Tuesday, October 26, 2021
HomeLatest NewsPackage tour - ವಾ.ಕ.ರ.ಸಾ ಸಂಸ್ಥೆಯಿಂದ ಪ್ರೇಕ್ಷಣೀಯ ಸ್ಥಳಗಳಿಗೆ ವಿಶೇಷ ಸಾರಿಗೆ

Package tour – ವಾ.ಕ.ರ.ಸಾ ಸಂಸ್ಥೆಯಿಂದ ಪ್ರೇಕ್ಷಣೀಯ ಸ್ಥಳಗಳಿಗೆ ವಿಶೇಷ ಸಾರಿಗೆ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಪ್ರವಾಸಿಗರಿಗೆ ವಿಶೇಷ ಸೌಲಭ್ಯ ಒಂದನ್ನು ನೀಡಲು ಮುಂದಾಗಿದೆ. ಅಧಿಕ ಮಳೆಯಿಂದ ತುಂಬಿ ಹರಿಯುತ್ತಿರುವ ಜಿಲ್ಲೆಯ ಜಲಧಾರೆಗಳ ವೀಕ್ಷಣೆಗೆ ವಾ.ಕ.ರ.ಸಾ ಸಂಸ್ಥೆ ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಿದೆ. ಜುಲೈ 3 ರಿಂದ ಆಗಸ್ಟ್ 29ರವರೆಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ವಿಶೇಷ (ಪ್ಯಾಕೇಜ್ ಟೂರ್) ವೇಗದೂತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಸ್ಥಳಗಳು – ಹಿಡಕಲ್ ಡ್ಯಾಂ, ಗೋಕಾಕ ತಾಲೂಕಿನ ಗೊಡಚಿನಮಲ್ಕಿ, ಗೋಕಾಕ ಫಾಲ್ಸ್ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಇರುತ್ತದೆ.

ವೇಳಾಪಟ್ಟಿ – ಪ್ರತಿ ಶನಿವಾರ ಮತ್ತು ಭಾನುವಾರ ಬೆಳಗ್ಗೆ 9 ಗಂಟೆಗೆ ಕೇಂದ್ರ ಬಸ್ ನಿಲ್ದಾಣದಿಂದ ಹೊರಟು ಪ್ರವಾಸಿಗರ ವೀಕ್ಷಣೆಯ ಬಳಿಕ ಸಂಜೆ 6 ಗಂಟೆಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ಮರಳಲಿದೆ.

ಟಿಕೆಟ್ ದರ – ಒಬ್ಬರಿಗೆ 180 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ – ನಿಲ್ದಾಣದ ಮೇಲ್ವಿಚಾರಕರು, ಕೇಂದ್ರ ಬಸ್ ನಿಲ್ದಾಣ ಬೆಳಗಾವಿ, ಮೊ. 7760991612, 7760991613 ಹಾಗೂ ಘಟಕದ ವ್ಯವಸ್ಥಾಪಕ ಮೊ. 7760991625 ಸಂಪರ್ಕಿಸಬಹುದು ಎಂದು ವಿಭಾಗಿಯ ನಿಯಂತ್ರಣಾಧಿಕಾರಿ ಮಹಾದೇವ ಮುಂಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -