ಸಂಜಯ ಘೋಡಾವತ ಸಂಸ್ಥೆ (Sanjay Ghodawat Group) ವತಿಯಿಂದ ಬೆಳಗಾವಿಯ ಕಿತ್ತೂರಿನಲ್ಲಿ ಆಹಾರ ಸಂಸ್ಕರಣಾ ಘಟಕ (Food Processing unit) ಸ್ಥಾಪನೆಯಾಗಲಿದೆ ಎಂದು ಕರ್ನಾಟಕ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ.
ಸಂಜಯ ಘೋಡಾವತ ಸಂಸ್ಥೆ ಕಿತ್ತೂರಿನಲ್ಲಿ ತೆರೆಯಲು ಉದ್ದೇಶಿಸಿರುವ ಆಹಾರ ಸಂಸ್ಕರಣಾ ಘಟಕ ನಿರ್ಮಾಣದಲ್ಲಿ ಕನಿಷ್ಟ 5000 ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಸಚಿವರು ತಿಳಿಸಿದರು.
ಬೆಳಗಾವಿಯ ಕನಗಲಾ ಇಂಡಸ್ಟ್ರಿಯಲ್ ಏರಿಯಾ (Kanagala Industrial Area) ದಲ್ಲಿ ಇಡೀ ದೇಶದಲ್ಲೇ ಅತಿ ದೊಡ್ಡ ಗ್ಲಾಸ್ ನಿರ್ಮಾಣ ಘಟಕ (Glass Manufacturing Unit) ವನ್ನು ಗೋಲ್ಡ್ ಪ್ಲಸ್ (Gold Plus) ಎಂಬ ಬೃಹತ್ ಕಂಪನಿಯಿಂದ ಕಾರ್ಯ ಆರಂಭವಾಗಿದ್ದು, ಶೀಘ್ರದಲ್ಲೇ ಇಲ್ಲಿಂದ ದೇಶದ ವಿವಿಧೆಡೆ ಗ್ಲಾಸ್ ಪೂರೈಕೆಯಾಗಲಿದೆ.
ಇದಲ್ಲದೇ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ (Kittur) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (International Airport) ಮಾಡಲು ಎಲ್ಲ ಸಿದ್ಧತೆ ನಡೆದಿದೆ. ಈಗಿರುವ ಬೆಳಗಾವಿ (Belagavi Airport) ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣ (Hubballi Airport) ಗಳನ್ನು ಪ್ರಾದೇಶಿಕ ವಿಮಾನ ನಿಲ್ದಾಣಗಳನ್ನಾಗಿ (Domestic Airport) ಮುಂದುವರೆಸಿ, ಈ ಎರಡೂ ನಗರಗಳ ಮಧ್ಯದಲ್ಲಿರುವ ಕಿತ್ತೂರಿನಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗುವುದು ಖಚಿತ, ಕಿತ್ತೂರಿನಲ್ಲಿ ಎಲ್ಲಾ ಅಭಿವೃದ್ಧಿಯಾದ ನಂತರ ಈ ಎರಡೂ ವಿಮಾನ ನಿಲ್ದಾಣಗಳನ್ನು ಕಿತ್ತೂರಿಗೆ ಶಿಫ್ಟ್ (Shift) ಮಾಡಲು ಉದ್ದೇಶಿಸಿದ್ದೇವೆ ಎಂದು ಸಚಿವರು ತಿಳಿಸಿದರು.
- Advertisement -
ಹಾಗೂ ಖಾನಾಪುರದ ಬಳಿ 1000 ಎಕರೆ ಜಾಗದಲ್ಲಿ ಇಂಡಸ್ಟ್ರಿಯಲ್ ಏರಿಯಾ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಚುನಾವಣಾ ಪ್ರಚಾರದ ಹಿನ್ನೆಲೆ ಬೆಳಗಾವಿಗೆ ಆಗಮಿಸಿರುವ ಸಚಿವರು ಖಾಸಗಿ ಹೋಟೆಲ್ ನಲ್ಲಿ ಈ ವಿಷಯದ ಕುರಿತು ಮಾಹಿತಿ ನೀಡಿದ್ದಾರೆ.
ಸೆಮಿಕಂಡಕ್ಟರ್ ಘಟಕ – ಇತ್ತೀಚೆಗೆ ಮೈಸೂರಿ (Mysuru) ನಲ್ಲಿ 22,000 ಕೋಟಿ ವೆಚ್ಚದಲ್ಲಿ ಸೆಮಿಕಂಡ್ಟರ್ ಘಟಕ (Semiconductor unit) ತೆರೆಯಲು ಖಾಸಗಿ ಕಂಪನಿಯೊಂದು ಸರ್ಕಾರದ ಜೊತೆ ಒಪ್ಪಂದ ಮಾಡಿದ್ದು ಒಳ್ಳೆಯ ಸುದ್ದಿ. ಮೊದಲಿಗೆ ಈ ಕಂಪನಿ ಬೆಂಗಳೂರಿನಲ್ಲೇ ಘಟಕ ಆರಂಭಿಸಲು ಉದ್ದೇಶಿಸಿತ್ತು, ಆದರೆ ಸರ್ಕಾರದ ಬಿಯೊಂಡ್ ಬೆಂಗಳೂರು (Beyond Bengaluru) ಯೋಜನೆಯಡಿ ಈ ಘಟಕವನ್ನು ಬೆಳಗಾವಿ (Belagavi) ಅಥವಾ ಕಲಬುರ್ಗಿ (Kalaburgi) ಯಲ್ಲಿ ಸ್ಥಾಪನೆ ಮಾಡಲು ಕಂಪನಿಗೆ ಮನವರಿಕೆ ಮಾಡಿತ್ತು, ಆದರೆ ಕೊನೆಗೆ ಕಂಪನಿ ಮೈಸೂರಿನಲ್ಲಿ ಘಟಕ ತೆರೆಯಲು ಒಲವು ತೋರಿದ ಕಾರಣ ಹಾಗೂ ಮೈಸೂರು ನಗರವು ಎರಡನೇ ಸ್ತರ (Tier-2 City) ದ ವಾಗಿದ್ದು, ಬೆಂಗಳೂರು (Bengaluru) ಬದಲು ಮೈಸೂರು ಸೂಕ್ತ ವಾಗಿರುವ ಹಿನ್ನೆಲೆ ಅನುಮೋದನೆ (Permitted) ನೀಡಿದ್ದೇವೆ ಎಂದು ಸಚಿವರು ತಿಳಿಸಿದರು.
ಚಿತ್ರ ಕೇವಲ ಕಾಲ್ಪನಿಕ | Image source: Parikh and Associates