ಬೆಳಗಾವಿ ನಗರದಲ್ಲಿ 24X7 ಕುಡಿಯುವ ನೀರಿನ ಯೋಜನೆ ಒಪ್ಪಂದವನ್ನು ಎಲ್ ಆ್ಯಂಡ್ ಟಿ ಕಂಪನಿಗೆ ಶುಕ್ರವಾರ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಒಪ್ಪಂದ ಪತ್ರ ಹಸ್ತಾಂತರಿಸಿದರು.
ಬೆಳಗಾವಿ ನಗರದ 58 ವಾರ್ಡ್ಗಳಲ್ಲಿ 10 ವಾರ್ಡ್ಗಳಲ್ಲಿ 24X7 ಕುಡಿಯುವ ನೀರಿನ ಪೂರೈಕೆ ಆಗುತ್ತಿದೆ. ಇನ್ನುಳಿದ 48 ವಾರ್ಡ್ಗಳಲ್ಲಿ ಇನ್ಮುಂದೆ ನೀರು ಪೂರೈಸುವ ಜವಾಬ್ದಾರಿಯನ್ನು ಮಹಾನಗರ ಪಾಲಿಕೆಯು ಎಲ್’ ಆ್ಯಂಡ್ ಟಿ ಕಂಪನಿಗೆ ನೀಡಿದೆ. ಶುಕ್ರವಾರ ಪಾಲಿಕೆ ಸಭಾಂಗಣದಲ್ಲಿ ಬೆಳಗಾವಿ ಜಲಮಂಡಳಿಯ ಅಧಿಕಾರಿಗಳು ಪಾಲಿಕೆ ಅಧಿಕಾರಿಗಳಿಗೆ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿದರು.
ನಂತರ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಡಳಿತಾಧಿ ಕಾರಿಯೂ ಆಗಿರುವ ಎಂ.ಜಿ. ಹಿರೇಮಠ ಅವರು ಎಲ್’ ಆ್ಯಂಡ್ ಟಿ ಕಂಪನಿಯ ನೀರಿನ ವಿಭಾಗದ ಜನರಲ್ ಮ್ಯಾನೇಜರ್ ಹಾರ್ದಿಕ್ ದೇಸಾಯಿಯವರಿಗೆ ಒಪ್ಪಂದ ಪತ್ರ ಹಸ್ತಾಂತರಿಸಿದರು.
ಈ ಒಪ್ಪಂದ ಪ್ರಕಾರ ಎಲ್ ಆ್ಯಂಡ್ ಟಿ ಕಂಪನಿಯವರು ಐದು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸಬೇಕು, ನಂತರ ಏಳು ವರ್ಷ ನಿರ್ವಹಿಸುವಂತೆ ಒಪ್ಪಂದವಾಗಿದೆ. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್. ಉಪಾಯುಕ್ತ ಲಕ್ಷ್ಮೀ ನಿಲ್ದಾಣಿಕರ್ ಸೇರಿದಂತೆ ಮುಂತಾದ ಅಧಿ ಕಾರಿಗಳು ಉಪಸ್ಥಿತರಿದ್ದರು.