ಬೆಳಗಾವಿ ಮಹಾನಗರ ಪಾಲಿಕೆಯ (Belagavi City Corporation) ಮಾಲ್ಕಿಯ ವಿವಿಧ ಪ್ರದೇಶಗಳ ವಾಣಿಜ್ಯ ಸಂಕೀರ್ಣ (Commercial property) ಗಳಲ್ಲಿಯ ಅಂಗಡಿಗಳನ್ನು ಮಾಸಿಕ ಬಾಡಿಗೆಯ ಮೇಲೆ 12 ವರ್ಷಗಳ ಅವಧಿಗೆ ಕೊಡಲು ನಿರ್ಧರಿಸಲಾಗಿದ್ದು, ಹರಾಜಿನಲ್ಲಿ (Bidding) ಭಾಗವಹಿಸುವವರು ನಿಗಧಿತ ಸ್ಥಳದಲ್ಲಿ ಹರಾಜಿನ ದಿನ ಮುಂಜಾನೆ 10.30 ಗಂಟೆಯಿಂದ 12.30 ಗಂಟೆಯವರೆಗೆ ಕಾಲಂ ನಂ. 5 ರಲ್ಲಿ ನಮೂದಿಸಿದಂತೆ ಠೇವಣಿ (Deposit) ಹಣವನ್ನು ನಗದು ರೂಪದಲ್ಲಿ ಅಥವಾ ಡಿ.ಡಿ.ಯನ್ನು (ಆಯುಕ್ತರು, ಮಹಾನಗರ ಪಾಲಿಕೆ ಬೆಳಗಾವಿ ಇವರ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಪಡೆದು) ಭರಿಸಿ ಬಹಿರಂಗ ಹರಾಜಿನಲ್ಲಿ ಭಾಗವಹಿಸಬಹುದು.


12.30 ಗಂಟೆಯವರೆಗೆ ಠೇವಣಿ ಭರಿಸಲು ಹಾಜರಿರುವ ಸಾರ್ವಜನಿಕರಿಗೆ ಟೋಕನ್ ನೀಡಿ ಠೇವಣಿ ಭರಿಸಲು ಅವಕಾಶ ಮಾಡಿಕೊಡಲಾಗುವುದು. ಮಧ್ಯಾಹ್ನ 12.30 ಗಂಟೆ ನಂತರ ಹರಾಜು ಪ್ರಕ್ರಿಯೆ ಪ್ರಾರಂಭವಾಗುವುದು.ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ 18% ಹಂಚಿಕೆ ಮಾಡುವ ಷರತ್ತಿಗೊಳಪಟ್ಟಿದೆ (ದೃಢೀಕೃತ ಪ್ರಮಾಣ ಪತ್ರಗಳನ್ನು ಹಾಜರುಪಡಿಸಿದ್ದಲ್ಲಿ) ಹಾಗೂ ಇತರ ಷರತ್ತುಗಳನ್ನು ಈ ಪ್ರಕಟಣೆಯೊಂದಿಗೆ ಲಗತ್ತಿಸಿದೆ.
ಬೆಳಗಾವಿ ಮಹಾನಗರ ಪಾಲಿಕೆಯ ಮಾಲ್ಕಿಯ ವಿವಿಧ ಸ್ಥಳಗಳಲ್ಲಿಯ ವಾಣಿಜ್ಯ ಮಳಿಗೆಗಳ ಈ ಕೆಳಕಂಡ ಅಂಗಡಿ ಬ್ಲಾಕ್ಗಳನ್ನು ಮಾಸಿಕ ಬಾಡಿಗೆಯ ಮೇಲೆ 12 ವರ್ಷಗಳ ಅವಧಿಗೆ ಕೊಡುವ ಕುರಿತು ದಿನಾಂಕ:07-12-2022 ರಿಂದ 16-12-2022 ರವರೆಗೆ ನಡೆಯುವ ಬಹಿರಂಗ ಹರಾಜಿನ ಕರಾರುಗಳು.
