ಕಸ ಸಮಸ್ಯೆ ನಿವಾರಣೆಗೆ ಹಲವು ಪ್ರಯತ್ನಗಳನ್ನು ಮಾಡುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಗೆ ಸ್ಮಾರ್ಟ್ ಸಿಟಿ ಕೈಜೋಡಿಸಿ ತ್ಯಾಜ್ಯವಿಲೇವಾರಿ ವಾಹನಗಳಿಗೆ ಜಿಪಿಎಸ್ ಅಳವಡಿಸಿದೆ.
ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಕಾಂಪ್ಯಾಕ್ಟರ್, ಟ್ರಕ್ ಹಾಗೂ ಆಟೋ ಟಿಪ್ಪರ್ ಗಳು ಇನ್ನು ಮುಂದೆ ಅಧಿಕಾರಿಗಳ ಕಣ್ಗಾವಲಿನಲ್ಲಿ ಇರಲಿದೆ. ಎಲ್ಲಿ ಕಸ ಸಂಗ್ರಹಿಸಿವೆ. ಎಲ್ಲಿ ವಿಲೇವಾರಿ ಮಾಡುತ್ತಿವೆ ಎಂಬ ಮಾಹಿತಿ ಕ್ಷಣಾರ್ಧದಲ್ಲಿ ತಿಳಿಯಲಿದೆ.
ಈಗಾಗಲೇ ಸ್ಮಾರ್ಟ್ ಸಿಟಿ ವತಿಯಿಂದ 138 ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಜಿಪಿಎಸ್ ಅಳವಡಿಕೆಯಿಂದ ಈ ವಾಹನಗಳ ಚಲನವಲನಗಳ ಮೇಲೆ ನಿಗಾ ವಹಿಸಲಾಗುತ್ತದೆ. ಹಾಗೂ ವಾಹನಗಳು ವ್ಯಾಪ್ತಿಯ ಹೊರ ಬಂದರೆ ಅಲರ್ಟ್ ಮೆಸೇಜ್ ಗಳು ಅಧಿಕಾರಿಗಳಿಗೆ ತಲುಪುತ್ತದೆ.
ಸ್ಮಾರ್ಟ್ ಸಿಟಿ ಇಂಜಿನಿಯರ್ ಗಳ ಪ್ರಕಾರ, 138 ವಾಹನಗಳ ಚಲನವಲನ ಗಲನ್ನು ಕಮಾಂಡ್ ಕಂಟ್ರೋಲ್ ಸೆಂಟರ್ (ICCC) ನ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ.
- Advertisement -
ಜಿಪಿಎಸ್ ಸಾಧನವು ನಿಲ್ಲಿಸಿದ ವಾಹನಗಳ ಸ್ಥಳ, ಚಾಲಕ ಸಾಗುವ ಮಾರ್ಗ, ವಾಹನದ ವೇಗ ಮುಂತಾದ ಮಾಹಿತಿಯನ್ನು ಒದಗಿಸುತ್ತದೆ. ವಾಹನವು ನಿಗದಿಪಡಿಸಿದ ಮಾರ್ಗ ದಿಂದ ಹೊರ ಹೋದರೆ, ಅದು ಮೇಲ್ವಿಚಾರಕರ ಕೊಠಡಿ ( ಕಮಾಂಡ್ ಕಂಟ್ರೋಲ್ ಸೆಂಟರ್) ಗೆ ಎಚ್ಚರಿಸುತ್ತದೆ. ಉಲ್ಲಂಘನೆ ಕಂಡುಬಂದಲ್ಲಿ ಪೆನಾಲ್ಟಿ ವಿಧಿಸಲಾಗುತ್ತದೆ. ಮತ್ತು ಗುತ್ತಿಗೆದಾರನ ಬಿಲ್ ನಿಂದ ನಿರ್ಧಿಷ್ಟ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ.
- Advertisement -
ಈ ವ್ಯವಸ್ಥೆಯು ಟ್ರಿಪ್ ನ ಸಾರಾಂಶ, ವೇಳಾಪಟ್ಟಿ ಗ್ರಾಫ್, ಮತ್ತು ಕೆಲಸದ ಸಮಯದ ಸಾರಂಶದಂತಹ ವಿವಿಧ ಸಾರಾಂಶವನ್ನು ಸಹ ಸೃಷ್ಟಿಸುತ್ತದೆ.
ನಗರದಲ್ಲಿ ಪ್ರತಿದಿನ ಅಂದಾಜು 240 ಟನ್ ನಷ್ಟು ಕಸ ವಿಲೇವಾರಿ ಮಾಡಲಾಗುತ್ತಿದೆ. ಬೆಳಗಾವಿ ಮಹಾನಗರ ಪಾಲಿಕೆಯು, ಮನೆ, ವಾಣಿಜ್ಯ ಸಂಕೀರ್ಣ, ಬೀದಿ ಕಸವನ್ನು ಸಂಗ್ರಹಿಸಿದ ಕಸವನ್ನು ತುರುಮುರಿ ಯಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕಳುಹಿಸುತ್ತದೆ.
ಕಸ ತಂದ ವಾಹನವು ತುರುಮೂರಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಪ್ರವೇಶಿಸುವ ಮೊದಲು ವಾಹನದ ತೂಕ, ಗಾಡಿ ಸಂಖ್ಯೆ, ಕಸದ ತೂಕ ಮಾಹಿತಿಯನ್ನು ಸಂಗ್ರಹಿಸಿ ಅಲ್ಲಿ ಅಳವಡಿಸಲಾದ ಸ್ಮಾರ್ಟ್ ಕ್ಯಾಮರಾ ಗಳು ಐಸಿಸಿಸಿ ಗೆ ಈ ಎಲ್ಲ ಮಾಹಿತಿ ಕಳುಹಿಸಿಕೊಡುತ್ತವೆ.
- Advertisement -
ಪ್ರಯೋಜನಗಳು –
* ಪರಿಣಾಮಕಾರಿ ವ್ಯಾಜ್ಯ ನಿರ್ವಹಣೆ
* ವಾಹನ ವೇಗ/ಬಳಕೆ ಮಾಹಿತಿ/ಇಂಧನ ಉಳಿತಾಯ
* ನೇರವಾಗಿ ಕಮಾಂಡ್ ಕಂಟ್ರೋಲ್ ಸೆಂಟರ್ ಗೆ ಮಾಹಿತಿ
* ವರ್ಧಿತ ವಾಹನ ಮತ್ತು ಚಾಲಕರ ಸುರಕ್ಷತೆ
* ಅಧಿಕಾವದಿ ಕಡಿಮೆಯಾಗುತ್ತದೆ.
* ಕಾರ್ಯಾಚರಣೆ ವೆಚ್ಚ ಕಡಿಮೆ
* ಚಾಲಕರ ಕಾರ್ಯಕ್ಷಮತೆ ಮೌಲ್ಯಮಾಪನ