ಬೆಳಗಾವಿ ಜಿಲ್ಲೆಯ ಒಬ್ಬರಿಗೆ 2021 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಕರ್ನಾಟಕ ರಾಜೋತ್ಸವದ ಅಂಗವಾಗಿ ಪ್ರತಿ ವರ್ಷ ನೀಡಲಾಗುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಈ ವರ್ಷ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಆಯ್ಕೆ ಮಾಡಲಾಗಿದೆ.

ಸೇವಾ ಸಿಂಧು ಮೂಲಕ ಸಾರ್ವಜನಿಕರು ಮಾಡಿದ ಚಾರಸುಗಳನ್ನು ಪರಿಶೀಲಿಸಿ ಕಾರಣ ಎಲೆಮರೆಕಾಯಿಯಂತೆ ಸೇವೆ ಸಲ್ಲಿಸಿದ ಅನೇಕ ಮಹನೀಯರನ್ನು ಹಕ್ಕಿ ತೆಗೆದು ಅವರ ಹೆಸರುಗಳನ್ನು ಕೂಡ ಪ್ರಶಸ್ತಿ ಸಲಹಾ ಸಮಿಸಿ ಮತ್ತು ಮಾವು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಪ್ರಶಸ್ತಿ ಆಯ್ಕೆ ಸಮಿತಿಗಳ ಮುಂದೆ ಇಡಲಾಯಿತು, ಅವುಗಳ ಸಮದ ಪರಿಶೀಲನೆಯ ನಂತರ ಆಯ್ಕೆ ಸಮಿತಿಯು ಅರಮಗೊಳಿಸಿದ ಹೆಸರುಗಳನ್ನು ಈ ಪ್ರಶಸ್ತಿಗಾಗಿ ಪರಿಗಣಿಸಲಾಗಿದೆ.

ಕನ್ನಡದ ಮೇರು ನಟ ಪುನಿತ್ ರಾಜ್‌ಕುಮಾರ್‌ ಅವರ ಅಕಾಲಿಕ ನಿಧನದಿಂದ ಪ್ರಶಸ್ತಿ ಘೋಷಣೆಯಲ್ಲಿ ವಿಳಂಬವಾಯಿತು ಅವರ ಅಂತ್ಯಕ್ರಿಯೆಯ ಎಲ್ಲ ಪುಕ್ರಿಯೆಗಳು ಮುಗಿದ ನಂತರ ಈ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ.

ಅದರ ಜೊತೆಗೆ ಈ ವರ್ಷ ಭಾರತ ಸ್ವಾತಂತ್ರದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅದರ ಸ್ಮರಣೆಗಾಗಿ ರಾಜ್ಯದ ೧೦ ಸಂಘ ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿ ಈ ವರ್ಷಕ್ಕೆ ಮಾತ್ರ ಸೀಮಿತವಾಗಿದೆ.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪ್ರತಿವರ್ಷ ನೀಡಲಾಗುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಈ ವರ್ಷ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 66 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಭಾನುವಾರ ಪ್ರಶಸ್ತಿ ಪುರಸ್ಕೃತರಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿ, ರಾಜ್ಯೋತ್ಸವ ಪ್ರಶಸ್ತಿಗೆ ಸಮಾಜ ಸೇವೆ ಕ್ಷೇತ್ರದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯವರಾದ ಬಸವಪ್ರಭು ಲಖನಗೌಡ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಇತರೆ ಕ್ಷೇತ್ರಗಳ ಸಾಧಕರ ಪಟ್ಟಿ :

ಜಾನಪದ ಕ್ಷೇತ್ರ :
* ಆರ್. ಬಿ. ನಾಯಕ (ವಿಜಯಪುರ)
* ಗೌರಮ್ಮ ಹುಚ್ಚಪ್ಪ ಮಾಸ್ತರ್ (ಶಿವಮೊಗ್ಗ)
* ದುರ್ಗಪ್ಪ ಚೆನ್ನದಾಸರ (ಬಳ್ಳಾರಿ)
* ಬನ್ನಂಜೆ ಬಾಬು ಅಮೀನ್ (ಉಡುಪಿ)
* ಮಲ್ಲಿಕಾರ್ಜುನ ಗೋವಿಂದಪ್ಪ ಭಜಂತ್ರಿ (ಧಾರವಾಡ)
* ಮಹಾರುದ್ರಪ್ಪ ವೀರಪ್ಪ ಇಟಗಿ (ಹಾವೇರಿ)

ರಂಗಭೂಮಿ ಕ್ಷೇತ್ರ :
* ಫಕೀರಪ್ಪ ರಾಮಪ್ಪ ಕೊಡಾಯಿ (ಹಾವೇರಿ)
* ಪ್ರಕಾಶ್ ಬೆಳವಾಡಿ (ಚಿಕ್ಕಮಗಳೂರು)
* ರಮೇಶ್ ಗೌಡ ಪಾಟೀಲ (ಬಳ್ಳಾರಿ)
* ಮಲ್ಲೇಶಯ್ಯ ಎನ್ (ರಾಮನಗರ)
* ಸಾವಿತ್ರಿ ಗೌಡರ್ (ಗದಗ)

ಸಾಹಿತ್ಯ ಕ್ಷೇತ್ರ :

* ಮಹಾದೇವ ಶಂಕನಪುರ (ಚಾಮರಾಜನಗರ)
* ಪ್ರೊ. ಡಿ. ಟಿ. ರಂಗಸ್ವಾಮಿ (ಚಿತ್ರದುರ್ಗ)
* ಜಯಲಕ್ಷ್ಮೀ ಮಂಗಳಮೂರ್ತಿ (ರಾಯಚೂರು)
* ಅಜ್ಜಂಪುರ ಮಂಜುನಾಥ್ (ಚಿಕ್ಕಮಗಳೂರು)
* ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ (ವಿಜಯಪುರ)
* ಸಿದ್ದಪ್ಪ ಬಿದರಿ (ಬಾಗಲಕೋಟೆ)

ಸಮಾಜ ಸೇವೆ ಕ್ಷೇತ್ರ :
* ಸೂಲಗಿತ್ತಿ ಯಮುನವ್ವ (ಸಾಲಮಂಟಪಿ) (ಬಾಗಲಕೋಟೆ)
* ಮಾದಲಿ ಮಾದಯ್ಯ (ಮೈಸೂರು)
* ಮುನಿಯಪ್ಪ ದೊಮ್ಮಲೂರು (ಬೆಂಗಳೂರು ನಗರ)
* ಬಿ. ಎಲ್. ಪಾಟೀಲ್ ಅಥಣಿ (ಬೆಳಗಾವಿ)
* ಡಾ. ಜೆ. ಎನ್. ರಾಮಕೃಷ್ಣೇ ಗೌಡ (ಮಂಡ್ಯ)

ಸಂಗೀತ ಕ್ಷೇತ್ರ
*ಸಿ.ತ್ಯಾಗರಾಜು (ನಾದಸ್ವರ) ಕೋಲಾರ
*ಹೆರಾಲ್ಡ್ ಸಿರಿಲ್ ಡಿಸೋಜಾ ದಕ್ಷಿಣ ಕನ್ನಡ

ಶಿಲ್ಪಕಲಾ ಕ್ಷೇತ್ರ
*ಡಾ.ಜಿ.ಜ್ಞಾನಾನಂದ (ಚಿಕ್ಕಬಳ್ಳಾಪುರ)
*ವೆಂಕಣ್ಣ ಚಿತ್ರಗಾರ (ಕೊಪ್ಪಳ)

ಸಂಕೀರ್ಣ ಕ್ಷೇತ್ರ
*ಡಾ.ಬಿ.ಅಂಬಣ್ಣ (ವಿಜಯನಗರ)
*ಕ್ಯಾ.ರಾಜಾರಾವ್(ಬಳ್ಳಾರಿ)
*ಗಂಗಾವತಿ ಪ್ರಾಣೇಶ್ (ಕೊಪ್ಪಳ)

ವಿಜ್ಞಾನ ತಂತ್ರಜ್ಞಾನ ಕ್ಷೇತ್ರ
*ಬೆಂಗಳೂರಿನ ಡಾ.ಹೆಚ್.ಎಸ್.ಸಾವಿತ್ರಿ
*ಬೆಂಗಳೂರಿನ ಪ್ರೊ.ಜಿ.ಯು.ಕುಲಕರ್ಣಿಗೆ ಪ್ರಶಸ್ತಿ ಘೋಷಿಸಲಾಗಿದೆ.

ವೈದ್ಯಕೀಯ ಕ್ಷೇತ್ರ
*ದಾವಣಗೆರೆ ಜಿಲ್ಲೆಯ ಡಾ.ಸುಲ್ತಾನ್ ಬಿ. ಜಗಳೂರು
*ಧಾರವಾಡ ಜಿಲ್ಲೆಯ ಡಾ.ವ್ಯಾಸ ದೇಶಪಾಂಡೆ (ವೇದವ್ಯಾಸ)
*ಬೆಂಗಳೂರಿನ ಡಾ.ಎ.ಆರ್.ಪ್ರದೀಪ್ (ದಂತ ವೈದ್ಯಕೀಯ)
*ದಕ್ಷಿಣ ಕನ್ನಡ ಜಿಲ್ಲೆಯ ಡಾ.ಸುರೇಶ್ ರಾವ್
*ಧಾರವಾಡದ ಡಾ.ಶಿವನಗೌಡ ರಾಮನಗೌಡರ್
*ಬೆಂಗಳೂರಿನ ಡಾ.ಸುದರ್ಶನ್ಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಕ್ರೀಡಾ ಕ್ಷೇತ್ರ
*ರೋಹನ್ ಭೋಪಣ್ಣ (ಕೊಡಗು)
*ಕೆ.ಗೋಪಿನಾಥ್ (ವಿಶೇಷ ಚೇತನ)
*ರೋಹಿತ್ ಕುಮಾರ್ ಕಟೀಲು (ಉಡುಪಿ )
*ಎ.ನಾಗರಾಜು (ಕಬಡ್ಡಿ) ಬೆಂಗಳೂರು

____________

ಫೋಟೋ ಕೃಪೆ – Update bro

Leave a Reply