ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಪ್ರಾರಂಭ
ಕೆ. ರೋಸಯ್ಯ, ಬಿಪಿನ್ ರಾವತ್, ಪುನೀತ ರಾಜಕುಮಾರ
ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ
ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನ ಇಂದು ಸುವರ್ಣ ವಿಧಾನ ಸೌಧದಲ್ಲಿ ಪ್ರಾರಂಭವಾಯಿತು. 15ನೇ ವಿಧಾನಸಭೆಯ 11ನೇ ಅಧಿವೇಶನದ ಮೊದಲನೇ ದಿನದಂದು ಮಾಜಿ ರಾಜ್ಯಪಾಲ ಕೆ. ರೋಸಯ್ಯ, ಮಾಜಿ ಸಚಿವರಾದ ಎಸ್.ಆರ್. ಮೋರೆ, ವಿರೂಪಾಕ್ಷಪ್ಪ ಅಗಡಿ, ಮಾಜಿ ಶಾಸಕರಾದ ಕೆ. ರಾಮಭಟ್, ಡಾ. ಎಂ.ಪಿ.ಕರ್ಕಿ, ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಹಾಗೂ ಅವರ ಜೊತೆಗೆ ಹೆಲಿಕ್ಯಾಪ್ಟರ್ ದುರಂತದಲ್ಲಿ ಮಡಿದ ಸೇನಾಧಿಕಾರಿಗಳು, ಚಿತ್ರನಟರಾದ ಪುನೀತ ರಾಜ್‍ಕುಮಾರ, ಎಸ್. ಶಿವರಾಂ ಹಾಗೂ ಬಹುಶೃತ ವಿದ್ವಾಂಸ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರ ನಿಧನಕ್ಕೆ ಸಂತಾಪ ಸೂಚನೆ ನಿರ್ಣಯ ಕೈಗೊಳ್ಳಲಾಯಿತು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಗಲಿದ ಗಣ್ಯರ ಕುರಿತು ಸಂತಾಪ ಸೂಚನೆಯನ್ನು ವಿಸ್ತøತವಾಗಿ ವಾಚಿಸಿ ಅಗಲಿದ ಗಣ್ಯರ ಬದುಕು, ಸಾಧನೆಗಳನ್ನು ಸದನಕ್ಕೆ ವಿವರಿಸಿದರು.
ಸಂತಾಪ ಸೂಚನೆ ನಿರ್ಣಯದ ಮೇಲೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಆಂಧ್ರಪ್ರದೇಶದ ರಾಜಕಾರಣದಲ್ಲಿ ಹಂತ ಹಂತವಾಗಿ ಮೇಲೆ ಬಂದ ಕೆ. ರೋಸಯ್ಯ ಅವರು ಹಣಕಾಸು ಮಂತ್ರಿಯಾಗಿ 16 ಬಾರಿ ಬಜೆಟ್ ಮಂಡಿಸುವ ಮೂಲಕ ದೇಶದಲ್ಲಿ ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಕೀರ್ತಿ ಹೊಂದಿದ್ದರು. ಕರ್ನಾಟಕ ರಾಜ್ಯದೊಂದಿಗೆ ಅವಿನಾಭಾವ ನಂಟು ಇಟ್ಟುಕೊಂಡಿದ್ದರು. ಕೆಲ ಕಾಲ ರಾಜ್ಯದ ಹಂಗಾಮಿ ರಾಜ್ಯಪಾಲರಾಗಿ ಅವರು ನೀಡಿರುವ ಸೇವೆಯನ್ನು ಸ್ಮರಿಸಿದರು.
- Advertisement -
ಭಾರತದ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಡಾ. ಮಧುಲಿಕಾ ರಾವತ್, ಸೇನಾಧಿಕಾರಿಗಳಾದ ಬ್ರಿಗೇಡಿಯರ್ ಎಲ್.ಎಸ್. ಲಿಡ್ಡೆರ್, ಲೆಫ್ಟಿನಂಟ್ ಕಮಾಂಡ್ ಹರ್ಜಿಂದರ್ ಸಿಂಗ್, ವಿಂಗ್ ಕಮಾಂಡರ್ ವಿ.ಎಸ್. ಚೌಹಾನ್, ಸ್ಕ್ವಾಡ್ರನ್ ಲೀಡರ್ ಕೆ.ಸಿಂಗ್ ಇತರ ಸೇನಾಧಿಕಾರಿಗಳಾದ ದಾಸ್, ಪ್ರದೀಪ, ಜಿತೇಂದ್ರ ಕುಮಾರ ನಾಯಕ್, ವಿವೇಕಕುಮಾರ್, ಬಿ. ಸಾಯಿ ತೇಜ್, ಗುರುಸೇವಕ ಸಿಂಗ್, ಸತ್ಪಾಲ್ ಅವರು ಡಿಸೆಂಬರ್ 8 ರಂದು ಸಂಭವಿಸಿದ ಹೆಲಿಕ್ಯಾಪ್ಟರ್ ದುರಂತದಲ್ಲಿ ಸಾವಿಗೀಡಾಗಿದ್ದು, ದೇಶಕ್ಕೆ ದಿಗ್ಭ್ರಮೆ ಉಂಟು ಮಾಡಿದೆ.ದೇಶದ ಮೂರು ಸೇನೆಗಳ ಮುಖ್ಯಸ್ಥರಾಗಿದ್ದ ಇವರು ಬಹಳಷ್ಟು ಭದ್ರತೆ ಹೊಂದಿರುವ ಸೇನಾ ಹೆಲಿಕ್ಯಾಪ್ಟರ್‍ನಲ್ಲಿ ಪ್ರಯಾಣಿಸುತ್ತಿರುವಾಗ ನಡೆದಿರುವ ಈ ದುರಂತಕ್ಕೆ ನಿಖರ ಕಾರಣಗಳು ತನಿಖೆಯಿಂದ ತಿಳಿಯಬೇಕಾಗಿದೆ. ಜನರಲ್ ಬಿಪಿನ್ ರಾವತ್ ಅವರು ದೇಶದ ರಕ್ಷಣೆಗಾಗಿ ನೀಡಿದ ಸೇವೆ ಉನ್ನತ ಮಟ್ಟದ್ದಾಗಿದೆ. ದೇಶದ ಭದ್ರತೆಯ ಸ್ಪಷ್ಟ ಹಾಗೂ ನಿಖರ ಚಿತ್ರಣ ಅವರಲ್ಲಿ ಇತ್ತು. ಧೈರ್ಯ ಮತ್ತು ಸಾಹಸಗಳಿಂದ ಸೈನ್ಯದ ಒಳಗೆ ಮತ್ತು ಹೊರಗೆ ಅಪಾರ ಅಭಿಮಾನ ಹೊಂದಿದರು. ಕನ್ನಡದ ಹೆಸರಾಂತ ಸೇನಾನಿಗಳಾದ ಜನರಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯಾ ಸೇರಿದಂತೆ ಕೊಡಗಿನ ಸೈನಿಕರ ಬಗ್ಗೆ ಗೌರವ ಹೊಂದಿದ್ದರು. ಕಾಶ್ಮಿರ ಮತ್ತು ಈಶಾನ್ಯ ರಾಜ್ಯಗಳ ರಕ್ಷಣೆ, ಮಯನ್ಮಾರ್‍ನಲ್ಲಿ ಉಗ್ರರ ನಿಯಂತ್ರಣ, ಸರ್ಜಿಕಲ್ ಸ್ಟ್ರೈಕ್ ತಂತ್ರಗಳನ್ನು ರೂಪಿಸುವಲ್ಲಿ ರಾವತ್ ಅವರ ಪಾತ್ರ ದೊಡ್ಡದು. ಸೇನೆಯ ಆಡಳಿತದಲ್ಲಿಯೂ ಅವರ ದಕ್ಷತೆ ಹಿರಿದಾಗಿತ್ತು. ಸೇನೆಯಲ್ಲಿ ಆಧುನಿಕತೆಯ ಜೊತೆಗೆ ಭಾರತೀಯತೆಯನ್ನು ತರುವಲ್ಲಿ ಅವರ ಸೇವೆ ಗಣನೀಯವಾಗಿದೆ. ಹೆಲಿಕ್ಯಾಪ್ಟರ್ ಅಪಘಾತದಲ್ಲಿ ಬದುಕುಳಿದಿರುವ ಕ್ಯಾಪ್ಟನ್ ವರುಣಸಿಂಗ್ ಅವರಿಗೆ ಉತ್ತಮ ಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಗುಣಮುಖರಾಗಲಿ ಎಂದು ಮುಖ್ಯಮಂತ್ರಿಗಳು ಆಶಿಸಿದರು.
