ರೈಲು ಗಾಡಿ ಸಂಖ್ಯೆ 17326/17325 ಮೈಸೂರು-ಬೆಳಗಾವಿ ವಿಶ್ವಮಾನವ ನಿತ್ಯ ಸಂಚಾರ ಎಕ್ಸ್ಪ್ರೆಸ್ (Vishwamanava Express) ರೈಲು ಧಾರವಾಡ (Dharwad) ಮತ್ತು ಬೆಳಗಾವಿ (Belagavi) ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.
ಬೆಳಗಾವಿ (Belagavi) -ಸುಲಧಾಳ (Suldhal) ವಿಭಾಗ ನಡುವೆ ನಡೆಯುತ್ತಿರುವ ಜೋಡು ಮಾರ್ಗ ಕಾಮಗಾರಿ ನಿಮಿತ್ತ ವಿಶ್ವಮಾನವ ಎಕ್ಸ್ಪ್ರೆಸ್ ರೈಲು ಜೂ.22ರಿಂದ 28ರ ವರೆಗೆ ಭಾಗಶಃ ರದ್ದುಗೊಳಿಸಲಾಗಿದೆ. ಈ ರೈಲು ಬೆಳಗಾವಿ ಬದಲು ಧಾರವಾಡದಿಂದ ಹೊರಡಲಿದೆ ಹಾಗೂ ಕೊನೆಗೊಳ್ಳಲಿದೆ.
ಈ ನಿರ್ಧಾರದಿಂದ ಬೆಳಗಾವಿ ಭಾಗದ ಪ್ರಯಾಣಿಕರಿಗೆ 8 ದಿನಗಳ ಮಟ್ಟಿಗೆ ಅನಾನುಕೂಲ ವಾಗುವುದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) 2 ವಿಶೇಷ ಬಸ್ ಗಳ ಸಂಚಾರ ನಡೆಸಲಿದೆ. ಹುಬ್ಬಳ್ಳಿ ರೈಲು ನಿಲ್ದಾಣ-ಬೆಳಗಾವಿ-ಹುಬ್ಬಳ್ಳಿ ರೈಲು ನಿಲ್ದಾಣ ನಡುವೆ ಈ ವಿಶೇಷ ಕಾರ್ಯಾಚರಣೆ ನಡೆಯಲಿದೆ.
ಈ ಸೇವೆ ಒದಗಿಸುವಂತೆ ಪ್ರಯಾಣಿಕರು ಟ್ವಿಟರ್ ನಲ್ಲಿ ಬೇಡಿಕೆಯಿಟ್ಟಿರುವುದನ್ನು ಅರಿತು, ಪರಿಶೀಲಿಸಿ ವಾ.ಕ.ರ.ಸಾ.ಸಂ. ದಿನಾಂಕ: 22-06-2022 ರಿಂದ 28-06-2022 ರವರೆಗೆ ಸಾಯಂಕಾಲ 06:00 ಹಾಗೂ 06:30 ಘಂಟೆಗೆ ಹುಬ್ಬಳ್ಳಿ ರೇಲ್ವೆ ನಿಲ್ದಾಣದಿಂದ ಬೆಳಗಾವಿಗೆ ಹಾಗೂ ಬೆಳಿಗ್ಗೆ 05:30 ಹಾಗೂ 06:00 ಘಂಟೆಗೆ ಬೆಳಗಾವಿಯಿಂದ ಹುಬ್ಬಳ್ಳಿಗೆ ತಲಾ 02 ಸಾರಿಗೆಗಳ ಕಾರ್ಯಾಚರಣೆ ಮಾಡಲು ವ್ಯವಸ್ಥಾಪಕರಿಗೆ ಸೂಚಿಸಿದೆ.
- Advertisement -
ಎಲ್ಲರೂ ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸ್ಥೆ ತಿಳಿಸಿದೆ.