ಕರಾರುಗಳು:
- Advertisement -
- ಹರಾಜಿನಲ್ಲಿ ಭಾಗವಹಿಸುವವರು ಅಂಗಡಿಯ ಠೇವಣಿ ಮೊತ್ತದ ಬಿ, ಡಿ. ಯನ್ನು ಆಯುಕ್ತರು, ಮಹಾನಗರ ಪಾಲಿಕೆ ಬೆಳಗಾವಿ ಇವರ ಹೆಸರಿನಲ್ಲಿ ಪಡೆದು ಹರಾಜಿನ ಕಾಲಕ್ಕೆ ಹಾಜರಪಡಿಸತಕ್ಕದ್ದು ಅಥವಾ ಹರಾಜಿನ ಸ್ಥಳದಲ್ಲಿ ರೋಖ ರಕಂ ಭರಿಸಿ ಹರಾಜಿನಲ್ಲಿ ಭಾಗವಹಿಸಬಹುದು. ಹರಾಜಿನಲ್ಲಿ ಅಂಗಡಿ ಪಡೆದವರ ಠೇವಣಿಯನ್ನು, ಅಂಗಡಿ: ಮಹಾನಗರ ಪಾಲಿಕೆಗೆ ಮರಳಿ ಬಿಟ್ಟುಕೊಟ್ಟ ನಂತರ ಯಾವುದೇ ತರಹದ ಬಡ್ಡಿ ಇಲ್ಲದೇ ಹಿಂತಿರುಗಿಸಲಾಗುವುದು. ಹರಾಜಿನಲ್ಲಿ ಅಂಗಡಿ ಪಡೆಯದವರ ಡಿ.ಡಿ./ಲೋಖ ರಕಂ ನ್ನು ಹರಾಜು ಮುಗಿದ ತಕ್ಷಣ ಹಿಂತಿರುಗಿಸಲಾಗುವುದು.
- ಅಂಗಡಿ/ಮಳಿಗೆಯ ಪ್ರತಿ ತಿಂಗಳ ಕನಿಷ್ಠ ಬಾಡಿಗೆ ರೂ. 5,000/- ಕ್ಕಿಂತ ಕಡಿಮೆ ಇದ್ದಲ್ಲಿ ಬಿಡ್ದಾರರು ಪ್ರತಿ ಬಿಡ್ಗೆ ಕನಿಷ್ಠ ರೂ. 200/- ಗಳನ್ನು ಹೆಚ್ಚಿಸಿ ಬಿಡ್ ಸಲ್ಲಿಸತಕ್ಕದ್ದು ಹಾಗೂ ಪ್ರತಿ ತಿಂಗಳ ಕನಿಷ್ಠ ಬಾಡಿಗೆ ರೂ. 5,000/- ಹಾಗೂ ಅದಕ್ಕಿಂತ ಮೇಲ್ಪಟ್ಟು ಇದ್ದಲ್ಲಿ ಬಿಡ್ದಾರರು ಪ್ರತಿ ಬಿಡ್ಗೆ ಕನಿಷ್ಠ ರೂ. 500/- ಗಳನ್ನು ಹೆಚ್ಚಿಸಿ ಬಿಡ್ ಸಲ್ಲಿಸತಕ್ಕದ್ದು, ಪ್ರತಿಯೊಂದು ಮಳಿಗೆಗೆ ಮೂರು ಜನ ಬಾಡಿಗೆದಾರರು ಬಿಡ್ ಸಲ್ಲಿಸಿದಲ್ಲಿ ಮಾತ್ರ ಮಳಿಗೆಯನ್ನು ಹರಾಜು ಮಾಡಲಾಗುವುದು. ಒಂದು ವೇಳೆ ಮೂರು ಜನಕ್ಕಿಂತ ಕಡಿಮೆ ಜನ ಬಿಡ್ ಸಲ್ಲಿಸಿದಲ್ಲಿ ಮಂಜೂರು ಅಥವಾ ರದ್ದುಪಡಿಸುವ ಅಧಿಕಾರ ನಿರ್ಣಯ ಆಯುಕ್ತರದ್ದಾಗಿರುತ್ತದೆ.