ಮಾಜಿ ಸಚಿವ ಎಸ್.ಆರ್. ಮೋರೆ ಅವರು ನೇರ, ನಿಷ್ಠುರ ರಾಜಕಾರಣಿಯಾಗಿ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದರು. ಸಹಕಾರ ಮತ್ತು ನಗರಾಭಿವೃದ್ಧಿ ಸಚಿವರಾಗಿ ಉತ್ತಮ ಕೆಲಸಗಳನ್ನು ನಿರ್ವಹಿಸಿದ್ದರು. ಮಾಜಿ ಸಚಿವ ಕೊಪ್ಪಳದ ವಿರೂಪಾಕ್ಷಪ್ಪ ಅಗಡಿ ಅವರು ಜನಪರ ಕಾಳಜಿಯುಳ್ಳ ವ್ಯಕ್ತಿಯಾಗಿದ್ದರು. ಅವರ ತಂದೆ ಮಾಜಿ ಸಂಸದ ಸಂಗಣ್ಣ ಅಗಡಿ ಅವರ ರೀತಿಯಲ್ಲಿಯೇ ಅಭಿವೃದ್ಧಿ ರಾಜಕಾರಣ ಮಾಡಿದವರು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಸಂಘವನ್ನು ಕಟ್ಟಿ ಬೆಳೆಸಿದ ಮಾಜಿ ಶಾಸಕ ಕೆ. ರಾಮಭಟ್ ಹೊನ್ನಾವರದ ವೈದ್ಯ ಡಾ. ಎಂ.ಪಿ. ಕರ್ಕಿ, ಪ್ರೊ. ಕೆ.ಎಸ್. ನಾರಾಯಣಾಚಾರ್ಯ, ಹಿರಿಯ ನಟ ಎಸ್. ಶಿವರಾಂ ಅವರ ಬದುಕು ಮತ್ತು ಸಾಧನೆಗಳನ್ನು ಮುಖ್ಯಮಂತ್ರಿಯವರು ಗುಣಗಾನ ಮಾಡಿದರು.
ನಟ ಪುನೀತ್ ಸ್ಮರಣೆ: ಪ್ರತಿಭೆ, ಸಜ್ಜನಿಕೆ ಹಾಗೂ ವಿಚಾರಗಳ ಮೇರು ಸಂಗಮವಾಗಿದ್ದ ಪುನೀತ್ ರಾಜಕುಮಾರ್ ಅವರು 46ರ ಯೌವನದಲ್ಲಿಯೇ ಅಕಾಲಿಕವಾಗಿ ಸಾವಿಗೀಡಾಗಿರುವುದು ನಾಡಿಗೆ ಆಗಿರುವ ದೊಡ್ಡ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಷಾದಿಸಿದರು.
ಕಳೆದ ಅಕ್ಟೋಬರ್ 29 ರಂದು ಬೆಳಗಿನ ವ್ಯಾಯಾಮ ಕಸರತ್ತುಗಳನ್ನು ಮುಗಿಸಿ ಸಹಜವಾಗಿಯೇ ಇದ್ದ ಪುನೀತ್ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದದ್ದು ದೊಡ್ಡ ದುರಂತ. ಘಟನೆ ಸಂಭವಿಸಿದ ತಕ್ಷಣ ಅವರ ಕುಟುಂಬದೊಂದಿಗೆ ಮಾತನಾಡಿ ಅವರ ಸಹಕಾರದೊಂದಿಗೆ ಯಾವುದೇ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಚ್ಚರವಹಿಸಿ ಅಂತಿಮ ವಿಧಿ ವಿಧಾನಗಳನ್ನು ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಹರಿದ ಬಂದ ಜನಸಾಗರ, ಯುವಕರ ಅಭಿಮಾನ, ಭಾವನಾತ್ಮಕವಾಗಿ ಜನರ ಹೃದಯದಲ್ಲಿ ಗಳಿಸಿದ ಸ್ಥಾನಕ್ಕೆ ಸಾಕ್ಷಿಯಾಯಿತು. ಸದಾಕಾಲ ಬಡವರು, ಅನಾಥರು, ವೃದ್ಧರ ಹಿತಚಿಂತನೆ ಮಾಡಿದ ಪುನೀತ್ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಅನುಕೂಲಕ್ಕೆ ಸ್ವತ: ಆಸಕ್ತಿವಹಿಸಿ ಡಾ. ರಾಜಕುಮಾರ್ ಲರ್ನಿಂಗ್ ಆ್ಯಪ್ ರೂಪಿಸಿದ್ದರು. ಈ ಮೊಬೈಲ್ ಅಪ್ಲಿಕೇಶನ್‍ನ್ನು ತಮ್ಮಿಂದ ಬಿಡುಗಡೆ ಮಾಡಿಸಿದ್ದರು ಎಂದು ಮುಖ್ಯಮಂತ್ರಿಗಳು ನೆನಪುಗಳನ್ನು ಮೆಲಕು ಹಾಕಿದರು. ವನ್ಯಜೀವಿ ಸಂರಕ್ಷಣೆ ಹಾಗೂ ಪರಿಸರ ಕಾಳಜಿ ಕುರಿತು ವೆಬ್ ಬಿಡುಗಡೆ ಮಾಡಲು ಕೋರಿದ್ದರು. ಆ ಕುರಿತು ಚರ್ಚಿಸಲು ಅಕ್ಟೋಬರ್ 30 ರಂದು ದಿನಾಂಕ ನಿಗದಿಪಡಿಸಿದ್ದೆವು. ಆದರೆ ವಿಧಿ ಲಿಖಿತ ಬೇರೆಯೇ ಇತ್ತು. ಅಕ್ಟೋಬರ್ 29 ರಂದೇ ಅವರು ನಮ್ಮಿಂದ ದೂರವಾಗಿ ಬಾರದ ಲೋಕಕ್ಕೆ ತೆರಳಿದರು. ರಾಜ್ಯ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಿಸಿದೆ. ಪ್ರಶಸ್ತಿ ಪ್ರದಾನ ದಿನಾಂಕ ನಿಗದಿಪಡಿಸಲಾಗುವುದು. ಭಾರತ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿಗೂ ಪುನೀತ್ ಹೆಸರನ್ನು ಶಿಫಾರಸ್ಸು ಮಾಡಲಾಗುವುದು ಎಂದರು.
