ಬೆಳಗಾವಿ (Belagavi) ನಗರದಲ್ಲಿ ಎರಡು ವಾರಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿರುವ ಚಿರತೆ (Leopard) ಕೊನೆಗೂ ಅರಣ್ಯ ಇಲಾಖೆ (Forest Department) ಸಿಬ್ಬಂದಿಗಳಿಗೆ ಇಂದು ದರ್ಶನ ನೀಡಿದೆ.
ಇಂದು ಮುಂಜಾನೆಯಷ್ಟೇ ಕ್ಲಬ್ ರಸ್ತೆಯ ಗೊಲ್ಫ್ ಕೋರ್ಸ್ (Golf course) ಮೈದಾನದ ಬಳಿ ಈ ಚಿರತೆ ರಸ್ತೆ ದಾಟುವಾಗ ಬಸ್ ಚಾಲಕನ ಕ್ಯಾಮೆರಾದಲ್ಲಿ ಸೆರೆಯಾಗಿದ್ದು (Caught on Camera), ವಿಡಿಯೋ (video) ಸಾಕಷ್ಟು ವೈರಲ್ ಆಗಿದೆ. ಇದರ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ – ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ – ಅಧಿಕಾರಿಗಳು ಚಿರತೆ ಸೆರೆಹಿಡಿಯಲು ಅದು ಕಾಣಿಸಿದ ಸ್ಥಳದಲ್ಲೇ ಕಾರ್ಯಾಚರಣೆ ನಡೆಸಿದ್ದರು, ಬೆಳಿಗ್ಗೆ ಸುಮಾರು 11.30 ಕ್ಕೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಅಡಗಿದ್ದ ಚಿರತೆಯನ್ನು ಸೆರೆಹಿಡಿಯಲು ಪ್ರಯತ್ನಿಸಿದಾಗ ಸಿಬ್ಬಂದಿಯ ಮುಂದೆಯೇ ಓಡಿ ಹೋದ ಚಿರತೆ ಮತ್ತೆ ಗೋಲ್ಫ್ ಕೋರ್ಸ್ ಹೊಕ್ಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಒಟ್ಟಿನಲ್ಲಿ ಚಿರತೆ ಹಿಡಿಯಲು ಸಿಬ್ಬಂದಿಗಳು ಸಾಕಷ್ಟು ಹರಸಾಹಸ (Efforts) ಪಡುತ್ತಿರುವುದು ಕಂಡು ಬರುತ್ತಿದೆ. ಇವರಿಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ.