ಬೆಳಗಾವಿ (Belagavi) ಯ ಅಶೋಕ ನಗರದಲ್ಲಿ ಈಗಿರುವ ಇ.ಎಸ್.ಐ (ESI) ಆಸ್ಪತ್ರೆಗೆ ಶಿಥಿಲಗೊಂಡಿರುವ ಕಾರಣ ಬೆಳಗಾವಿಯಲ್ಲಿ ಹೊಸ ಇ.ಎಸ್.ಐ ಆಸ್ಪತ್ರೆ ನಿರ್ಮಿಸಲು ಇಲ್ಲಿನ ಜನಪ್ರತಿನಿಧಿಗಳ ಬೇಡಿಕೆಯಂತೆ ಕೇಂದ್ರ ಸರ್ಕಾರ ಒಪ್ಪಿದೆ.
ಆದರೆ, ಈ ಆಸ್ಪತ್ರೆಯ ನಿರ್ವಹಣೆಯನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿದೆಯೇ ಅಥವಾ ರಾಜ್ಯ ಸರ್ಕಾರ ತೆಗೆದುಕೊಳ್ಳಲಿದೆಯೇ ಎಂಬ ಪ್ರಶ್ನೆ ಮೂಡಿದೆ.
ಆರ್.ಟಿ.ಐ (RTI) ಅಡಿಯಲ್ಲಿ ಈ ಪ್ರಶ್ನೆಗೆ ಉತ್ತರಿಸಿದ ಕಾರ್ಮಿಕರ ರಾಜ್ಯ ವಿಮಾ ನಿಗಮದ ಪ್ರಾದೇಶಿಕ ಕಚೇರಿ, ಬೆಂಗಳೂರು, ಬೆಳಗಾವಿಯ ಉದ್ಯಮಬಾಗ್ (Udyambag) ಪ್ರದೇಶದಲ್ಲಿ 100 ಬೆಡ್ ಗಳ ಇಎಸ್‌ಐಎಸ್ (ESIS) ಆಸ್ಪತ್ರೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದಿಂದ ಒಪ್ಪಿಗೆ ಕೋರಲಾಗಿದೆ ಎಂದು ತಿಳಿದಿದೆ.
ಎನ್ ಐ ಟಿ ತಿರುಚಿರಾಪಲ್ಲಿ (NIT Tiruchirapalli) ರಚನಾತ್ಮಕ ಲೆಕ್ಕಪರಿಶೋಧನೆಯ ವರದಿ (Report) ಯ ಪ್ರಕಾರ, ಅಶೋಕನಗರ ಬೆಳಗಾವಿಯಲ್ಲಿ ಅಸ್ತಿತ್ವದಲ್ಲಿರುವ ಆಸ್ಪತ್ರೆ ಕಟ್ಟಡವು ಶಿಥಿಲಗೊಂಡಿರುವುದರಿಂದ ಉದ್ಯಮಬಾಗ್ ದಲ್ಲಿ ಹೊಸ ಆಸ್ಪತ್ರೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದಿಂದ ಒಪ್ಪಿಗೆ ಕೋರಲಾಗಿದೆ.
- Advertisement -
ಇತ್ತೀಚೆಗೆ ಬೆಳಗಾವಿಯ ಇ.ಎಸ್.ಐ ಉದ್ಯೋಗಿಯೊಬ್ಬರು ಬೆಳಗಾವಿಯಲ್ಲಿ ಇ.ಎಸ್.ಐ.ಸಿ (ESIC) ಆಸ್ಪತ್ರೆಗೆ ಬೆಳಗಾವಿಯ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ (Iranna Kadadi) ಹಾಗೂ ಶಾಸಕರಾದ ಅಭಯ್ ಪಾಟೀಲ್ (Abhay Patil) ಅವರನ್ನು ಬೇಟಿ ಮಾಡಿ ಒತ್ತಾಯ ಮಾಡಿದ್ದರು. ಇದೇ ವಿಷಯವಾಗಿ ಪ್ರತಿಕ್ರಿಯಿಸಿದ ಈರಣ್ಣ ಕಡಾಡಿ ಅವರು ಹಾಗೂ ಅಭಯ್ ಪಾಟೀಲ್ ಅವರು ನಾವು ಕೇಂದ್ರಕ್ಕೆ ಇ.ಎಸ್.ಐ.ಸಿ (ESIC) ಆಸ್ಪತ್ರೆಯನ್ನೇ ಕೇಳಿದ್ದೇವೆ ಎಂದು ತಿಳಿಸಿದ್ದಾರೆ.
ಬೆಳಗಾವಿಗೆ ಇ.ಎಸ್.ಐ.ಸಿ ಆಸ್ಪತ್ರೆ ದೊರೆತಲ್ಲಿ ಕೇಂದ್ರ ಸರ್ಕಾರದವು ಈ ಆಸ್ಪತ್ರೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಆದರೆ ಅರ್ ಟಿ ಐ ಅಡಿಯ ಮಾಹಿತಿಯ ಪ್ರಕಾರ ಇ.ಎಸ್.ಐ.ಎಸ್ (ESIS) ಅಸ್ಪತೆಗೆ ರಾಜ್ಯ ಸರ್ಕಾರ ಕೋರಿದೆ ಎಂದು ತಿಳಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.