ರಾಜಮೌಳಿ ನಿರ್ದೇಶನದಲ್ಲಿ ತಯಾರಾಗಿರುವ ಸಿನಿಮಾ ‘ಅರ್ ಆರ್ ಆರ್’ ಚಿತ್ರ ತುಂಬಾ ಅದ್ದೂರಿಯಾಗಿ ನಿರ್ಮಾಣವಾಗಿದ್ದು, ಚಿತ್ರದ ಟ್ರೈಲರ್, ಹಾಡುಗಳು ದೊಡ್ಡ ಹವಾ ಎಬ್ಬಿಸಿವೆ. ಕನ್ನಡ, ತೆಲುಗು, ಮಲಯಾಳಂ, ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿರುವ ಈ ಚಿತ್ರ ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್ ಭಾಷೆಗಳಿಗೆ ಡಬ್ ಆಗಲಿದೆ ಎಂಬುದು ವಿಶೇಷ.
ಜ್ಯೂ. ಎನ್ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್, ಸಮುದ್ರಖಣಿ ನಟನೆಯ ‘ಆರ್ಆರ್ಆರ್’ ಸಿನಿಮಾವು ಮಾರ್ಚ್ 25ರಂದು ವಿಶ್ವಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ. ಇನ್ನು, ಚಿತ್ರದ ಹಾಡೊಂದನ್ನು ಸೋಮವಾರ ಮಾ.14 ರಂದು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ.
‘ಎತ್ತುವ ಜಂಡಾ’ (ಕನ್ನಡ ದಲ್ಲಿ), ‘ಶೋಲೆ’ (ಹಿಂದಿ ಯಲ್ಲಿ), ಎಂಬ ವಿಶೇಷ ಹಾಡು ಕನ್ನಡ, ಹಿಂದಿ, ತಮಿಳ್, ತೆಲುಗು, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದ್ದು, ಹಲವು ವಿಶೇಷತೆಗಳನ್ನು ಹೊಂದಿದೆ.
ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ : ದೇಶದ ವೈವಿದ್ಯ ವಿಶಿಷ್ಟ ಜೊತೆಗೆ ಹೋರಾಟಗಾರರ ಇತಿಹಾಸವನ್ನು ಸಾರುವ ಗೀತೆ ಇದಾಗಿದ್ದು, ಇದರಲ್ಲಿ ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವ, ಸ್ವಾತಂತ್ರ್ಯಸ್ವಾಭಿಮಾನಗಳ ಸಾಕಾರಮೂರ್ತಿ ಬೆಳಗಾವಿಯ ಕಿತ್ತೂರಿನ ರಾಣಿ ಚೆನ್ನಮ್ಮ ಳ ಹೋರಾಟದ ಕಿಚ್ಚನ್ನು ಹಾಡಿನ ಲಿರಿಕ್ಸ್ ನಲ್ಲಿ ಇಡೀ ಜಗತ್ತಿಗೆ ತಿಳಿಸುವ ಮೂಲಕ ಹೋರಾಟಗಾರ್ತಿ ಗೆ ಗೌರವ ಅರ್ಪಿಸಿ ಕನ್ನಡಿಗರ ಮನಗೆದ್ದಿದೆ ಚಿತ್ರತಂಡ.
- Advertisement -
ನಟಿ ಆಲಿಯ ಭಟ್, ಚೆನ್ನಮ್ಮಳ ಕತ್ತಿ ಹಿಡಿದು ‘ ಕತ್ತಿಯಂತ ಹೋರಿ, ಕಿತ್ತೂರು ಹೋರಿ’ ಎಂದು ಚೆನ್ನಮ್ಮಳ ಕತ್ತಿ ಹೋರಾಟದ ಬಗ್ಗೆ ಹಾಡಿನಲ್ಲಿ ಚಿಕ್ಕದಾಗಿ ವರ್ಣಿಸಿದ್ದಾರೆ.
- Advertisement -
ಹೌದು, ಕಿತ್ತೂರು ರಾಣಿ ಚೆನ್ನಮ್ಮ ಸೇರಿ ಸುಭಾಷ್ ಚಂದ್ರಬೋಸ್, ಸರದಾರ್ ವಲ್ಲಭಾಯ್ ಪಟೇಲ್, ಭಗತ್ ಸಿಂಗ್, ರಾಣಿ ಲಕ್ಷ್ಮೀ ಬಾಯಿ, ಛತ್ರಪತಿ ಶಿವಾಜಿ ಮಹಾರಾಜ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಅರ್ಪಿಸಿದೆ ರಾಜಮೌಳಿ ಟೀಮ್.
ಈ ಹಾಡು ಕೇವಲ ಎರಡೇ ದಿನದಲ್ಲಿ 6 ಮಿಲಿಯನ್ ಗೂ ಹೆಚ್ಚು ವೀವ್ ಪಡೆದು ಟಾಪ್ ಟ್ರೆಂಡಿಂಗ್ ಸಾಂಗ್ಸ್ ಪಟ್ಟಿ ಸೇರಿದೆ.
‘ಆರ್ಆರ್ಆರ್’ ಚಿತ್ರದ ಎಲ್ಲಾ ಭಾಷೆಗಳ ಡಿಜಿಟಲ್ ಹಾಗೂ ಸ್ಯಾಟೆಲೈಟ್ ಹಕ್ಕುಗಳು ಬರೋಬ್ಬರಿ 325 ಕೋಟಿ ರೂಪಾಯಿಗೆ ಜೀ5 ಮತ್ತು ನೆಟ್ಫ್ಲಿಕ್ಸ್ ಪಡೆದುಕೊಂಡಿವೆ.