ಪ್ರತಿಪಕ್ಷದ ನಾಯಕ ಎಸ್. ಸಿದ್ದರಾಮಯ್ಯ ಮಾತನಾಡಿ, ರಷ್ಯಾದ ಅತ್ಯಾಧುನಿಕ ತಂತ್ರಜ್ಞಾನಗಳಿಂದ ನಿರ್ಮಿತವಾದ ಸೇನಾ ಹೆಲಿಕ್ಯಾಪ್ಟರ್ ದುರಂತದಲ್ಲಿ ಜನರಲ್ ಬಿಪಿನ್ ರಾವತ್ ಹಾಗೂ ಇತರ ಸೇನಾಧಿಕಾರಿಗಳು ಮರಣ ಹೊಂದಿರುವುದು ಅಘಾತ ಉಂಟು ಮಾಡಿದೆ. ನಟ ಪುನೀತ್ ರಾಜಕುಮಾರ್ ಅವರ ಜನಪ್ರಿಯತೆ ಚಲನಚಿತ್ರ ರಂಗದ ಆಚೆಯೂ ವ್ಯಾಪಕವಾಗಿತ್ತು. ಅವರ ನಿಧನಕ್ಕೆ ಸಮಸ್ತ ಕನ್ನಡಿಗರು ಕಂಬನಿ ಮಿಡಿದಿದ್ದಾರೆ. ವರ ನಟ ಡಾ. ರಾಜಕುಮಾರ್ ಅವರ ಮಗನಾಗಿದ್ದರೂ ಕೂಡ ಅವರ ಪ್ರಭಾವದ ಹೊರತಾಗಿ ಸ್ವಂತ ವ್ಯಕ್ತಿತ್ವ ರೂಪಿಸಿಕೊಂಡಿದ್ದರು. ಹಿರಿಯ ನಟ ಶಿವರಾಂ ಆಧ್ಯಾತ್ಮ ಹಾಗೂ ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದರು. ಅವರ ಮನೆಯಲ್ಲಿರುವ ಖಾಸಗಿ ಪುಸ್ತಕಗಳ ಸಂಗ್ರಹವನ್ನು ಸರ್ಕಾರ ಗ್ರಂಥಾಲಯವಾಗಿ ಪರಿವರ್ತಿಸಲು ಯೋಚಿಸಬೇಕೆಂದು ಸಲಹೆ ನೀಡಿದರು.
ಕೊಪ್ಪಳದ ಮಾಜಿ ಸಚಿವ ವಿರೂಪಾಕ್ಷಪ್ಪ ಅಗಡಿ ಅವರು ನಿಷ್ಠುರ ನಾಯಕರಾಗಿದ್ದರು. ತಾವು ಕೊಪ್ಪಳದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ತಮಗೆ ಹೊಟೇಲ್‍ನಲ್ಲಿ ತಂಗಲು ಬಿಡದೇ ಅವರ ಮನೆಯಲ್ಲಿಯೇ ಉಳಿಸಿಕೊಂಡಿದ್ದರು. ಚುನಾವಣೆಯ ಏಜೆಂಟ್ ಆಗಿ ಬೆಂಬಲಿಸಿದ್ದರು ಎಂದರು.
ಮಾಜಿ ರಾಜ್ಯಪಾಲ ಕೆ. ರೋಸಯ್ಯ, ಕೆ. ರಾಮಭಟ್, ಡಾ. ಎಂ.ಪಿ. ಕರ್ಕಿ, ಕೆ.ಎಸ್. ನಾರಾಯಣಾಚಾರ್ಯ ಅವರ ಪ್ರತಿಭೆಯನ್ನು ಸಿದ್ದರಾಮಯ್ಯ ಸ್ಮರಿಸಿದರು.
ಜೆ.ಡಿ.ಎಸ್. ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಖಾಶೆಂಪುರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್, ಮುಜರಾಯಿ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರುಗಳಾದ ಟಿ.ಡಿ. ರಾಜೇಗೌಡ, ಶಿವಲಿಂಗೇಗೌಡ, ಎಸ್. ಅಂಗಾರ, ಎನ್. ಮಹೇಶ, ಕುಮಾರ ಬಂಗಾರಪ್ಪ ಮತ್ತಿತರರು ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದರು. ಅಗಲಿದ ಗಣ್ಯರಿಗೆ ಸದನವು ಮೌನಾಚರಣೆ ಮಾಡಿ ಗೌರವ ಸಲ್ಲಿಸಿತು.
ಸ್ಮಾರಕಗಳ ಸಂರಕ್ಷಣೆಗೆ ಅಗತ್ಯ ಅನುದಾನ, ಬಿಗಿ ನಿಯಮಗಳ ಸಡಿಲಿಕೆಗೆ ಭರವಸೆ : ಕೋಟ ಶ್ರೀನಿವಾಸ ಪೂಜಾರಿ
************************
ರಾಜ್ಯದ ಧಾರ್ಮಿಕ ಸ್ಮಾರಕಗಳೂ ಒಳಗೊಂಡಂತೆ ಎಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಮಾತ್ರವಲ್ಲದೆ, ಬಿಗಿ ನಿಯಮಗಳ ಸಡಿಲಿಕೆಗೂ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ರಾಜ್ಯ ವಿಧಾನ ಪರಿಷತ್‍ನಲ್ಲಿ ಭರವಸೆ ನೀಡಿದರು.
ಸದಸ್ಯೆ ಡಾ ತೇಜಸ್ವಿನಿ ಗೌಡ ಅವರು ಕೆಳದಿ ಸಾಮ್ರಾಜ್ಯದ ನಾಲ್ಕು ರಾಜಧಾನಿಗಳಾದ ಕೆಳದಿ, ಇಕ್ಕೇರಿ, ಬಿದನೂರು (ನಗರಕೋಟೆ) ಹಾಗೂ ಕವ¯ Éದುರ್ಗದ ಸ್ಮಾರಕಗಳ ದುರಸ್ತಿ, ನಿರ್ವಹಣೆಗೆ ಸಂಬಂಧಿಸಿದಂತೆ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದಸಿಂಗ್ ಅವರ ಪರವಾಗಿ ಸಚಿವರು ಉತ್ತರಿಸಿದರು.
