ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಯಿಂದ ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ (Savadatti) ಯಲ್ಲಮ್ಮದೇವಿಯ ಜಾತ್ರೆ ಪ್ರಯುಕ್ತ ಭಕ್ತರಿಗೆ 11 ದಿನ ವಿಶೇಷ ಸಾರಿಗೆ (Special Bus) ವ್ಯವಸ್ಥೆ ಕಲ್ಪಿಸಿದೆ.
ಯಲ್ಲಮ್ಮದೇವಿಯ (Yallamma Devi) ಜಾತ್ರೆಗೆ ಬೆಳಗಾವಿಯಿಂದ ಮಾತ್ರವಲ್ಲದೆ, ಪಕ್ಕದ ಜಿಲ್ಲೆಗಳಿಂದಲೂ ಸಾವಿರಾರು ಭಕ್ತರು (Devotees) ದೇವಿ ಯಲ್ಲಮ್ಮನ ದರ್ಶನ ಪಡೆಯಲು ಸವಾದತ್ತಿಗೆ ಬೇಟಿ ನೀಡುತ್ತಾರೆ. ಇದೇ ಕಾರಣಕ್ಕೆ ಸಾರಿಗೆ ಸಂಸ್ಥೆ ವಿಶೇಷ ಸೌಲಭ್ಯ ನೀಡುತ್ತಿದೆ.
ಇದೇ ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 05 ರ ವರೆಗೆ ಈ ವಿಶೇಷ ಸಾರಿಗೆ ಬೆಳಗಾವಿಯಿಂದ ಸವದತ್ತಿಗೆ ಕಾರ್ಯಾಚರಣೆ ನಡೆಯಲಿದೆ.
Also Read : NWKRTC launches RFID Based smart card in Belagavi for intra-city travel
- Advertisement -
ಪ್ರಯಾಣ ದರ – ಬೆಳಗಾವಿಯಿಂದ ಸವದತ್ತಿಗೆ ವಯಸ್ಕರರಿಗೆ ಕೇವಲ 120 ರೂ ಹಾಗೂ ಕಿರಿಯರಿಗೆ 60 ರೂ ನಿಗದಿ ಪಡಿಸಿದೆ ವಾಕರಸಾ ಸಂಸ್ಥೆ.
- Advertisement -
ಭಕ್ತರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಲು ಸಂಸ್ಥೆ ಕೋರಿದೆ.