- ಹಾಲಿ ಇರುವ ವಾಣಿಜ್ಯ ಸಂಕೀರ್ಣದ ಬಾಡಿಗೆದಾರರು ಮೊದಲು ಸಾಮಾನ್ಯ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಥವಾ Right of First Refusal ನ್ನು ಆಯ್ಕೆ ಮಾಡಿಕೊಳ್ಳುವ ಸಂಬಂಧ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಂಡು ಈ ಬಗ್ಗೆ ಲಿಖಿತವಾಗಿ ಪಾಲಿಕೆಗೆ ಹರಾಜು ದಿನಾಂಕಕ್ಕೆ ಒಂದು ವಾರ ಮುಂಚಿತವಾಗಿ ತಿಳಿಯಪಡಿಸತಕ್ಕದ್ದು. ನಿಗದಿತ ದಿನಾಂಕದೊಳಗೆ ಲಿಖಿತವಾಗಿ ತಿಳಿಸದಿದ್ದಲ್ಲಿ ಅಂತಹ ಬಾಡಿಗೆದಾರರು Right of First Refusal ನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ. ಹಾಗೂ ಅಂತಹ ಬಾಡಿಗೆದಾರರು ಸಾಮಾನ್ಯ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆಂದು ಪರಿಗಣಿಸಲಾಗುವುದು. ಒಂದು ವೇಳೆ ಹಾಲಿ ಇರುವ ವಾಣಿಜ್ಯ ಸಂಕೀರ್ಣದ ಬಾಡಿಗೆದಾರರು Right of First Refusal ನ್ನು ಆಯ್ಕೆ ಮಾಡಿಕೊಂಡಲ್ಲಿ ಅಂತಹ ಬಾಡಿಗೆದಾರರಿಗೆ ಸಾಮಾನ್ಯ ಹರಾಜು ಪ್ರಕ್ರಿಯೆಯಲ್ಲಿ ಅಂತಿಮ ಬಿಡ್ ಮೊತ್ತಕ್ಕೆ Right of First Refusal ರಂತೆ ಶೇ. 5 ರಷ್ಟು ಹೆಚ್ಚಿಗೆ ನಿಗದಿಪಡಿಸಿ ಮಳಿಗೆ ಬಾಡಿಗೆಗೆ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗುವುದು. ಸದರಿ ಬಿಡ್ ಮೊತ್ತಕ್ಕೆ ಶೇ. 5 ರಷ್ಟು ಹೆಚ್ಚಿಗೆ ನಿಗದಿಪಡಿಸಿದ ಬಿಡ್ ಮೊತ್ತವನ್ನು ಪಾವತಿಸಿ ಅಂಗಡಿ ಬಾಡಿಗೆ ಪಡೆಯಲು ಹಾಲಿ ಇರುವ ವಾಣಿಜ್ಯ ಸಂಕೀರ್ಣದ ಬಾಡಿಗೆದಾರರು ಒಪ್ಪದಿದ್ದಲ್ಲಿ ಸಾಮಾನ್ಯ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಯಶಸ್ವಿಯಾದ ಅಂತಿಮ ಬಿಡ್ ದಾರರಿಗೆ ಮಳಿಗೆಯನ್ನು ನೀಡಲಾಗುವುದು.
- ಹರಾಜಿನಲ್ಲಿ ಭಾಗವಹಿಸಿ ಅಂಗಡಿಯನ್ನು ಪಡೆದವರು 4 ತಿಂಗಳ ಮುಂಗಡ ಬಾಡಿಗೆ ಮೊತ್ತವನ್ನು ಈ ಕಾರ್ಯಾಲಯದ ನೋಟೀಸ್ ಮುಟ್ಟಿದ ದಿನಗಳಲ್ಲಿ ಭರಿಸಿತಕ್ಕದ್ದು, ತಪ್ಪಿದಲ್ಲಿ ಹರಾಜಿನ ಕಾಲಕ್ಕೆ ಪಡೆದ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡು ಪುನ: ಹರಾಜು ಏರ್ಪಡಿಸಲಾಗುವುದು. ಗುತ್ತಿಗೆ ಅವಧಿಯು 12 ವರ್ಷ ಮಾತ್ರ ಇರುತ್ತದೆ.