ಸ್ಮಾರಕಗಳ ಸಂರಕ್ಷಣೆ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ಹಣದ ಕೊರತೆ ಇಲ್ಲ. ಅದಕ್ಕಿಂತ ಹೆಚ್ಚಾಗಿ ಬಿಗಿಯಾದ ನಿಯಮಗಳಿಂದ ಕೆಲ ಸಮಸ್ಯೆಗಳು ಎದುರಾಗಿವೆ ಎಂಬ ಆಂಶವನ್ನು ಸದನದಲ್ಲಿ ಒಪ್ಪಿಕೊಂಡ ಸಚಿವÀರು ಪುರಾತತ್ವ ಸ್ಮಾರಕಗಳ ಸಂರಕ್ಷಣೆಗೆ ಅಗತ್ಯ ಅನುದಾನ ಒದಗಿಸಲಾಗುವುದು. ಸ್ಮಾರಕಗಳ ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಇರುವ ಕಠಿಣ ನಿಯಮಗಳನ್ನು ಶೀಘ್ರದಲ್ಲಿಯೇ ಸಡಿಲಿಸಲು ಕ್ರಮವಹಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ರಾಜ್ಯ ಪುರಾತತ್ವ ಇಲಾಖೆಗೆ ಕಳೆದ 20 ವರ್ಷಗಳಲ್ಲಿ 12 ನೇ ಹಣಕಾಸು ಯೋಜನೆಯಡಿ 2006 ರಿಂದ 2010 ರವರೆಗೆ 22.50 ಕೋಟಿ ರೂ. ಮತ್ತು 13 ನೇ ಹಣಕಾಸು ಯೋಜನೆಯಡಿ 2012-2015 ರವರೆಗೆ 100 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರದ ಸಂಸ್ಕøತಿ ಮಂತ್ರಾಲಯವು ಬಿಡುಗಡೆ ಮಾಡಿದೆ ಎಂದು ಸಚಿವರು ವಿವರಿಸಿದರು.
ಹನ್ನೆರಡನೇ ಹಣಕಾಸು ಯೋಜನೆಯಡಿ 63 ಸ್ಮಾರಕಗಳು, ಒಂದು ಪುರಾತತ್ವ ನೆಲೆಯ ಅಭಿವೃದ್ಧಿ ಹಾಗೂ 13 ವಸ್ತು ಸಂಗ್ರಹಾಲಯಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಹದಿಮೂರನೇ ಹಣಕಾಸು ಯೋಜನೆಯಡಿ 135 ಸ್ಮಾರಕಗಳ ಸಂರಕ್ಷಣೆ ಕೈಗೊಳ್ಳಲಾಗಿದೆ ಎಂದು ಶ್ರೀನಿವಾಸ ಪೂಜಾರಿ ಅವರು ಮಾಹಿತಿ ನೀಡಿದರು. ಅಲ್ಲದೆ, 2018-19 ರಿಂದ 2020-21 ರ ವರೆಗೆ ಶಿವಪ್ಪ ನಾಯಕ ಕೋಟೆ, ನಗರಕ್ಕೆ 25.70 ಲಕ್ಷ ರೂ , ಕೋಟೆ ಹೊರಗಡೆಯ ಅರಮನೆ ಪ್ರದೇಶ, ನಗರಕ್ಕೆ 16.55 ಲಕ್ಷ ರೂ , ಕೆಳದಿಯ ರಾಮೇಶ್ವರ ದೇವಸ್ಥಾನಕ್ಕೆ 37.09 ಲಕ್ಷ ರೂ, ಇಕ್ಕೇರಿಯ ಅಘೋರೇಶ್ವರ ದೇವಸ್ಥಾನಕ್ಕೆ 7.50 ಲಕ್ಷ ರೂ, ಕವಲೆ ದುರ್ಗದ ಕೋಟೆ ಸ್ಮಾರಕಗಳಿಗೆ 49.46 ಲಕ್ಷ ರೂ. ವೆಚ್ಚದಲ್ಲಿ ಸ್ಮಾರಗಳ ಸಂರಕ್ಷಣೆÀ ಮತ್ತು ನಿರ್ವಹಣೆಗೆ ಈಗಾಗಲೇ ಎಲ್ಲಾ ಅಗತ್ಯ ಕ್ರಮವಹಿಸಲಾಗಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಿದನೂರ ಗ್ರಾಮದಲ್ಲಿ ಶಿವಪ್ಪ ನಾಯಕರ ಮತ್ತು ವಂಶಸ್ಥರ ಸಮಾಧಿಗಳ ಸಂರಕ್ಷಣೆ ಮತ್ತು ಹಾಗೂ ಇದರ ಸುತ್ತಲೂ ನೆಲಹಾಸು, ಮಾಹಿತಿ ಫಲಕ ಹಾಗೂ ಸರಳು ಸಂಪರ್ಕ ಬೇಲಿ ( ಚೈನ್ ಲಿಂಕ್ ಫೆನ್ಸಿಂಗ್ ) ಅಳವಡಿಸುವ ಕಾಮಗಾರಿಯನ್ನು 2021-22 ನೇ ಸಾಲಿನಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ 27 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಇದೇ ಆರ್ಥಿಕ ಸಾಲಿನಲ್ಲಿಯೇ ಪೂರ್ಣಗೊಳ್ಳಲಿದೆ ಎಂದರು.
ಇಕ್ಕೇರಿಯ ಅಘೋರೇಶ್ವರ ದೇವಸ್ಥಾನದ ಗರ್ಭಗುಡಿ ಛಾವಣಿ ಸೋರಿಕೆಯ ದುರಸ್ತಿ ಕಾರ್ಯವನ್ನು ಮುಂದಿನ ಮಾರ್ಚ್ ಮಾಸಾಂತ್ಯದ ವೇಳೆಗೆ ಪ್ರಾರಂಭಿಸಲಾಗುವುದು ಎಂದು ಅವರು ಸದನಕ್ಕೆ ಭರವಸೆ ನೀಡಿದರು.
ಭೈರಪ್ಪನವರ ‘ಪರ್ವ’ ಕಾದಂಬರಿ ಆಧಾರಿತ ನಾಟಕ
21 ಸ್ಥಳಗಳಲ್ಲಿ ಪ್ರದರ್ಶನ: ಸಚಿವ ಸುನೀಲಕುಮಾರ್
***************************************
ಹೆಸರಾಂತ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರ ಪರ್ವ ಕಾದಂಬರಿ ಆಧಾರಿತ ನಾಟಕವನ್ನು ರಾಜ್ಯದಲ್ಲಿ 21 ಸ್ಥಳಗಳಲ್ಲಿ ಪ್ರದರ್ಶನ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸುನೀಲಕುಮಾರ್ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಪಿ.ಆರ್.ರಮೇಶಕುಮಾರ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದರು. ಪ್ರಕಾಶ ಬೆಳವಾಡಿ ಅವರ ನಿರ್ದೇಶನದಲ್ಲಿ ಪ್ರದರ್ಶಿಸಲಾಗುತ್ತಿದೆ. ಕಾದಂಬರಿಯಲ್ಲಿ ರಂಗಪಠ್ಯಕ್ಕೆ ಅಗತ್ಯವಾದ ಭಾಗಗಳನ್ನು ಮಾತ್ರ ಸಂಭಾಷಣೆಯಾಗಿ ಬಳಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಪರ್ವ ನಾಟಕದ ನಿರ್ದೇಶಕರು ರಂಗಪಠ್ಯವಾಗಿ ರೂಪಿಸಿದ ಸಂಭಾಷಣೆಗಳನ್ನು ಮಾತ್ರ ಪ್ರದರ್ಶನಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಕಾದಂಬರಿಯಲ್ಲಿ ಪ್ರಸ್ತಾಪಿಸಿದ ಸನಾತನ ಆಹಾರ ಪದ್ಧತಿಯನ್ನು ಸಾರ್ವಜನಿಕ ನಾಟಕಪ್ರದರ್ಶನದಲ್ಲಿ ಅಳವಡಿಸಿಕೊಳ್ಳಲಾಗಿದೆಯೇ ಎಂಬುದಕ್ಕೆ ಅವರು ಸ್ಪಷ್ಟಪಡಿಸಿದರು.
ಇಂಧನ ಇಲಾಖೆಯ ಅಭಿವೃದ್ಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯೊಂದಿಗೆ ಶೀಘ್ರ ಸಭೆ ನಡೆಸಿ ವಿದ್ಯುತ್ ಉಪಕೇಂದ್ರಗಳ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕ್ರಮವಹಿಸಲಾಗುವುದು ಎಂದು ಇಂಧನ ಸಚಿವರೂ ಆಗಿರುವ ಸುನೀಲಕುಮಾರ್ ಅವರು ಸದಸ್ಯ ಕೆ.ಪ್ರತಾಪಚಂದ್ರಶೆಟ್ಟಿ ಅವರು ಕೇಳಿದ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದರು.
ಅನುದಾನಿತ ಶಾಲೆ-ಕಾಲೇಜುಗಳ 257 ಖಾಲಿ ಹುದ್ದೆಗಳ ಭರ್ತಿಗೆ ಕ್ರಮ : ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯನ
ರಾಜ್ಯದ ಅನುದಾನಿತ ಪ್ರೌಢ,ಪದವಿ ಪೂರ್ವ ಕಾಲೇಜುಗಳಲ್ಲಿ ನಿಧನ ಹಾಗೂ ನಿವೃತ್ತಿಯಿಂದ 2015 ಡಿಸೆಂಬರ್ ಅಂತ್ಯದವರೆಗೆ ತೆರವಾಗಿರುವ ಹುದ್ದೆಗಳಲ್ಲಿ 257 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೆ ಅನುಮತಿ ನೀಡಲಾಗಿದೆ ಮತ್ತು ಭರ್ತಿ ಮಾಡಿಕೊಳ್ಳುವ ಸಂದರ್ಭದಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸದ ಕಾರಣ ಸಮಸ್ಯೆ ಉದ್ಭವಿಸಿದ್ದು,ಅದನ್ನು ಬಗೆಹರಿಸಲಾಗುವುದು. ಸದಸ್ಯರ ಬೇಡಿಕೆಯ ಅನುಸಾರ ಎಲ್ಲ ಹುದ್ದೆಗಳ ಭರ್ತಿಗೆ ಅನುಮತಿಗೆ ಸಂಬಂಧಿಸಿದಂತೆ ಶೀಘ್ರ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ ನಾರಾಯಣ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರಾದ ಶಶೀಲ್ ನಮೋಶಿ, ಕೆ.ಟಿ.ಶ್ರೀಕಂಠೇಗೌಡ,ಎಸ್.ವಿ.ಸಂಕನೂರು, ಪುಟ್ಟಣ, ಅರುಣ ಶಹಾಪುರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು.
ಮೊದಲು ಈಗ ಅನುಮತಿ ನೀಡಲಾಗಿರುವ ಹುದ್ದೆಗಳನ್ನು ನಿಯಮಾನುಸಾರ ಭರ್ತಿ ಮಾಡಿಕೊಳ್ಳಿ;ಉಳಿದವುಗಳಿಗೆ ನಂತರ ಅನುಮತಿ ನೀಡುವುದಕ್ಕೆ ಆರ್ಥಿಕ ಇಲಾಖೆ ಸಮ್ಮತಿ ಪಡೆದು ಕ್ರಮವಹಿಸಲಾಗುವುದು ಎಂದರು.
2015 ಡಿಸೆಂಬರ್ ಅಂತ್ಯದವರೆಗೆ ರಾಜ್ಯದ ಅನುದಾನಿತ ಪ್ರೌಢ,ಪದವಿ ಪೂರ್ವ ಕಾಲೇಜುಗಳಲ್ಲಿ 2081 ಹುದ್ದೆಗಳು ತೆರವಾಗಿದ್ದು, ಅವುಗಳಲ್ಲಿ ಸರಕಾರ 257 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಿದೆ;ಕೋವಿಡ್ ನೆಪ ಹಾಗೂ ಆರ್ಥಿಕ ಮಿತವ್ಯಯದ ನೆಪದಲ್ಲಿ ತಡೆಹಿಡಿಯಲಾಗಿರುವುದು ಸರಿಯಲ್ಲ. ಅವುಗಳ ಜೊತೆಗೆ 2015ರವರೆಗೆ ಖಾಲಿ ಇರುವ 2081 ಹುದ್ದೆಗಳು ಮತ್ತು 2021ರವರೆಗೆ ಖಾಲಿಯಾಗಿರುವ ಎಲ್ಲ ಹುದ್ದೆಗಳ ಭರ್ತಿಗೆ ಅನುಮತಿ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು ಇದೇ ಗುರುವಾರದೊಳಗೆ ಶಿಕ್ಷಣ,ಉನ್ನತ ಶಿಕ್ಷಣ ಸಚಿವರು,ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರದಿಂದ ಚುನಾಯಿತರಾದ ಸದಸ್ಯರು,ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆಗೂಡಿ ಸಭೆ ನಡೆಸಿ ತೀರ್ಮಾನಕ್ಕೆ ಬನ್ನಿ;ನಂತರ ಸದನಲ್ಲಿ ಈ ಕುರಿತು ಮುಕ್ತವಾಗಿ ಚರ್ಚಿಸೋಣ ಎಂದು ಹೇಳಿ ಈ ವಿಷಯಕ್ಕೆ ವಿರಾಮ ಎಳೆದರು.
