Belagavi infra - Belagavi Latest news | Belgaum newsBelagavi infra - Belagavi Latest news | Belgaum news
  • Home
  • Web-Story
  • Smart City
  • City
    • About Belagavi
    • Todays Petrol Diesel price in Belagavi
    • Shopping
    • Hospitals
    • Entertainment
    • Hotels
    • Education
    • E-paper
    • IT Companies
    • Police Stations
    • Property
  • Projects
  • Transportation
    • Railway
    • Flights
  • Industries
    • SEZ / Aerospace Industries
    • Manufacturing Industries
    • Sugar Industries
    • Textile Industries
Search
  • Web-Stories
  • Flights
  • Industries
  • Railway
  • Smart City
  • Projects
  • Transport
  • Development
© 2022 Belagavi Infra | All Rights Reserved.
Reading: ಸಶಸ್ತ್ರ ಮೀಸಲು ಪೋಲಿಸ್ ಕಾನ್ಸ್ ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ
Share
Notification Show More
Latest News
Redbird Flying Training Academy, Belagavi Airport, Belagavi
Redbird Aviation starts its training facility in Belagavi
Airport Aviation Latest News Training
Karnataka election 2023
Karnataka assembly election on May 10 – Results on May 13
Election Latest News Politics
Belagavi-Secunderabad express train | File photo
Belagavi-Secunderabad express train service extended
Latest News Railway
G R Infraprojects ltd bags Belagavi Bypass road and Belagavi-Raichur NH Projects
G R Infraprojects Ltd bags Belagavi Bypass and Belagavi-Hungund-Raichur highway projects
Highway Infrastructure Latest News
Belagavi suvarna vidhana soudha,suvarna vidhana soudha belagavi,belgaum suvarna vidhana soudha in kannada,suvarna vidhana soudha is located in which district of karnataka,Belagavi suvarna vidhana soudha statues,suvarna vidhana soudha statues,suvarna vidhana soudha statues unvield,suvarna vidhana soudha statues unveiled,suvarna vidhana soudha statues unveiled bommai,suvarna vidhana soudha rani chennamma statues,suvarna vidhana soudha sangolli rayanna statues,suvarna vidhana soudha Ambedkar statues
CM Bommai unveils 3 statues infront of Suvarna Soudha – tall Gandhi statue to come up soon
Latest News Suvarna vidhana soudha
Belagavi infra - Belagavi Latest news | Belgaum newsBelagavi infra - Belagavi Latest news | Belgaum news
  • Web-Stories
  • Flights
  • Industries
  • Railway
  • Smart City
  • Projects
  • Transport
  • Development
Search
  • Home
  • Web-Story
  • Smart City
  • City
    • About Belagavi
    • Todays Petrol Diesel price in Belagavi
    • Shopping
    • Hospitals
    • Entertainment
    • Hotels
    • Education
    • E-paper
    • IT Companies
    • Police Stations
    • Property
  • Projects
  • Transportation
    • Railway
    • Flights
  • Industries
    • SEZ / Aerospace Industries
    • Manufacturing Industries
    • Sugar Industries
    • Textile Industries
Follow US
  • Web-Stories
  • Flights
  • Industries
  • Railway
  • Smart City
  • Projects
  • Transport
  • Development
© 2022 Belagavi Infra | All Rights Reserved.
Latest NewsPolice

ಸಶಸ್ತ್ರ ಮೀಸಲು ಪೋಲಿಸ್ ಕಾನ್ಸ್ ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ

Published September 8, 2021
Share
Arag jeenedra,Arag gnyanendra,araga jnanendra,Arag jnyanedra in Belagavi,Belagavi police school,Belagavi police parade
SHARE

ಬೆಳಗಾವಿ : ನಾಗರಿಕರ ಪ್ರಾಣ, ಆಸ್ತಿ ರಕ್ಷಣೆ ಹೊಣೆಯನ್ನು ಹೊತ್ತಿರುವ ಪೋಲಿಸರು, ಅತ್ಯಾಧುನಿಕ ಉಪಕರಣಗಳನ್ನು ಬಳಸಿ ದೇಶದ ಶಾಂತಿ ಸುವ್ಯವಸ್ಥೆ ಹದಗೆಡಿಸುವ ದೇಶ ದ್ರೋಹಿಗಳ ವಿರುದ್ಧ ಹೋರಾಡುವ ಕೆಲಸವನ್ನು ಮಾಡಬೇಕಿದೆ ಎಂದು ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹೇಳಿದರು.

ಬೆಳಗಾವಿ ನಗರದ ಕಂಗ್ರಾಳಿಯ ಕೆ.ಎಸ್.ಆರ್.ಪಿ ತರಬೇತಿ ಶಾಲೆಯಲ್ಲಿ ಬುಧವಾರ (ಸೆ.8) ರಂದು ನಡೆದ ಕರ್ನಾಟಕ ರಾಜ್ಯ ಮೀಸಲು ಪೋಲಿಸ್ ತರಬೇತಿ ಶಾಲೆ 1 ನೇ ತಂಡದ ಸಶಸ್ತ್ರ ಮೀಸಲು ಪೋಲಿಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಹಾಗೂ “ಸ್ವಯಂ ರಕ್ಷಣಾ ಕೌಶಲ್ಯ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಡಿ ಭಾಗದಲ್ಲಿ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶಕ್ಕಾಗಿ ಹೋರಾಡುತ್ತಿದ್ದಾರೆ. ಪೋಲಿಸರು ದೇಶದ ಒಳಗಡೆ ಇರುವ ಭ್ರಷ್ಟಾಚಾರಿಗಳು, ರಾಜ್ಯ ದ್ರೋಹಿಗಳು ಹಾಗೂ ಕಾನೂನು ಬಾಹಿರವಾಗಿ ನಡೆದುಕೊಳ್ಳುವವರ ವಿರುದ್ಧವಾಗಿ ಹೋರಾಡುತ್ತಿದ್ದಾರೆ. ಗಡಿಯಲ್ಲಿ ಶತ್ರುಗಳು ನೇರವಾಗಿ ಕಣ್ಣಿಗೆ ಕಾಣುತ್ತಾರೆ ಆದರೆ, ದೇಶದ ಒಳಗಿನ ಅಪರಾಧಿಗಳನ್ನು ಹುಡುಕಿ ತೆಗೆದು ಶಿಕ್ಷೆ ನೀಡುವ ಕೆಲಸವನ್ನು ಪೊಲೀಸ್ ಇಲಾಖೆಯು ಮಾಡುತ್ತಿದೆ. ಆ ನಿಟ್ಟಿನಲ್ಲಿ ಸೂಕ್ತ ತರಬೇತಿ ಪಡೆಯುವುದು ಅತೀ ಅವಶ್ಯಕ ಎಂದು ಹೇಳಿದರು.

ಬಾಂಬ್ ಸ್ಫೋಟ್, ಸೈಬರ್ ಕ್ರೈಂ, ಭ್ರಷ್ಟಾಚಾರ ಸೇರಿದಂತೆ ಇನ್ನೂ ಹಲವಾರು ಕಾನೂನು ಬಾಹಿರ ಕುತಂತ್ರದಿಂದ ದೇಶವನ್ನು ಕಾಪಾಡುವ ನಿಟ್ಟಿನಲ್ಲಿ ಪೋಲಿಸ್ ಇಲಾಖೆಯು ಹಗಲಿರುಳೆನ್ನದೆ ಶ್ರಮಿಸುತ್ತಿದ್ದು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

- Advertisement -
Arag jeenedra,Arag gnyanendra,araga jnanendra,Arag jnyanedra in Belagavi,Belagavi police school,Belagavi police parade

ಪೊಲೀಸ್ ಇಲಾಖೆಯಲ್ಲಿ ಕಳೆದ 10 ವರ್ಷಕ್ಕೆ ಹೋಲಿಸಿದರೆ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದ್ದು, ದೊಡ್ಡ ಐ.ಟಿ.ಬಿ.ಟಿ ಕಂಪನಿಗಳಲ್ಲಿ ನೀಡುವಂತಹ ವೇತನ ಸೌಲಭ್ಯಗಳನ್ನು ಪೋಲಿಸರಿಗೂ ಸಹ ನೀಡಲಾಗುತ್ತಿದೆ.

40 ಪ್ರತಿಶತ ದಷ್ಟು ಕುಟುಂಬಗಳಿಗೆ 2 ಕೋಣೆಗಳುಳ್ಳ ವಸತಿ ವ್ಯವಸ್ಥೆ ಹಾಗೂ ಪೋಲಿಸ್ ಕಾನ್ಸ್ ಟೇಬಲ್ ಗಳ ಕುಟುಂಬಕ್ಕೆ ಸಹಾಯಕವಾಗುವ ಯೋಜನೆಗಳನ್ನು ಪೊಲೀಸರ ಮಕ್ಕಳಿಗೆ ಶೈಕ್ಷಣಿಕ ಆರೋಗ್ಯ ಮತ್ತು ವಿವಿಧ ಬಗೆಯ ಕೌಶ್ಯಾಭಿವೃದ್ಧಿ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ತರಬೇತಿ ಪಡೆಯುತ್ತಿದ್ದ 171 ಪ್ರಶಿಕ್ಷಣಾರ್ಥಿಗಳಲ್ಲಿ 10 ಎಸ್ಸೆಸ್ಸೆಲ್ಸಿ, 34 ಪಿ.ಯು.ಸಿ, 85 ಪದವಿ , 18 ಸ್ನಾತಕೋತ್ತರ, 4 ಡಿಪ್ಲೊಮಾ , 17 ಐ.ಟಿ.ಐ ತರಬೇತಿ ‌ಪಡೆದವರಾಗಿದ್ದಾರೆ. ಇತ್ತೀಚೆಗೆ ಉನ್ನತ ಶಿಕ್ಷಣ ಪಡೆದವರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಇಲಾಖೆಗೆ ಸೇರುತ್ತಿರುವುದು ನಿಜಕ್ಕೂ ಖುಷಿಯ ವಿಷಯ ಎಂದು ಅವರು ಹೇಳಿದರು

ಆಧುನಿಕ ಉಪಕರಣಗಳನ್ನು ಬಳಸಿ ಹಲವಾರು ಹೊಸ ತಂತ್ರಜ್ಞಾನದ ಸುವ್ಯವಸ್ಥಿತ ಸಮಾಜದ ಶಾಂತಿ ಕದಡುವ ಕೆಲಸ ಹಾಗೂ ಇತರರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವ ಕೆಲಸವನ್ನು ಇಂದಿನ ದಿನಗಳಲ್ಲಿ ಹಲವು ವಂಚಕರು ಮಾಡುತ್ತಿದ್ದು, ಅವೆಲ್ಲವನ್ನೂ ಸಮರ್ಥವಾಗಿ ಎದುರಿಸುವ ಸಲುವಾಗಿ ಎಫ್ ಎಸ್ ಎಲ್ ನಂತಹ ಲ್ಯಾಬ್ ಗಳ ನಿರ್ಮಾಣಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಪೊಲೀಸ್ ಇಲಾಖೆ ಭರಿಸುತ್ತಿದೆ. ಸೈಬರ್ ಕ್ರೈಮ್ ವಿಭಾಗವನ್ನು ಮತ್ತಷ್ಟು ಗಟ್ಟಿಗೊಳಿಸಲಾಗುತ್ತಿದೆ ಎಂದು ಹೇಳಿದರು.

ಉತ್ತಮ ತಂತ್ರಜ್ಞಾನದ ಬಳಕೆ ಹಾಗೂ ಆಧುನಿಕತೆಯ ಸ್ಪರ್ಶವನ್ನು ನೀಡುವ ಕಾರ್ಯವನ್ನು ಹಾಗೂ ಎಲ್ಲಾ ರೀತಿಯ ಸೌಲಭ್ಯವನ್ನು ಪೊಲೀಸ್ ಇಲಾಖೆಗೆ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂದು ಹೇಳಿದರು.

ಪ್ರಶಿಕ್ಷಣಾರ್ಥಿಗಳು ಇನ್ನು ಮುಂದೆ ವೃತ್ತಿ ಬದುಕಿಗೆ ಕಾಲಿಡುತ್ತಿದ್ದು, ತನಗೆ ಭೋದಿಸಿದ ಪ್ರತಿಜ್ಞಾ ವಿಧಿ ಕೇವಲ ಈ ಸಮಯಕ್ಕೆ ಸೀಮಿತವಾಗದೆ ನಿಮ್ಮ ನಿವೃತ್ತಿಯ ಸಮಯದ ವರೆಗೂ ಅದನ್ನು ಪಾಲಿಸುವ ಕೆಲಸವನ್ನು ನೀವು ಮಾಡಬೇಕು. ಅದಕ್ಕೆ ಬದ್ಧವಾಗಿ ಕಾರ್ಯವನ್ನು ಮಾಡಬೇಕು ಎಂದು ಸಚಿವ ಜ್ಞಾನೇಂದ್ರ ಅವರು ಕರೆ ನೀಡಿದರು.

ನಿರ್ಗಮನ ಪಥಸಂಚಲನದಲ್ಲಿ 8ನೇ ಬೆಟಾಲಿಯನ್ ಪಡೆ ಭಾಗವಹಿಸಿದ್ದು, ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ 8 ತಿಂಗಳ ಕಾಲ ಪ್ರಶಿಕ್ಷಣಾರ್ಥಿಗಳಿಗೆ ನೀಡಲಾದ ತರಬೇತಿಯ ಕುರಿತು ವರದಿ ವಾಚನ ವನ್ನು ಕೆ.ಎಸ್.ಆರ್.ಪಿ ತರಬೇತಿ ಶಾಲೆಯ ಪ್ರಾಂಶುಪಾಲರಾದ ರಮೇಶ ಎ ಬೋರಗಾವೆ ಪ್ರಸ್ತುತ ಪಡಿಸಿದರು.

