KPSC SDA Exam time table – ಎಸ್‌ಡಿಎ ಪರೀಕ್ಷೆ ಮರು ದಿನಾಂಕ ಪ್ರಕಟ
Examination Latest News

KPSC SDA Exam time table – ಎಸ್‌ಡಿಎ ಪರೀಕ್ಷೆ ಮರು ದಿನಾಂಕ ಪ್ರಕಟ

KPSC exam

ಕೊರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ SDA (ದ್ವಿತೀಯ ದರ್ಜೆ ಸಹಾಯಕರು / ಕಿರಿಯ ಸಹಾಯಕರು) ಪರೀಕ್ಷೆಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಹೊಸ ದಿನಾಂಕ ನಿಗದಿ ಮಾಡಲಾಗಿದೆ.

ಬುಧವಾರ ದಂದು ಕರ್ನಾಟಕ ಲೋಕಸೇವಾ ಆಯೋಗ (KPSC) ಘೋಷಣೆ ಮಾಡಿದ್ದು, ಇದೇ ಸೆಪ್ಟೆಂಬರ್ 18 ಹಾಗೂ 19ರಂದು ಕಿರಿಯ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ ಪರೀಕ್ಷೆಗಳು ನಡೆಯಲಿವೆ.

2019ನೇ ಸಾಲಿನ ರಾಜ್ಯದ ವಿವಿಧ ಇಲಾಖೆಯಲ್ಲಿನ ಉಳಿಕ ಮೂಲ ವೃಂದದ ಹಾಗೂ ಹೈದರಾಬಾದ್ ಕರ್ನಾಟಕ ವೃಂದದ ಕಿರಿಯ ಸಹಾಯಕರ, ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಎರಡು ದಿನ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗ ತಿಳಿಸಿದೆ.

ಪರೀಕ್ಷೆ ವೇಳಾಪಟ್ಟಿ –

ಸೆ.18ರಂದು ಶನಿವಾರ ಬೆಳಿಗ್ಗೆ 10 ರಿಂದ 11.30 ರವರೆಗೆ ಪತ್ರಿಕೆ -1: ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ

ಸೆ.19ರಂದು ಭಾನುವಾರ ಬೆಳಿಗ್ಗೆ 10 ರಿಂದ 11.30 ರವರೆಗೆ ಪತ್ರಿಕೆ-2: ಸಾಮಾನ್ಯ ಜ್ಞಾನ.

19-09-2021 ರ ಭಾನುವಾರ ಮಧ್ಯಾಹ್ನ 2 ರಿಂದ 3.30ರವರೆಗೆ ಪತ್ರಿಕೆ -3: ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್.

Leave a Reply