- ಪ್ರತಿ ತಿಂಗಳಿಗೆ ನಿಗಧಿಪಡಿಸಿರುವ ಕನಿಷ್ಠ ಬಾಡಿಗೆ ಮತ್ತು ಜಿ.ಎಸ್.ಟಿ. ಶುಲ್ಕವನ್ನು ಮುಂದಿನ ತಿಂಗಳ 10 ನೇ ತಾರೀಖಿನೊಳಗಾಗಿ ಸಂದಾಯ ಮಾಡತಕ್ಕದ್ದು. ತಪ್ಪಿದಲ್ಲಿ ಮಾಸಿಕ ಬಾಡಿಗೆ ಮೊತ್ತಕ್ಕೆ ಶೇ. 2 ರಂತೆ ಪ್ರತಿ ಮಾಹೆ ದಂಡ ವಸೂಲಿ ಮಾಡಲಾಗುವುದು.
- ಒಂದು ವೇಳೆ ಬಾಡಿಗೆಯನ್ನು ನಿರಂತರವಾಗಿ 6 ತಿಂಗಳುಗಳ ಕಾಲ ಪಾವತಿಸದಿದ್ದಲ್ಲಿ ಲೀಜನ್ನು ನಜ ಮಾಡಲಾಗುವುದು ಹಾಗೂ ಠೇವಣಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
- ಗುತ್ತಿಗೆದಾರರು ಬಾಡಿಗೆಯಿಂದ ಪಡೆದ ಅಂಗಡಿಯಲ್ಲಿ ಯಾವುದೇ ರೀತಿಯ ನಿರ್ಮಾಣ ಅಥವಾ ರಿಪೇರಿ ಕೆಲಸವನ್ನು ಮಹಾನಗರ ಪಾಲಿಕೆಯ ಪೂರ್ವ ಪರವಾನಿಗೆ ಇಲ್ಲದೇ ಮಾಡತಕ್ಕದ್ದಲ್ಲ. ಒಂದು ವೇಳೆ ಮಾಡಿದಲ್ಲಿ ನಿಮಗೆ ನೀಡಿದ ಲೀಜ ಗುತ್ತಿಗೆಯನ್ನು ಯಾವುದೇ ಮುನ್ಸೂಚನೆ ನೀಡದೇ ರದ್ದುಪಡಿಸಿ ಅಂಗಡಿಯ ಕಟ್ಟೆಯನ್ನು ಮರಳಿ ಪಡೆಯಲಾಗುವುದು.
- ಒಂದು ವೇಳೆ ಗುತ್ತಿಗೆದಾರರು ಮಳಿಗೆಯನ್ನು ಮರು ಗುತ್ತಿಗೆಗೆ ನೀಡಿದಲ್ಲಿ ಕರಾರು ಪತ್ರವನ್ನು ವಜಾ ಮಾಡಿ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
- ಕಟ್ಟಡದ ವಿದ್ಯುತ್ ಮೀಟರ್ ಹಾಗೂ ನೀರಿನ ನಳದ ಜೋಡಣೆಯನ್ನು ಮಹಾನಗರ ಪಾಲಿಕೆಯಿಂದ ಅನುಮತಿ ಪಡೆದು ತಮ್ಮ ಸ್ವಂತ ಖರ್ಚಿನಲ್ಲಿ ಅಳವಡಿಸತಕ್ಕದ್ದು ಹಾಗೂ ಸದರಿ ವಿದ್ಯುತ್ ಬಿಲ್ ಮತ್ತು ನೀರಿನ ಬಿಲ್ನ್ನು ಬಾಡಿಗೆದಾರರೇ ಭರಿಸತಕ್ಕದ್ದು,
- ಕಟ್ಟಡದ ವಿಮೆಯನ್ನು ಬಾಡಿಗೆದಾರರು ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿಕೊಳ್ಳತಕ್ಕದ್ದು.
