ಬೆಳಗಾವಿ ಪ್ರಯಾಣಿಕರ ಬಹುದಿನಗಳ ಬೇಡಿಕೆಯಾದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಸ್ ಸೇವೆಯನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಇಂದಿನಿಂದ (June 03) ಆರಂಭಿಸಿದೆ.
ಇಷ್ಟು ದಿನ ಬೆಳಗಾವಿ ವಿಮಾನ ನಿಲ್ದಾಣ (Belagavi Airport) ಕ್ಕೆ ಬಸ್ ಸೇವೆ ಇಲ್ಲದಿದ್ದ ಕಾರಣ, ಆಟೋ ರಿಕ್ಷಾ, ಕ್ಯಾಬ್ ಗಳು ಕೇಳಿದಷ್ಟು ಹಣ ನೀಡಿ ತಮ್ಮ ಮನೆಗಳಿಗೆ ತೆರಳುವ ಪರಿಸ್ಥಿತಿಯಿತ್ತು, ಆದರೆ ಇನ್ನು ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಳಗಾವಿ ಕೇಂದ್ರ ಬಸ್ ನಿಲ್ದಾಣ (Belagavi Central Bus stand) ಹಾಗೂ ರೈಲು ನಿಲ್ದಾಣ (Belagavi Railway Station) ಕ್ಕೆ ಕಡಿಮೆ ದರದಲ್ಲಿ ಬಸ್ ಪ್ರಾರಂಭಿಸುವ ಮೂಲಕ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈ ಭಾಗದ ಪ್ರಯಾಣಿಕರ ಮನಗೆದ್ದಿದೆ.
ಗುರುವಾರ (June 02) ಬೆಳಗಾವಿಯ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ (Nitesh Patil) ಅವರು ಈ ಬಸ್ ಸೇವೆಗೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಚಾಲನೆ ನೀಡಿದರು.
ಈ ಬಸ್ ಸೇವೆ ನಿತ್ಯ ಇರಲಿದ್ದು, ಬೆಳಗಾವಿ ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣದ ಮಾರ್ಗದಲ್ಲಿ ಈ ವಿಶೇಷ ಬಸ್ ಸಂಚಾರ ನಡೆಸಲಿದೆ. ಮಾರ್ಗ ಮದ್ಯದಲ್ಲಿ ಸಂಕಮ್ ಹೋಟೆಲ್, ಬೆಳಗಾವಿ ಕೇಂದ್ರ ಬಸ್ ನಿಲ್ದಾಣ, ರಾಣಿ ಚೆನ್ನಮ್ಮ ವೃತ್ತ, ಧರ್ಮವೀರ ಸಂಭಾಜಿ ವೃತ್ತ ಗಳಲ್ಲಿ ಬಸ್ ಪ್ರಯಾಣಿಕರಿಗಾಗಿ ಕೆಲವು ನಿಮಿಷಗಳ ಕಾಲ ಕಾಯಲಿದೆ.
- Advertisement -
ವೇಳಾಪಟ್ಟಿ –
ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ –
ಈ ಬಸ್ ಬೆಳಿಗ್ಗೆ 7 ಘಂಟೆಗೆ, ಮದ್ಯಾಹ್ನ 3 ಘಂಟೆಗೆ ಹಾಗೂ ಸಂಜೆ 7.45 ಘಂಟೆಗೆ ಬೆಳಗಾವಿ ರೈಲು ನಿಲ್ದಾಣದಿಂದ ಹೊರಟು ಬೆಳಗಾವಿ ವಿಮಾನ ನಿಲ್ದಾಣ ತಲುಪಲಿದೆ.
ವಿಮಾನ ನಿಲ್ದಾಣ ದಿಂದ ರೈಲು ನಿಲ್ದಾಣಕ್ಕೆ –
ಇದೇ ಬಸ್ ಮತ್ತೆ ಬೆಳಿಗ್ಗೆ 7.50 ಘಂಟೆಗೆ, 9.15 ಘಂಟೆಗೆ, ಸಂಜೆ 4 ಘಂಟೆಗೆ ಹಾಗೂ ರಾತ್ರಿ 7.15 ಘಂಟೆಗೆ ಬೆಳಗಾವಿ ವಿಮಾನ ನಿಲ್ದಾಣದಿಂದ ಹೊರಟು ಬೆಳಗಾವಿ ರೈಲು ನಿಲ್ದಾಣಕ್ಕೆ ಬಂದು ತಲುಪಲಿದೆ.
ಪ್ರಯಾಣ ದರ :
ಇಷ್ಟು ದಿನ ಬಸ್ ಸೇವೆ ಇಲ್ಲದ ಕಾರಣ, ಪ್ರಯಾಣಿಕರು ಬರೋಬ್ಬರಿ 500 ರೂ. ದರದಲ್ಲಿ ಖಾಸಗಿ ಆಟೋ, ಕ್ಯಾಬ್ ಗಳನ್ನು ಹಿಡಿದು ನಗರ ಸೇರುವ ಪರಿಸ್ಥಿತಿ ಇತ್ತು, ಆದರೆ ಇನ್ನೂ ಬಾರಿ ಕಡಿಮೆ ದರದಲ್ಲಿ ತಮ್ಮ ಮನೆ ಸೇರಬಹುದು.
ಈ ಹೊಸ ಮಾರ್ಗದ ಸೇವೆ ಆರಂಭಿಸಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಪ್ರಯಾಣ ದರ ಘೋಷಿಸಿದ್ದು, ಕೇವಲ 100 ರೂ. ಗಳಲ್ಲಿ ವಿಮಾನ ನಿಲ್ದಾಣದಿಂದ ಕೇಂದ್ರ ಬಸ್ ನಿಲ್ದಾಣ ತಲುಪಬಹುದು. ಹಾಗೂ ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಕೇವಲ 150 ರೂ. ಗಳಲ್ಲಿ ಪ್ರಯಾಣಿಸಬಹುದು.
ಹೇಗಿದೆ ವಿಶೇಷ ಬಸ್ ?:
ಮೊದಲ ಬಾರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಮಾನ ನಿಲ್ದಾಣದ ಪ್ರಯಾಣಿಕರಿಗೆಂದೇ ಆರಂಭಿಸಿರುವ ವಿಶೇಷ ಬಸ್ ಸೇವೆ ಹಲವು ವಿಶೇಷಗಳನ್ನೋಲದೊಂಡಿದೆ.
ಈ ಬಸ್ ನಲ್ಲಿ ಪ್ರಯಾಣಿಕರಿಗೆ ಫ್ಯಾನ್ ಗಳ ವ್ಯವಸ್ಥೆ, ವಿಶೇಷ ಆಸನಗಳು, ಪ್ರಯಾಣಿಕರ ಬ್ಯಾಗೇಜ್ ಇಡಲು ವ್ಯವಸ್ಥೆ ಸೇರಿದಂತೆ ಹಲವು ವಿಶೇಷತೆಗಳಿವೆ.