Tuesday, October 26, 2021
HomeLatest Newsಕಿತ್ತೂರ ಕೊಟೆಯ ಆವರಣದಲ್ಲಿ ರಾಣಿ ಚನ್ನಮ್ಮನ ಅರಮನೆಯ ಪ್ರತಿರೂಪದ ಕಟ್ಟಡ - ಪೂರ್ವಭಾವಿ ಸಭೆ

ಕಿತ್ತೂರ ಕೊಟೆಯ ಆವರಣದಲ್ಲಿ ರಾಣಿ ಚನ್ನಮ್ಮನ ಅರಮನೆಯ ಪ್ರತಿರೂಪದ ಕಟ್ಟಡ – ಪೂರ್ವಭಾವಿ ಸಭೆ

ಜುಲೈ ೦೨ ರಂದು ರಾಣಿ ಚನ್ನಮ್ಮ ವಿಶ್ವವಿಧ್ಯಾಲಯ ಬೆಳಗಾವಿ ಅಧ್ಯಯನ ಪೀಠದಿಂದ ಇತಿಹಾಸ ತಜ್ಞರು, ಹಿರಿಯ ಸಾಹಿತಿಗಳು ಹಾಗೂ ಸಂಶೋಧಕರನ್ನು ಒಳಗೊಂಡ ತಜ್ಞರ ಸಮಿತಿಯೊಂದಿಗೆ ಶ್ರೀ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸಭಾಂಗಣದಲ್ಲಿ ರಾಣಿ ಚನ್ನಮ್ಮಳ ಅರಮನೆಯ ಸಮಕಾಲಿನ ಪ್ರತಿರೂಪವನ್ನು ನಿರ್ಮಿಸಲು ಚರ್ಚಿಸಲು ಪೂರ್ವಭಾವಿ ಸಭೆಯಯನ್ನು ಆಯೋಜಿಸಲಾಯಿತು

ಈ ಸಭೆಯಲ್ಲಿ ಶ್ರೀ ಮಹಾಂತೇಶ ಬ ದೊಡ್ಡಗೌಡರ ಶಾಸಕರು, ಕಿತ್ತೂರು ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇತಿಹಾಸ ತಜ್ಞರು ನೀಡಿದ ಸಲಹೆಗಳನ್ನು ಗಮನದಲ್ಲಿ ಇಟ್ಟುಕೊಂಡು ಅರಮನೆಯ ನೀಲನಕ್ಷೆಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಇಂತಹ ಯೋಜನೆಯ ಒಂದು ಭಾಗವಾಗಿ ಮುಂದಿನ ಪೀಳಿಗೆಗೆ ರಾಣಿ ಚನ್ನಮ್ಮಳ ಇತಿಹಾಸವನ್ನು ತಿಳಿಸಲು ಹಾಗೂ ಪ್ರವಾಸಿಗರನ್ನು ಆಕರ್ಶಿಸುವ ದೃಷ್ಟಿಯಿಂದ ಕಿತ್ತೂರ ಕೋಟೆ ಆವರಣದಲ್ಲಿ ಚನ್ನಮ್ಮನ ಅರಮನೆಯನ್ನು ಪುನರ್‌ ನಿರ್ಮಿಸಲು ಉದ್ದೇಶಿಸಲಾಗಿದೆ ಹಾಗೂ ಪ್ರಾಧಿಕಾರದ ಸಭೆಯನ್ನು ದಿನಾಂಕ:06/07/2021 ರಂದು ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಕರೆದಿರುವ ಬಗ್ಗೆ ಮಾಹಿತಿ ನೀಡಿದರು.

ಶ್ರೀ ಮ.ನಿ.ಪ್ರಸ್ವಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ರಾಜಗುರು ಕಲಠ, ಕಿತ್ತೂರು ಸಂಸ್ಥಾನ, ಕಿತ್ತೂರು ಇವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಕಿತ್ತೂರಿನಲ್ಲಿ ಇತಿಹಾಸದ ವೈಭವ ಮರುಕಳಿಸಲು ಸರ್ಕಾರದಿಂದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ತಿಳಿಸಿದರು

ಇತಿಹಾಸ ತಜ್ಞರಾದ ಡಾ.ಅಮರೀಶ ಯಾತಗಲ್, ಪ್ರೋ ಸಿತಾ ಸುರೇಬಾನಕರ್, ಡಾ.ಅಪ್ಪಣ್ಣ ವಗ್ಗರ, ಪ್ರೋ. ಆರ್.ಎಂ.ಷಡಕ್ಷರಯ್ಯ, ಮಹೇಶ ಚನ್ನಂಗಿ, ಯ.ರು.ಪಾಟೀಲ ಭಾಗವಹಿಸಿ, ಕಿತ್ತೂರು ಚನ್ನಮ್ಮ ರಾಣಿಯ ಸಮಕಾಲಿನ ಆರಮನೆಯ ರೂಪರೇಷಗಳ ಬಗ್ಗೆ ತಮ್ಮ ಅಧ್ಯಯನದಿಂದ ತಿಳಿದುಕೊಂಡ ವಿಚಾರಗಳನ್ನು ಸಭೆಗೆ ಮಂಡಿಸಿದರು ಹಾಗೂ ಉದ್ದೇಶಿತ ಆರಮನೆ ಕಟ್ಟಡ ಸಮಕಾಲಿನ ಸಾಂಸ್ಕೃತಿಕ ವಿನ್ಯಾಸ ಹೊಂದಿರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀ ‘ಆಶೋಕ ದುಡಗುಂಟೆ ಅಪರ ಜಿಲ್ಲಾಧಿಕಾರಿ ಬೆಳಗಾವಿ, ಶ್ರೀ ಶಶಿಧರ ಬಗಲಿ ಉಪವಿಭಾಗಾಧಿಕಾರಿ ಬೈಲಹೊಂಗಲ, ಶ್ರೀ ಸೋಮಲಿಂಗಪ್ಪ ಹಾಲಗಿ ತಹಶೀಲ್ದಾರ ಕಿತ್ತೂರು, ಪ್ರಾಧಿಕಾರದ ಅಧಿಕಾರೇತರ ಸದಸ್ಯರಾದ ಶ್ರೀ ರಾಮಪ್ಪ ಯಲ್ಲಪ್ಪ ಪರವಣ್ಣವರ, ಚಿನ್ನಪ್ಪ ಮುತ್ನಾಳ, ಶ್ರೀ ಉಳವಪ್ಪ ಉಳ್ಳೇಗಡ್ಡಿ ಸಭೆಯಲ್ಲಿ ಹಾಜರಿದ್ದರು.

ಡಾ.ಎಸ್‌.ಎಂ.ಗಂಗಾಧರಯ್ಯ ಇವರು ಸ್ವಾಗತಿಸಿದರು. ಮತ್ತು ಶ್ರೀಮತಿ ಶೋಭಾ ನಾಯಕ ಇವರು ವಂದನಾರ್ಪಣೆ ಮಾಡಿದರು.

RELATED ARTICLES
- Advertisment -