ಪುನೀತ್,ರಾವತ್,ರೋಸಯ್ಯ ಸೇರಿದಂತೆ ಅಗಲಿದ ಗಣ್ಯರಿಗೆ ಮೇಲ್ಮನೆಯಲ್ಲಿ ಸಂತಾಪ :
ಇತ್ತೀಚೆಗೆ ನಿಧನರಾದ ನಟ ಪುನೀತ್, ಸಶಸ್ತ್ರಪಡೆಗಳ ಮುಖ್ಯಸ್ಥ ಬಿ.ಪಿ.ಎನ್.ರಾವತ್,ಮಾಜಿ ರಾಜ್ಯಪಾಲ ಕೆ.ರೋಸಯ್ಯ ಸೇರಿದಂತೆ ಅಗಲಿದ ಗಣ್ಯರಿಗೆ ಮೇಲ್ಮನೆಯಲ್ಲಿ ಸಂತಾಪ ಸೂಚಿಸಲಾಯಿತು.
ಮಾಜಿ ಸಚಿವರಾಗಿದ್ದ ಎಸ್.ಆರ್.ಮೋರೆ, ವಿರೂಪಾಕ್ಷಪ್ಪ ಅಗಡಿ, ಸ್ವಾತಂತ್ರ್ಯ ಹೋರಾಟಗಾರ ಪಿ.ಭೋಜರಾಜ ಹೆಗ್ಡೆ, ಹಿರಿಯ ವಿದ್ವಾಂಸ ಲೇಖಕ ಹಾಗೂ ಪ್ರವಚನಕಾರರಾಗಿದ್ದ ಕೆ.ಎಸ್.ನಾರಾಯಣಚಾರ್ಯ, ಹಿರಿಯ ಬಯಲಾಟ ಕಲಾವಿದೆ ನಾಡೋಜ ಕಪಗಲ್ಲು ಪದ್ಮಮ್ಮ, ಹಿರಿಯ ನಟ ಶಿವರಾಂ ಅವರಿಗೆ ವಿಧಾನಪರಿಷತ್‍ನಲ್ಲಿ ಸಂತಾಪ ಸೂಚಿಸಲಾಯಿತು.
ಸಭಾಪತಿ ಬಸವರಾಜ ಹೊರಟ್ಟಿ ಅವರು ಇತ್ತೀಚೆಗೆ ನಿಧನರಾದ ಗಣ್ಯರ ನಡೆದು ಬಂದ ದಾರಿ, ಅವರ ಸಮಾಜಮುಖಿ ಕಾರ್ಯಗಳು ಮತ್ತು ನಾಡಿಗೆ ನೀಡಿದ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ಸಂತಾಪ ಸೂಚಕ ಗೊತ್ತುವಳಿ ಬೆಂಬಲಿಸಿ ಸಭಾನಾಯಕ ಹಾಗೂ ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ವಿರೋಧಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು ಅವರು ಮಾತನಾಡಿದರು.
ನಂತರ ಮೃತರ ಗೌರವಾರ್ಥ ಸದಸ್ಯರುಗಳು ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿದರು.
ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ಪೂರ್ಣ ನಿಷೇಧ ಸಚಿವ ಕೋಟಾ ಶ್ರೀನಿವಾಸ್ ****************************** ಹಸ್ತಚಾಲಿತ ಮಲ ಹೋರುವ ಪದ್ಧತಿಯನ್ನು ಪೂರ್ಣವಾಗಿ ನಿಷೇಧಿಸಲಾಗುವುದು. ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ರಾಜ್ಯದಲ್ಲಿರುವ ಮ್ಯಾನ್ಯುವೆಲ್ ಸ್ಕ್ವಾವೆಂಜರ್‍ಗಳ ಬದುಕು ಹಸನ ಮಾಡಲು ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳಲಿದೆ. ಈ ಕುರಿತಂತೆ ಜನವರಿ 10ರೊಳಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾದ ಕೋಟಾ ಶ್ರೀನಿವಾಸ್ ಪೂಜಾರ ಅವರು ಸೋಮವಾರ ಮೇಲ್ಮನೆಗೆ ತಿಳಿಸಿದರು.
ಸದಸ್ಯ ಬಿ.ಕೆ. ಹರಿಪ್ರಸಾದ ಅವರು ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ಪದ್ಧತಿ ಕುರಿತಂತೆ ಗಮನ ಸೆಳೆಯುವ ಪ್ರಶ್ನೆಗೆ ಉತ್ತರಿಸಿದ ಅವರು ಭಾರತ ಸರ್ಕಾರವು 2013ರಲ್ಲಿ ಮ್ಯಾನ್ಯುಯಲ್ ಸ್ಕ್ವಾವೆಂಜರ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ ಅಧಿನಿಯಮ 2013ರ ಕಾಯ್ದೆ ಹಾಗೂ ನಿಯಮಗಳನ್ನು ರೂಪಿಸಿ ಜಾರಿಗೆ ತರಲಾಗಿದೆ. ಈ ಪದ್ಧತಿಯನ್ನು ಅನುಸರಿಸುವವ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗ ಮತ್ತು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಬಗ್ಗೆ ಕಾನೂನಿನ ಅರಿವು ಮೂಡಿಸುವ ಮತ್ತು ಪುನರ್ವಸತಿ ಕಲ್ಪಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಎಂದು ಕ್ರಮಗಳ ಕುರಿತಂತೆ ತಿಳಿಸಿದರು.
ರಾಜ್ಯ ಮಟ್ಟದಲ್ಲಿ ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಸಫಾಯಿ ಕರ್ಮಚಾರಿಗಳ ಸಮುದಾಯದ ಪ್ರತಿನಿಧಿಗಳನ್ನು ಹಾಗೂ ಅನುಷ್ಠಾನ ಇಲಾಖೆಗಳು ಒಳಗೊಂಡಂತೆ ಉನ್ನತ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಸದರಿ ಸಮಿತಿಯು 6 ತಿಂಗಳಿಗೊಮ್ಮೆ ಸಭೆ ಸೇರಿ ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ರಾಜ್ಯದಲ್ಲಿ 12 ಜಿಲ್ಲೆಗಳಲ್ಲಿ ಸಫಾಯಿ ಕರ್ಮಚಾರಿ ಆಯೋಗದಿಂದ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಬಾಕಿ 18 ಜಿಲ್ಲೆಗಳಲ್ಲಿ ಬರುವ ಫೆಬ್ರವರಿ 22 ಮಾಹೆಯೊಳಗಾಗಿ ಸಮೀಕ್ಷೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು. ರಾಜ್ಯದಲ್ಲಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್‍ನಲ್ಲಿ ತೊಡಗಿರುವವರನ್ನು ಕಾಯಿದೆಗಳ ನಿಯಮಾನುಸಾರ 5080 ಜನರನನ್ನು ಗುರುತಿಸಲಾಗಿದೆ. ಇವರಿಗೆ ಪುನರ್ವಸತಿ ಕಾರ್ಯಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಒಂದು ಬಾರಿಗೆ ನಗದು ಸಹಾಯಧನವಾಗಿ 40,000 ರೂ.ಗಳನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿದೆ. ಇದರೊಂದಿಗೆ ರಾಜ್ಯ ಸರ್ಕಾರದ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವತಿಯಿಂದ ಸಾಲ ಮತ್ತು ಸಹಾಯಧನ ನೀಡಲಾಗುತ್ತಿದೆ. ಈಗಾಗಲೇ ಗುರುತಿಸಲ್ಪಟ್ಟ ಸಫಾಯಿ ಕರ್ಮಚಾರಿಗಳಿಗೆ ಗುರುತಿನ ಚೀಟಿ ನೀಡುವ ಕೆಲಸ ನಡೆದಿದೆ ಎಂದು ತಿಳಿಸಿದರು.
ಮ್ಯಾನ್ಯುವೆಲ್ ಸ್ವಚ್ಛಗೊಳಿಸುವಾಗ ಮೃತಪಟ್ಟಲ್ಲಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿರುತ್ತವೆ. ಮೃತಪಟ್ಟ ಕುಟುಂಬದ ಅವಲಂಬಿತರಿಗೆ 10 ಲಕ್ಷ ರೂ.ಗಳ ಪರಿಹಾರ ಹಣವನ್ನು ನೀಡಲಾಗಿದೆ. ಕಳೆದ 1995 ರಿಂದ ಈವರೆಗೆ 88 ಕುಟುಂಬಗಳಿಗೆ ಪರಿಹಾರಧನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ನಿರ್ಮೂಲನೆ ಮಾಡಲು ರಾಜ್ಯ ಸರ್ಕಾರವು Sಣಚಿಣe ಂಛಿಣioಟಿ ಠಿಟಚಿಟಿ ಜಿoಡಿ ಇಟimiಟಿಚಿಣioಟಿ oಜಿ ಒಚಿಟಿuಚಿಟ ಛಿಟeಚಿಟಿiಟಿg oಜಿ seತಿeಡಿs ಚಿಟಿಜ seಠಿಣiಛಿ ಣಚಿಟಿಞs ಎಂಬ ಕ್ರಿಯಾ ಯೋಜನೆಯನ್ನು ರೂಪಿಸಿ ಸಂಬಂಧಿಸಿದ ಇಲಾಖೆಗೆ ಕಳುಹಿಸಲಾಗಿದೆ. ಮ್ಯಾನ್ಯುವೆಲ್ ಸೆಫ್ಟಿಕ್ ಟ್ಯಾಂಕ್ ಹಾಗೂ ತೆರೆದ ಚರಂಡಿ ಗಟಾರಗಳನ್ನು ಸ್ವಚ್ಛಗೊಳಿಸಲು ಆಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಬಳಸಲಾಗುತ್ತದೆ. ಈವರೆಗೆ ನಗರಾಭಿವೃದ್ಧಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಸ್ವಚ್ಛತೆಗಾಗಿ ಆಧುನಿಕ ತಂತ್ರಜ್ಞಾನ ಆಧಾರಿತ 177 ಸಕ್ಕಿಂಗ್ ಮಿಷಿನ್, 255 ಜಟ್ಟಿಂಗ್ ಮಶೀನ್, 50 ಡೀಸಾಟ್ಟಿಂಗ್, 28 ರಾಡರಿಂಗ್ ಯಂತ್ರ, 132 ಸಕ್ಕಿಂಗ್ ಕಮ್ ಜಟ್ಟಿಂಗ್ ಮಶೀನ್ , 13 ಇತರ ಸ್ವಚ್ಛತೆಯ ಯಂತ್ರಗಳನ್ನು ಖರೀದಿಸಲಾಗಿದೆ. ರಾಜ್ಯದಲ್ಲಿ ಈ ಹಿಂದೆ ಇದ್ದ 30,341 ಅನೈರ್ಮಲ್ಯ ಶೌಚಾಲಯಗಳನ್ನು ತೆರವುಗೊಳಿಸಿ ನೈರ್ಮಲ್ಯ ಶೌಚಾಲಯಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಚರ್ಚೆಯಲ್ಲಿ ಸದಸ್ಯರಾದ ಧರ್ಮಸೇನ, ತಿಪ್ಪೇಸ್ವಾಮಿ, ರಮೇಶ ಅವರು ಭಾಗವಹಿಸಿ ಹಸ್ತ ಚಾಲಿತ ಸ್ವಚ್ಛತಾ ಕಾರ್ಯವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಕೆಲಸಗಾರರಿಗೆ ಸುರಕ್ಷಾ ಸಾಮಗ್ರಿಗಳು ಆಧುನಿಕ ಸ್ವಚ್ಛತಾ ಯಂತ್ರೋಪಕರಣಗಳನ್ನು ಒದಗಿಸಬೇಕು. ಈ ಪದ್ಧತಿ ಅನುಸರಿಸುವವರ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ರಾಜ್ಯ ಸರ್ಕಾರದ ಇಥೇನಾಲ್ ನೀತಿಗೆ ಕ್ರಮ *********************************** ಕರ್ನಾಟಕ ವಾರ್ತೆ (ಸುವರ್ಣ ವಿಧಾನ ಸೌಧ ಬೆಳಗಾವಿ) ಡಿ.13: ರಾಜ್ಯದಲ್ಲಿ ಇಥೇನಾಲ್ ಉತ್ಪಾದಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ನೀತಿ ರೂಪಿಸುವ ಕುರಿತಂತೆ ಶೀಘ್ರವೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದೆಂದು ರಾಜ್ಯ ಕೈಮಗ್ಗ ಮತ್ತು ಜವಳಿ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ಭರವಸೆ ನೀಡಿದರು. ವಿಧಾನ ಪರಿಷತ್‍ನಲ್ಲಿಂದು ಸದಸ್ಯರಾದ ಮಹಾಂತೇಶ ಕವಟಗಿಮಠ ಅವರ ಗಮನ ಸೆಳೆಯುವ ಪ್ರಶ್ನೆಯ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಅವರು ಇಥೇನಾಲ್ ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳಿಗೆ ಯಾವ ರೀತಿಯ ಪ್ರೋತ್ಸಾಹ ನೀಡಬೇಕು ಎಂಬುವುದನ್ನು ಚರ್ಚಿಸಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿದೆ ಎಂದರು. ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆಯಡಿ ಕಬ್ಬು ಬೆಳೆಯನ್ನು ಸೇರ್ಪಡೆಗೊಳಿಸಬೇಕು. ರೈತರ ವಿಮಾ ಕಂತುಗಳ ಶೇಕಡಾವಾರು ಪಾಲನಾ ಸರ್ಕಾರದ ವತಿಯಿಂದ ತುಂಬಲು ಕ್ರಮಕೈಗೊಳ್ಳಬೇಕೆಂಬ ಮನವಿಗೆ ಸ್ಪಂದಿಸಿದ ಸಚಿವರಾದ ಮುನೇನಕೊಪ್ಪ ಅವರು ಬೆಳೆ ವಿಮೆ ಪಾಲಿಸಿ ಕುರಿತಂತೆ ರೈತರಿಗೆ ಅನುಕೂಲಕರವಾದ ನೀತಿಯನ್ನು ಸರ್ಕಾರ ಪಾಲಿಸುತ್ತಾ ಬಂದಿದೆ. ಈಗಾಗಲೇ ಹೋಬಳಿ ಮಟ್ಟದಿಂದ ಗ್ರಾಮ ಮಟ್ಟಕ್ಕೆ ಇದೀಗ ಆ್ಯಪ್ ಮೂಲಕ ರೈತನೇ ತನ್ನ ಹೊಲದ ವಿಮೆ ಭರ್ತಿ ಅವಕಾಶ ಮಾಡಿಕೊಡಲಾಗಿದೆ. ಕಬ್ಬಿನ ಬೆಳೆಯನ್ನು ಫಸಲ ಬಿಮಾ ಯೋಜನೆಯಡಿ ಸೇರ್ಪಡೆ ಮಾಡುವ ಕುರಿತಂತೆ ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಹಿರಿಯ ಸದಸ್ಯರಾದ ಎಸ್.ಆರ್. ಪಾಟೀಲ ಅವರು ಕಬ್ಬು ಬೆಳೆಗಾರರು ತೂಕದ ವಂಚನೆಯಿಂದ ಮುಕ್ತಗೊಳಿಸಲು ಸರ್ಕಾರ ವತಿಯಿಂದಲೇ ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ ಅತ್ಯಾಧುನಿಕ ತೂಕದ ಯಂತ್ರಗಳನ್ನು ಅಳವಡಿಸುವ ಕುರಿತು ಸಲಹೆಗೆ ಮನ್ನಣೆ ನೀಡಿದ ಸಚಿವರು ಈ ಕುರಿತು ಕ್ರಮ ವಹಿಸಲಾಗುವುದೆಂದು ತಿಳಿಸಿದರು.
