ವಾ.ಕ.ರ.ಸಾ.ಸಂ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಹೆಚ್ಚುವರಿ ಬಸ್ ಗಳ ಕಾರ್ಯಾಚರಣೆ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಚರಣೆಗೊಳಿಸಲಾಗುತ್ತಿದೆ.

ದಿನಾಂಕ: 31.10.2021 ಭಾನುವಾರ, ನವಂಬರ್-01.ರಂದು ಕನ್ನಡ ರಾಜ್ಯೋತ್ಸವ 03.11.2021ರಂದು ನರಕ ಚತುರ್ದಶಿ 05.11.2021 ಬಲಿಪಾಡ್ಯ ಮತ್ತು 07.11.2021 ರಂದು ಭಾನುವಾರ ಇರುವ ಹಬ್ಬದ ರಜೆಗಳನ್ನು ಉಪಯೋಗಿಸಿಕೊಂಡು ದೀಪಾವಳಿ ಹಬ್ಬಕ್ಕೆ ಬಂದು ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ:30.10.2021 ಮತ್ತು 31.10.2021 ರಂದು ಬೆಂಗಳೂರು, ಮಂಗಳೂರು, ಹೈದರಾಬಾದ್, ಪಣಜಿ, ಪೂಣೆ, ಮುಂಬಯಿ ಮತ್ತು ಇನ್ನಿತರ ಪ್ರಮುಖ ನಗರಗಳಿಂದ ರಾಜ್ಯದ ವಿವಿಧ ಪ್ರದೇಶಗಳಿಗೆ ,ಹಾಗೂ ಸ್ವಂತ ಊರುಗಳಿಗೆ ಹಬ್ಬಕ್ಕಾಗಿ ತೆರಳುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ,ಧಾರವಾಡ,ಗದಗ,ಬೆಳಗಾವಿ,ಚಿಕ್ಕೋಡಿ,ಉತ್ತರ ಕನ್ನಡ, ಹಾವೇರಿ, ಮತ್ತು ಬಾಗಲಕೋಟೆ ವಿಭಾಗಗಳಿಂದ ಒಟ್ಟು 600 ಕ್ಕಿಂತ ಅಧಿಕ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.

ಹಬ್ಬ ಮುಗಿದ ನಂತರ ಬೆಂಗಳೂರು, ಮತ್ತು ಇತರ ನಗರಗಳಿಗೆ ತೆರಳುವ ಪ್ರಯಾಣಿಕರಿಗಾಗಿ ನವೆಂಬರ್ 05, ಮತ್ತು ,07 ರಂದು ಸಹ ಬೇಡಿಕೆಗಳಿಗನುಗುಣವಾಗಿ ಹೆಚ್ಚುವರಿ ವಿಶೇಷ ಸಾರಿಗೆ ವಾಹನಗಳ ಕಾರ್ಯಾಚರಣೆ ಮಾಡಲಾಗುವುದು.

ಆದ್ದರಿಂದ ಸಾವ೯ಜನಿಕರು ಸಂಸ್ಥೆಯ ಅಧೀಕೃತ ವೆಬಸೈಟ್ www.ksrtc.in ಅಥವಾ ksrtc mobile App ನಲ್ಲಿ ಮುಂಗಡವಾಗಿ ವೇಗಧೂತ ಹಾಗೂ ಪ್ರತಿಷ್ಠಿತ ಸಾರಿಗೆಗಳಲ್ಲಿ ಟಿಕೇಟ್ ಗಳನ್ನು ಬುಕಿಂಗ್ ಮಾಡಿಕೊಳ್ಳಬಹುದಾಗಿದೆ.

ಸಾರ್ವಜನಿಕ ಪ್ರಯಾಣಿಕರು ಸುಖಕರ, ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಸಂಸ್ಥೆಯ ಬಸ್ಸುಗಳಲ್ಲಿಯೇ, ಪ್ರಯಾಣಿಸುವಂತೆ ಮತ್ತು ಸರಕಾರವು ನಿಗದಿ ಪಡಿಸಿದ ಕೋವಿಡ್ ನಿಯಮಗಳನ್ನು ಅನುಸರಿಸುವದರೊಂದಿಗೆ ಸದರಿ ಹೆಚ್ಚುವರಿ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು, ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply