Tuesday, October 26, 2021
HomeBUSಪ್ರೋತ್ಸಾಹಕ ದರಗಳೊಂದಿಗೆ ಪೂರ್ಣಪ್ರಮಾಣದಲ್ಲಿ ಪ್ರತಿಷ್ಠಿತ ಸಾರಿಗೆಗಳನ್ನು ಪುನರಾರಂಭಿಸುತ್ತಿದೆ ವಾ.ಕ.ರ.ಸಾ.ಸಂಸ್ಥೆ

ಪ್ರೋತ್ಸಾಹಕ ದರಗಳೊಂದಿಗೆ ಪೂರ್ಣಪ್ರಮಾಣದಲ್ಲಿ ಪ್ರತಿಷ್ಠಿತ ಸಾರಿಗೆಗಳನ್ನು ಪುನರಾರಂಭಿಸುತ್ತಿದೆ ವಾ.ಕ.ರ.ಸಾ.ಸಂಸ್ಥೆ

ಕೋವಿಡ್-19 ರಿಂದಾಗಿ ರಾಜ್ಯ ಸರ್ಕಾರವು ವಿಧಿಸಿದ್ದ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಗೊಳಿಸಿದ್ದರಿಂದ ಕರ್ನಾಟಕ ಸಾರಿಗೆ ಸಂಸ್ಥೆಯ ಸಾರಿಗೆ ಕಾರ್ಯಾಚರಣೆಯನ್ನು ಸಾರ್ವಜನಿಕ ಪ್ರಯಾಣಿಕರ ಬೇಡಿಕೆ ಮತ್ತು ಅಗತ್ಯತೆಗನುಗುಣವಾಗಿ ಹೆಚ್ಚಿಸಲಾಗಿರುತ್ತದೆ.

ಕೋವಿಡ್-19 ರಿಂದ ವಿರಳ ಜನಸಂದಣಿಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಪ್ರತಿಷ್ಠಿತ ಸಾರಿಗೆಗಳನ್ನು ಪ್ರಾರಂಭಿಸಿರಲಿಲ್ಲ. ಆದರೆ ಬೇಡಿಕೆಗಳಿಗನುಗುಣವಾಗಿ ಮುಂಗಡ ಟಿಕೇಟಗಳ ಸಂಖ್ಯೆಗಳನ್ನಾಧರಿಸಿ ಮಾತ್ರ ಕಾರ್ಯಾಚರಣೆ ಮಾಡಲಾಗುತ್ತಿತ್ತು. ಆದರೆ ಪ್ರಸ್ತುತವಾಗಿ ಪ್ರತಿಷ್ಠಿತ ಸಾರಿಗೆಗಳನ್ನು ಪ್ರಾರಂಭಿಸಲು ಪ್ರಯಾಣಿಕರ ಬೇಡಿಕೆ ಹೆಚ್ಚಾಗುತ್ತಿರುವ ಮತ್ತು ಅಕ್ಟೋಬರ್-2021 ಮಾಹೆಯಲ್ಲಿ ಸಾಲು ಸಾಲು ಹಬ್ಬದ ರಜೆಗಳಿರುವ ಹಿನ್ನೆಲೆಯಲ್ಲಿ, ಮಾರ್ಚ-2020ರಲ್ಲಿ ಇದ್ದಂತೆ ಸಂಸ್ಥೆಯ ಪ್ರತಿಷ್ಟಿತ ಸಾರಿಗೆಗಳನ್ನು ಪೂರ್ಣ ಪ್ರಮಾಣದಲ್ಲಿ ಪುನರಾರಂಭಿಸಲಾಗುತ್ತಿದೆ.

ವಾ.ಕ.ರ.ಸಾ.ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ, ಗದಗ, ಚಿಕ್ಕೋಡಿ ವಿಭಾಗಗಳ ಪ್ರಮುಖ ಸ್ಥಳಗಳಿಂದ ರಾಜ್ಯದ ಬೆಂಗಳೂರು, ಮಂಗಳೂರು, ಮೈಸೂರು, ಹಾಗೂ ನೆರೆ ರಾಜ್ಯದ ತಿರುಪತಿ, ಹೈದರಾಬಾದ, ಚನ್ನೈ, ಮುಂಬಯಿ, ಮಣೆ ಹಾಗೂ ಗೋವಾ ಮುಂತಾದ ಸ್ಥಳಗಳಿಗೆ ಅಕ್ಟೋಬರ್-2021 ರ ಮೊದಲ ವಾರದಿಂದ ಪ್ರತಿಷ್ಟಿತ ಸಾರಿಗೆಗಳನ್ನು ಪುನರಾರಂಭಿಸಲಾಗುತ್ತಿದೆ.

ಸಂಸ್ಥೆಯ ಒಟ್ಟು 29 ವೋಲ್ಲೊ ಮಲ್ಟಿ ಅಕ್ಸಲ್, 30 ಎ.ಸಿ-ಕ್ಲೀಪರ್, 58 ನಾನ್-ಎ.ಸಿ.-ಸ್ಟೀಪರ್ ಹಾಗೂ 56 ರಾಜಹಂಸ ಹೀಗೆ ಒಟ್ಟು 173 ಪ್ರತಿಷ್ಟಿನ ಸಾರಿಗೆ ಅನುಸೂಚಿಗಳನ್ನು ಪ್ರೋತ್ಸಾಹಕ ದರಗಳೊಂದಿಗೆ ಪುನರಾರಂಭಿಸಲಾಗುತ್ತಿದೆ.