ಹಿರಿಯ ಸದಸ್ಯರಾದ ಸಿದ್ದು ಸವದಿ ಅವರು ಹಲವು ಕಾರ್ಖಾನೆಗಳು ಕಬ್ಬು ಪೂರೈಸಿದ ಬೆಳೆಗಾರರ ಬಾಕಿ ಹಣ ಪಾವತಿ ಮಾಡಿರುವುದಿಲ್ಲ. ತಕ್ಷಣ ಬಾಕಿ ಪಾವತಿಗೆ ಕ್ರಮ ವಹಿಸಬೇಕು. ಕೇಂದ್ರ ಸರ್ಕಾರ ಈಗಾಗಲೇ ಇಥೇನಾಲ್ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ.ಕೆಲವು ರಾಜ್ಯಗಳು ಕೇಂದ್ರ ಸರ್ಕಾರದ ನೆರವಿನ ಜೊತೆಗೆ ಹಲವು ರಾಜ್ಯ ಸರ್ಕಾರಗಳು ಪ್ರತ್ಯೇಕ ನೀತಿ ರೂಪಿಸಿ ಪ್ರೋತ್ಸಾಹ ನೀಡುತ್ತಿವೆ. ಕರ್ನಾಟಕ ಸರ್ಕಾರವು ಪ್ರತ್ಯೇಕವಾದ ಎಥೇನಾಲ್ ಉತ್ಪಾದನಾ ಪ್ರೋತ್ಸಾಹ ನೀತಿ ರೂಪಿಸುವಂತೆ ಸಚಿವರ ಗಮನ ಸೆಳೆದರು.
ಸಚಿವರ ಮುನೇನಕೊಪ್ಪ ಅವರು ಮಾಹಿತಿ ನೀಡಿ ರಾಜ್ಯದಲ್ಲಿ 88 ಸಕ್ಕರೆ ಕಾರ್ಖಾನೆಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 65 ಸಕ್ಕರೆ ಕಾರ್ಖಾನೆಗಳು ಕಾರ್ಯನಿರತವಾಗಿವೆ. 2016-17 ಹಾಗೂ 2017-18ನೇ ಸಾಲಿನಲ್ಲಿ ಯಾವುದೇ ಬಾಕಿಯನ್ನು ಕಾರ್ಖಾನೆಗಳು ಉಳಿಸಿಕೊಂಡಿಲ್ಲ. 2018-19ನೇ ಸಾಲಿನಲ್ಲಿ 8.93 ಕೋಟಿ, 2019-20ನೇ ಸಾಲಿನಲ್ಲಿ 5.80 ಕೋಟಿ ಬಾಕಿ ಉಳಿಸಿಕೊಂಡಿವೆ. 2020-21ನೇ ಸಾಲಿನಲ್ಲಿ ಯಾವುದೇ ಬಾಕಿ ಇರುವುದಿಲ್ಲ. 2016-17 ರಿಂದ 2020-21ನೇ ಹಂಗಾಮುಗಳಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳು ಕೇಂದ್ರ ಸರ್ಕಾರ ನಿಗದಿಪಡಿಸಿದ ಎಫ್.ಆರ್.ಪಿ. ದರಕ್ಕಿಂತ ಹೆಚ್ಚಿನ ಕಬ್ಬಿನ ಬಿಲ್ಲನ್ನು ರೈತರಿಗೆ ಪಾವತಿಸಿವೆ ಎಂದು ಮಾಹಿತಿ ನೀಡಿದರು. ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ವಸೂಲಾತಿ ಪ್ರಮಾಣಪತ್ರವನ್ನು ಹೊರಡಿಸಿ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಖಾಸಗಿ ಐಟಿಐ ಕಾಲೇಜುಗಳನ್ನು ಅನುದಾನಕ್ಕೊಳಪಡಿಸುವ ಪ್ರಸ್ತಾವ ಇಲ್ಲಸಚಿವ ಡಾ. ಅಶ್ವಥ್ ನಾರಾಯಣ******************************* ಕರ್ನಾಟಕ ವಾರ್ತೆ (ಸುವರ್ಣ ವಿಧಾನ ಸೌಧ ಬೆಳಗಾವಿ) ಡಿ.13: ರಾಜ್ಯದಲ್ಲಿರುವ ಅನುದಾನರಹಿತ ಖಾಸಗಿ ಐಟಿಐ ಕಾಲೇಜುಗಳನ್ನು ಅನುದಾನಕ್ಕೊಳಪಡಿಸುವ ಯಾವುದೆ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವಥ್ ನಾರಾಯಣ ಅವರು ಇಂದು ಮೇಲ್ಮನೆಯಲ್ಲಿ ತಿಳಿಸಿದರು.
ಧಾರ್ಮಿಕ ಸಂಸ್ಥೆಗಳ ಬಾಕಿ ವಿದ್ಯುತ್ ಬಿಲ್ ಮನ್ನಾ ಇಲ್ಲ –ಸಚಿವ ವಿಸುನೀಲಕುಮಾರ್
ಜಿಲ್ಲೆಗಳಲ್ಲಿ ಅಗತ್ಯಕ್ಕನುಗುಣವಾಗಿ ನ್ಯಾಯಬೆಲೆ ಅಂಗಡಿ ಮಂಜೂರು:ಸಚಿವ ಕತ್ತಿ