ಅಂಚೆ ಇಲಾಖೆಯ ಬಹುಬೇಡಿಕೆಯ ಜನಪ್ರಿಯ ಸಾವರಿನ್ ಗೋಲ್ಡ್ ಬಾಂಡ್ ಖರೀದಿಗೆ ಮತ್ತೆ ಬಂದಿದೆ ಸುವರ್ಣಾವಕಾಶ.
ಅಂಚೆ ಇಲಾಖೆಯಲ್ಲಿ ಸಾವರಿನ್ ಗೋಲ್ಡ್ ಬಾಂಡ್ (Sovereign Bond) ನಲ್ಲಿ ಹೂಡಿಕೆ (Investment) ಗೆ ಬಾರಿ ಬೇಡಿಕೆಯಿದ್ದು, ಜನರ ಅಪೇಕ್ಷಯ ಮೇರೆಗೆ ಬೆಳಗಾವಿ ವಿಭಾಗೀಯ ಪ್ರಧಾನ್ ಅಂಚೆ ಕಛೇರಿ ಸೇರಿದಂತೆ ಜಿಲ್ಲೆಯ ವಿವಿಧ ಅಂಚೆ ಕಛೇರಿ (Post Offices) ಗಳಲ್ಲಿ ಅವಕಾಶ ಮಾಡಿ ಕೊಡಲಾಗುತ್ತಿದೆ.
ಇದೇ ಜೂನ್ 20 ರಿಂದ 24 ನೇ ತಾರೀಕಿನವರಗೆ (ಸೋಮವಾರ ದಿಂದ ಶುಕ್ರವಾರದ ವರೆಗೆ) ಒಟ್ಟು ಐದು ದಿನಗಳ ವರೆಗೆ ಗ್ರಾಹಕರಿಗೆ ಸಾವರಿನ್ ಗೋಲ್ಡ್ ಬಾಂಡ್ ನಲ್ಲಿ ಹೂಡಿಕೆ ಮಾಡಲು ಅವಕಾಶ ಮಾಡಿ ಕೊಡಲಾಗುವುದು ಎಂದು ಬೆಳಗಾವಿ ವಿಭಾಗದ ಅಂಚೆ ಅಧೀಕ್ಷಕರಾದ ಎಸ್ ವಿಜಯನರಸಿಂಹ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರ ಮರಳಿಕೆ ಅವಧಿ 8 ವರ್ಷಗಳಾಗಿದ್ದು, 5, 6 ಮತ್ತು 7ನೇ ವರ್ಷದಲ್ಲಿ ಅವಧಿ ಪೂರ್ಣ ಹಿಂಪಡೆಯಲು ಅವಕಾಶವಿದೆ. ಬಾಂಡ್ ಮೂಲಕ ತೊಡಗಿಸಿದ ಹಣಕ್ಕೆ ವಾರ್ಷಿಕ ಶೇಕಡಾ 2.5% ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ.
- Advertisement -
ಈ ಹೂಡಿಕೆಗೆ ಜಿ ಎಸ್ ಟಿ (GST) ಹೊರೆ ಇಲ್ಲ, ಟಿ ಡಿ ಎಸ್ (TDS) ಕಡಿತವಿಲ್ಲ. ಚಿನ್ನದ ಮೇಲಿನ ಹೂಡಿಕೆ ಯಾಗಿದ್ದರೂ , ಅಂಗಡಿಯಲ್ಲಿ ಚಿನ್ನದ ಖರೀದಿ ಮೇಲಿನ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ಇರುವುದಿಲ್ಲ.
- Advertisement -
ಕನಿಷ್ಠ 1 ಗ್ರಾಂ ದಿಂದ, 4೦೦೦ ಗ್ರಾಂ ವರೆಗೆ ಖರೀದಿಗೆ ಅವಕಾಶವಿದೆ. ಈ ಟ್ರೆಂಚೆಯಲ್ಲಿ ಪ್ರತಿ ಗ್ರಾಂ ಗೆ 5091/- ರೂಪಾಯಿ ನಿಗದಿ ಪಡಿಸಲಾಗಿದೆ.
ಹೂಡಿಕೆ ಮಾಡುವುದು ಹೇಗೆ :
ಸಮೀಪದ ಅಂಚೆ ಕಚೇರಿಗೆ ಬೇಟಿ ನೀಡಿ, ಪಾನ್ ಕಾರ್ಡ್, ವಿಳಾಸ ದಾಖಲೆ ಹಾಗೂ ಬ್ಯಾಂಕ್ ಪಾಸ್ ಬುಕ್ ನ ಮೊದಲ ಪುಟದ ಪ್ರತಿಯನ್ನು ಕೊಟ್ಟು, ಚಕ್ಕು,ಡಿಮ್ಯಾಂಡ್ ಡ್ರಾಫ್ಟ್, ಆನ್ ಲೈನ್ ಪೇಮೆಂಟ್ ಅಥವಾ ಉಳಿತಾಯ ಖಾತೆಯಿಂದ ಪೇಮೆಂಟ್ ಮಾಡುವುದರ ಮೂಲಕ ಗೋಲ್ಡ್ ಬಾಂಡ್ ನಲ್ಲಿ ಹೂಡಿಕೆ ಮಾಡಬಹುದಾಗಿದೆ.
- Advertisement -
ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಅಂಚೆ ಕಚೇರಿ ಅಥವಾ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಲು ಬೆಳಗಾವಿ ವಿಭಾಗಿಯ ಅಂಚೆ ಅಧೀಕ್ಷಕರಾದ ಎಸ್.ವಿಜಯನರಸಿಂಹ ಅವರು ಕೋರಿದ್ದಾರೆ.