Arag jeenedra,Arag gnyanendra,araga jnanendra,Arag jnyanedra in Belagavi,Belagavi police school,Belagavi police parade

ವಿವಿಧ ಬಹುಮಾನ ವಿತರಣೆ:

8 ತಿಂಗಳ ತರಬೇತಿ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಪ್ರಶಿಕ್ಷಣಾರ್ಥಿಗಳು ಬಹುಮಾನ ಪಡೆದಿದ್ದು, ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು ಬಹುಮಾನ ವಿತರಿಸಿದರು.

ಹೊರಾಂಗಣ ಸ್ಪರ್ಧೆಯಲ್ಲಿ ಶರತ್.ಎಸ್.ವಿ ಪ್ರಥಮ ಮತ್ತು ನಿಂಗಪ್ಪಾ ಮನಗಾವಿ ದ್ವಿತೀಯ ಸ್ಥಾನ ಪಡೆದಿದ್ದಾರೆ, ಅದೇ ರೀತಿ ಒಳಾಂಗಣದಲ್ಲಿ ಶ್ರೀಧರ್ ಕೋರ್ಟಿ ಪ್ರಥಮ ಸ್ಥಾನ ಪಡೆದಿದ್ದು, ವಿಶಾಲ ಕತ್ತಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಗುಂಡು ಹಾರಿಸುವ ಸ್ಪರ್ಧೆಯಲ್ಲಿ ಮತ್ತು ಸರ್ವಾಂಗೀಣ ಶ್ರೇಷ್ಠ ಧರ್ಮೇಶ ಪ್ರಥಮ ಸ್ಥಾನ ಪಡೆದಿದ್ದಾರೆ. ಚಂದನ ಎಮ್.ಸಿ ಗುಂಡು ಹಾರಿಸುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ರಾವೂತ್ತಪ್ಪಾ ಕೋಲ್ಕಕರ ಟ್ರೋಲಿಂಗ್ ಟ್ರೋಫಿಯಲ್ಲಿ ಪ್ರಥಮ ಸ್ಥಾನ ಹಾಗೂ ಸರ್ವೋತ್ತಮ ಶ್ರೇಷ್ಠ 2 ನೇ ಸ್ಥಾನ ಪಡೆದಿದ್ದು, ಆಲ್ ರೌಂಡರ್ ಬೆಸ್ಟ್ ಪಡೆದಿದ್ದಾರೆ.
ಕಾರ್ಯಕ್ರಮದಲ್ಲಿ 8 ತಿಂಗಳ ತರಬೇತಿಯ ಅಭಿಪ್ರಾಯದ ಕುರಿತು ವಾರ್ತಾ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕೆ.ಎಸ್.ಆರ್.ಪಿ. ಯ ಎಡಿಜಿಪಿ, ಅಲೋಕ ಕುಮಾರ್ ಅವರು ಸ್ವಾಗತಿಸಿದರು.

Arag jeenedra,Arag gnyanendra,araga jnanendra,Arag jnyanedra in Belagavi,Belagavi police school,Belagavi police parade

ಸ್ವಯಂ ರಕ್ಷಣಾ ಕಾರ್ಯಕ್ರಮಕ್ಕೆ ಚಾಲನೆ :

ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯಲು ಹಾಗೂ ಮಹಿಳಾ ಸಬಲೀಕರಣದ ಉದ್ದೇಶದಿಂದ ಸ್ವಯಂ ರಕ್ಷಣಾ ಕೌಶಲ್ಯ” ಎಂಬ ಕಾರ್ಯಕ್ರಮದಡಿ ಬೆಳಗಾವಿ ಕರಾಟೆ ಕ್ಲಬ್ ವತಿಯಿಂದ ಸುಮಾರು 500 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಕರಾಟೆ ಜೋಡೋ ತರಬೇತಿ ಕಾರ್ಯಕ್ರಮವನ್ನು ಗೃಹ ಸಚಿವರಾದ ಅರಗ ಜ್ಞಾನೇಂದ್ರ ಉದ್ಘಾಟಿಸಿದರು.