ಸಾರ್ವಜನಿಕ ಪ್ರಯಾಣಿಕರು KSRTC Mobile App ಡೌನ್‌ಲೋಡ್ ಮಾಡಿಕೊಂಡು ಪ್ರತಿಷ್ಠಿತ ಮತ್ತು ವೇಗದೂಪ ಸಾರಿಗೆಗಳಲ್ಲಿ ಮುಂಗಡ ಟಿಕೇಟನ್ನು ಸುಲಭವಾಗಿ ಕಾಯ್ದಿರಿಸಲು, ಕಾರ್ಯಾಚರಣೆಯಾಗುತ್ತಿರುವ ದೂರದಮಾರ್ಗದ ವಾಹನಗಳ ವೇಳಾಪಟ್ಟಿಯನ್ನು ಸಹ ತಿಳಿದುಕೊಳ್ಳಬಹುದಾಗಿದೆ, ಮತ್ತು ಇತರೆ ಮಾಹಿತಿಯನ್ನು ಸಂಸ್ಥೆಯ ಸೈಟ್ www.ksrtc.in ಮತ್ತು ಸಂಸ್ಥೆಯ ಬಸ್ ನಿಲ್ದಾಣಗಳ ಹಾಗೂ ಸಂಸ್ಥೆಯಿಂದ ಗುರುತಿಸಲ್ಪಟ್ಟ ಅಧೀಕೃತ ಖಾಸಃ ಕೌಂಟರ್‌ಗಳ ಮೂಲಕವೂ ಸಹ ಮುಂಗಡ ಟಿಕೇಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ.

ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಿಕೊಳ್ಳುವ ಪ್ರಯಾಣಿಕರಿಗೆ ಸಂಸ್ಥೆಯ ವತಿಯಿಂದ ರಿಯಾಯಿತಿಯನ್ನು ಸಹ ನೀಡಲಾಗಿದೆ.

• ಒಂದೇ ಟಿಕೇಟಿನಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಸೀಟುಗಳನ್ನು ಮುಂಗಡ ಟಿಕೇಟ ಕಾಯ್ದಿರಿಸಿದಲ್ಲಿ ಮೂಲ ದರದ 5% ರಿಯಾಯಿತಿ ನೀಡಲಾಗುತ್ತದೆ.

• ಮರು ಪ್ರಯಾಣದ ರಿಯಾಯಿತಿ~ ಒಂದೇ ವಹಿವಾಟಿನ ಅವಧಿಯಲ್ಲಿ (onward and return journey) ಪ್ರಯಾಣದ ಮತ್ತು ಮರುಪ್ರಯಾಣದ ಟಿಕೇಟಗಳನ್ನು ಕಾಯ್ದಿರಿಸಿದಾಗ ಮೂಲ ಪ್ರಯಾಣ ದರದಲ್ಲಿ 10% ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

• ಹವಾನಿಯಂತ್ರಿತ ಸೇವೆಗಳನ್ನು ಹೊರತುಪಡಿಸಿ ನಗರ ಸಾರಿಗೆ ಸೇವೆಗಳಲ್ಲಿ ಉಚಿತ ಪ್ರಯಾಣ ಮುಂಗಡ ಕಾಯ್ದಿರಿಸುವಿಕೆ ಟಿಕೇಟ್ ಹೊಂದಿರುವ ಪ್ರಯಾಣಿಕರಿಗೆ ಪ್ರಯಾಣದ ಸಮಯಕ್ಕಿಂತ ಮುಂಚಿತವಾಗಿ 2 ಗಂಟೆಗಳ ಒಳಗೆ ನಗರ ಸಾರಿಗೆಗಳಲ್ಲಿ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಟಿಕೇಟಿ ಮತ್ತು ಗುರುತಿನ ಚೀಟಿ ತೋರಿಸಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಮುಂಗಡ ಟಿಕೇಟ ಕಾಯ್ದಿರಿಸುವಿಕೆ ಮುಂತಾದ ಮಾಹಿತಿಗಳನ್ನು ಪಡೆಯಲು ಸಂಸ್ಥೆಯ ಅವತಾರ್ ತಾಖೆಯ ಮೋಬೈಲ್ ಸಂಖ್ಯೆ-7349766655 ಸಂಪರ್ಕಿಸಲು ಕೋರಿದೆ.

ಸುರಕ್ಷಿತ ಹಾಗೂ ಸುಖಕರ ಪ್ರಯಾಣಕ್ಕಾಗಿ ವಾ.ಕ.ರ.ಸಾ.ಸಂಸ್ಥೆಯ ಬಸ್ಸುಗಳಲ್ಲಿಯೇ ಪ್ರಯಾಣಿಸುವಂತೆ ಹಾಗೂ ಸದರಿ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಾ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಗುರುದತ್ತ ಹೆಗಡೆರವರು ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.

RELATED ARTICLES
- Advertisment -