಿಕರು ಪ್ರಯನಿಸಿದ್ದು, ದೆಹಲಿಯಿಂದ ಬೆಳಗಾವಿಗೆ 134 ಪ್ರಯಾಣಿಕರು ಪ್ರಯಾಣಿಸಿದ್ದಾರೆ.
- Advertisement -
Also read : SpiceJet Belagavi-Delhi Inaugural flight – Departure 100% and Arrival 90% load
ಬೆಳಗಾವಿ ಸಂಸದರಾದ ಶ್ರೀಮತಿ ಮಂಗಳ ಸುರೇಶ್ ಅಂಗಡಿ ಅವರು ದೀಪ ಬೆಳಗಿ, ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಳಗಾವಿ ವಿಮಾನ ನಿಲ್ದಾಣ ನಿರ್ದೇಶಕರಾದ ರಾಜೇಶ್ ಕುಮಾರ್ ಮೌರ್ಯ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬೆಳಗಾವಿ ಉತ್ತರ ಶಾಸಕ ಅನಿಲ್ ಬೇನಕೆ, ಕೆ ಎಲ್ ಇ ಮಹಾವಿದ್ಯಾಲಯದ ಚಾನ್ಸೆಲರ್ ರಾಜೇಶ್ ಕೆ ಮುದಗಲ್, ವಾಯ್ಸ್ ಚಾನ್ಸೆಲರ್ ಡಿ ವೈ ಪಾಟೀಲ್, ಈರಪ್ಪ ವಾಲಿ – ಡೀಮ್ಡ್ ಯೂನಿವರ್ಸಿಟಿ ಕೊಲ್ಲಾಪುರ, ನಿಯಾಜ್ ಶಿರಹಟ್ಟಿ, ಸ್ಟೇಶನ್ ಮ್ಯಾನೇಜರ್, ನಿಖಿಲ್ ಆರ್ ಎಮ್ ಸೌತ್- ಸೆಕ್ಯುರಿಟಿ, ಗೋಕುಲ್ ಏ ಎಂ – ಕಾರ್ಗೋ, AAICLAS ನ ಎಲ್ಲರೂ ಸಾಕ್ಷಿಯಾಗಿ ಸ್ಪೈಸ್ ಜೆಟ್ ಗೆ ಧನ್ಯವಾದ ಹೇಳಿದರು. ಹಾಗೂ ಮೊದಲ ಪ್ರಯಾಣಿಕ ನಿಗೆ ಬೋರ್ಡಿಂಗ್ ಪಾಸ್ ನೀಡಿದರು.
ಮೊದಲ ದಿನದ ವಿಮಾನ ಬೆಳಗಾವಿಗೆ ಸಂಜೆ 4.45 ಕ್ಕೆ ಆಗಮಿಸಿದ್ದು, 5.35 ಕ್ಕೆ ದೆಹಲಿಗೆ ಹಾರಿತು.
ಟರ್ಮಿನಲ್ ಕಟ್ಟಡದಲ್ಲಿ ಪ್ರಯಾಣಿಕರಿಗೆ ತಿನಿಸುಗಳ ಮಳಿಗೆ ಉದ್ಘಾಟನೆ – ಪ್ರಯಾಣಿಕರಿಗಾಗಿ ಟರ್ಮಿನಲ್ ಕಟ್ಟಡದಲ್ಲಿ ತಿನಿಸುಗಳ ಮಳಿಗೆ ಉದ್ಘಾಟನೆ ಮಾಡಲಾಯಿತು. ಶ್ರೀಮತಿ ಮಂಗಳಾ ಸುರೇಶ್ ಅಂಗಡಿ ಉದ್ಘಾಟನೆ ನೆರವೇರಿಸಿದರು. ವಿಮಾನ ನಿಲ್ದಾಣದಲ್ಲಿ ಇದು ಎರಡನೇ ತಿನಿಸು ಮಳಿಗೆಯಾಗಿದೆ.
Also read : Spicejet to launch first early-morning flight between Bengaluru and Belagavi from 21 Aug.
ಕಾರ್ಗೋ ಸೇವೆಗೂ ಚಾಲನೆ –
ಶುಕ್ರವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಸೇವೆಗೂ ಚಾಲನೆ ದೊರೆಯಿತು. ಶ್ರೀಮತಿ ಮಂಗಳಾ ಸುರೇಶ್ ಅಂಗಡಿ ಸೇವೆಗೆ ಚಾಲನೆ ನೀಡಿದರು. ಬೆಳಗಾವಿ ಭಾಗದಲ್ಲಿ ಕಾರ್ಗೋ ಸೇವೆಗೆ ಸಾಕಷ್ಟು ಬೇಡಿಕೆಯಿದ್ದು, ಇದೀಗ ಬೆಳಗಾವಿಯಿಂದ ದೇಶದ ಪ್ರಮುಖ ನಗರಗಳಿಗೆ ಕಾರ್ಗೋ ಆರಂಭವಾಗಿದೆ.
ಬೆಳಗಾವಿಯಿಂದ 13 ನಗರಗಳಿಗೆ ಕಾರ್ಗೋ ಆಗಮನ ಮತ್ತು ನಿರ್ಗಮನ ಸೇವೆಗೆ ಚಾಲನೆ ದೊರಕಿದೆ.
photo gallery :