- ಲೇಜಗೆ ಪಡೆದ ಕಟ್ಟಡವನ್ನು ಪಡೆದ ಉದ್ದೇಶಕ್ಕೆ ಮಾತ್ರ ಬಳಸತಕ್ಕದ್ದು, ಅದರನ್ವಯ ನಡೆಸುವ ವ್ಯವಹಾರಗಳಿಗೆ ಸಂಬಂಧಿತ ಇಲಾಖೆಯಿಂದ ಪರವಾನಿಗೆ ಪಡೆಯತಕ್ಕದ್ದು,
- ಮಾಸಿಕ ಬಾಡಿಗೆ ಪ್ರತಿ ಮೂರು (3) ವರ್ಷಕ್ಕೆ ಶೇ. 10 ರಷ್ಟು ಹೆಚ್ಚಿಸಲಾಗುವುದು,
- ಯಶಸ್ವಿ ಬಿಡ್ದಾರರು ತಮ್ಮ ಮಾಲೀಕತ್ವದ ಆಸ್ತಿ ದಾಖಲೆಯ ಒಂದು ದೃಢೀಕೃತ ನಕಲು ಪ್ರತಿ ಹಾಗೂ ಆಧಾರ ಕಾರ್ಡ ಹಾಜರುಪಡಿಸತಕ್ಕದ್ದು,
- ಸದರಿ ಅಂಗಡಿಗಳನ್ನು ಪ್ರಸ್ತುತ ಇರುವ ಸ್ಥಿತಿಯಲ್ಲಿಯೇ ಯಶಸ್ವಿ ಬಿಡ್ದಾರರಿಗೆ ಹಸ್ತಾಂತರಿಸಲಾಗುವುದು.
- ಇತರೆ ಶಾಸನಬದ್ಧ ನಿಯಮಗಳನ್ನು ಹಾಗೂ ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ಆದೇಶ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.
- ಎಲ್ಲಾ ಷರತ್ತುಗಳಿಗೆ ಒಪ್ಪಿ ಕರ್ನಾಟಕ ಸ್ಟಾಂಮ ಅಧಿನಿಯಮ, 1957 ರ ಅನುಚ್ಛೇದ ಸಂಖ್ಯೆ. 30(II) ರ ಪ್ರಕಾರ ನೋಂದಣಿ ಮುದ್ರಾಂಕ ಶುಲ್ಕವನ್ನು ಬೇಡದಾರರೇ ಭರಿಸಿ ಕರಾರು ಪತ್ರವನ್ನು ಸಲ್ಲಿಸತಕ್ಕದ್ದು,
- ಬಹಿರಂಗ ಹರಾಜಿನಲ್ಲಿ ಸಾರ್ವಜನಿಕರು ಛಾಯಾ ಚಿತ್ರ ಹಾಗೂ ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ.
- ಹರಾಜನ್ನು ಮಂಜೂರು ಮಾಡುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ಆಯುಕ್ತರು, ಮಹಾನಗರ ಪಾಲಿಕೆ ಬೆಳಗಾವಿ ಇವರು ಹೊಂದಿರುತ್ತಾರೆ.
- ಯಾವುದೇ ಕಾರಣಕ್ಕೂ ಬಹಿರಂಗ ಹರಾಜನ್ನು ಮುಂದೂಡುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ಆಯುಕ್ತರು, ಮಹಾನಗರ ಪಾಲಿಕೆ ಬೆಳಗಾವಿ ಇವರು ಹೊಂದಿರುತ್ತಾರೆ.
Also Read : Belagavi City Corporation hikes shop rent