ಬೆಳಗಾವಿ ನಗರದಲ್ಲಿ ಇತ್ತೀಚೆಗೆ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಾಣ ಮಾಡಿರುವ ಗೋಶಾಲೆಗೆ ಶಾಸಕ ಅನಿಲ್ ಬೆನಕೆ ಭಾನುವಾರ ಬೇಟಿ ನೀಡಿದರು.
ಚನ್ನಮ್ಮಾ ಸೊಸೈಟಿಯಲ್ಲಿರುವ ಗೋ ಶಾಲೆಗೆ ಶಾಸಕರು ಬೇಟಿ ನೀಡಿ ಅಲ್ಲಿನ ಕುಂದು ಕೊರತೆಗಳ ಬಗ್ಗೆ ಪರಿಶೀಲಿಸಿದರು. ಸರ್ಕಾರ ಹಾಗೂ ಬಜರಂಗದಳದ ಸಹಯೋಗದಲ್ಲಿ ನಡೆಯುತ್ತಿರುವ ಗೋ ಶಾಲೆಗೆ ಭೇಟಿ ನೀಡಿ, ವ್ಯವಸ್ಥಾಪಕ ಮಂಡಳಿ ಹಾಗೂ ಬಜರಂಗದಳದ ಕಾರ್ಯಕರ್ತರೊಂದಿಗೆ ಗೋ ಶಾಲೆಯ ನಿರೀಕ್ಷೆಣೆ ಮಾಡಿದರು.
ಅಲ್ಲಿರುವ ಕುಂದು ಕೊರತೆಗಳನ್ನು ವಿಚಾರಿಸಿ ಸ್ಥಳದಲ್ಲೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ನೀರಿನ ಪೈಪುಗಳಿಗಾಗಿ ಆರ್ಥಿಕ ಸಹಾಯ ಮಾಡಿದರು, ಸ್ವಲ್ಪ ಸಮಯ ಆಕಳು, ಕರುವಿನ ಜೊತೆಗೆ ಸಮಯ ಕಳೆದು ಗೋಶಾಲೆಗೆ ಅಗತ್ಯ ವಿರುವ ಸೌಲಭ್ಯಗಳನ್ನು ದೊರಕಿಸುವ ಭರವಸೆ ನೀಡಿದರು.
Read More news of Mla Anil benake here
- Advertisement -
ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಲಾದ ಗೋಶಾಲೆ ಕಳೆದ ವರ್ಷವೇ ಉದ್ಘಾಟನೆಗೊಂಡಿರೂ ಸಮಸ್ಯೆಗಳು ಸಾಕಷ್ಟು. ಬಿಡಾಡಿ ದನಗಳ ಗಳನ್ನು ಹೊತ್ತೊಯ್ಯಲು ಸಿಬ್ಬಂದಿ ಕೊರತೆಯಿರುವುದರಿಂದ ಹೈಟೆಕ್ ವಾಹನ ಕೂಡ ಅಗತ್ಯ ವಿರುತ್ತದೆ. ಶಾಸಕರು ಈ ಬಗ್ಗೆ ಚಿಂತಿಸಬೇಕಿದೆ.