ತರಬೇತಿ ಪಡೆದ ಪೊಲೀಸ್ ಸಿಬ್ಬಂದಿಯ ಹೆಣ್ಣು ಮಕ್ಕಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಹಲವಾರು ಸ್ವಯಂ ರಕ್ಷಣಾ ತರಬೇತಿಯ ಅಣಕು ಪ್ರದರ್ಶನವನ್ನು ಮತ್ತು ವಿವಿಧ ಬಗೆಯ ಸ್ವಯಂ ರಕ್ಷಣಾ ಕೌಶಲ್ಯಗಳನ್ನು ಪ್ರದರ್ಶಿಸಿದರು.

ಮಹಿಳಾ ಪೊಲೀಸ್ ರಿಂದ ಸ್ವಯಂ ರಕ್ಷಣಾ ಕಲೆಯ ಪ್ರದರ್ಶನ, ಪೊಲೀಸ್ ಸಿಬ್ಬಂದಿ ಮಕ್ಕಳಿಂದ ಮತ್ತು ಮಹಿಳಾ ಪೊಲೀಸರಿಂದ ಸಾಹಸ ಪ್ರದರ್ಶನ ನಡೆಯಿತು.

ಶಾಸಕ ಅನಿಲ್ ಬೆನಕೆ, ಬೆಳಗಾವಿ ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್, ಉತ್ತರ ವಲಯ ಐಜಿಪಿ ಸತೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಕಂಗ್ರಾಳಿ ಕೆ ಎಸ್ ಆರ್ ಪಿ ತರಬೇತಿ ಶಾಲೆಯ ಪ್ರಾಂಶುಪಾಲ ರಮೇಶ್ ಬೋರಗಾವೆ, ಕೆ.ಎಸ್.ಆರ್.ಪಿ. 2 ನೇ ಪಡೆಯ ಕಮಾಂಡೆಂಟ್ ಹಂಜಾ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು.
ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಮೀಸಲು ಪೊಲೀಸ್ ಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share:

  • Twitter
  • Facebook
  • WhatsApp
  • Telegram
  • More
  • Print

You Might Also Like

Redbird Aviation starts its training facility in Belagavi

Karnataka assembly election on May 10 – Results on May 13

Belagavi-Secunderabad express train service extended

G R Infraprojects Ltd bags Belagavi Bypass and Belagavi-Hungund-Raichur highway projects

CM Bommai unveils 3 statues infront of Suvarna Soudha – tall Gandhi statue to come up soon

TAGGED: Arag jeenedra in Belagavi, Belagavi ksrp school, Home minister in Belagavi, police school Belagavi
admin September 8, 2021
Share this Article
Facebook Twitter Whatsapp Whatsapp Copy Link Print
What do you think?
Love0
Sad0
Happy0
Angry0
Previous Article Arag jeenedra,Arag gnyanendra,araga jnanendra,Arag jnyanedra in Belagavi,Belagavi police school,Belagavi police parade And I am taking Shape Says Belagavi railway Station
Next Article Arag jeenedra,Arag gnyanendra,araga jnanendra,Arag jnyanedra in Belagavi,Belagavi police school,Belagavi police parade NIRF Rankings 2021 – Belagavi Colleges & University tops in 5 Categories
Leave a review Leave a review

Leave a Reply Cancel reply

Shop Now

COI Note Pad/Memo Book with Sticky Notes & Clip Holder with Pen for Gifting
4.1 out of 5 stars(9789)
₹198.00 (as of March 31, 2023 13:30 GMT +00:00 - More infoProduct prices and availability are accurate as of the date/time indicated and are subject to change. Any price and availability information displayed on [relevant Amazon Site(s), as applicable] at the time of purchase will apply to the purchase of this product.)
Samsung Galaxy M04 Dark Blue, 4GB RAM, 64GB Storage | Upto 8GB RAM with RAM Plus | MediaTek Helio P35 | 5000 mAh Battery
3.9 out of 5 stars(2336)
₹7,499.00 (as of March 31, 2023 13:29 GMT +00:00 - More infoProduct prices and availability are accurate as of the date/time indicated and are subject to change. Any price and availability information displayed on [relevant Amazon Site(s), as applicable] at the time of purchase will apply to the purchase of this product.)
realme narzo 50 5G (Hyper Blue, 4GB RAM+64GB Storage) Dimensity 810 5G Processor | 48MP Ultra HD Camera
4.2 out of 5 stars(3509)
₹12,999.00 (as of March 31, 2023 13:29 GMT +00:00 - More infoProduct prices and availability are accurate as of the date/time indicated and are subject to change. Any price and availability information displayed on [relevant Amazon Site(s), as applicable] at the time of purchase will apply to the purchase of this product.)
Hits All the Way (8 GB)
4.1 out of 5 stars(108)
₹795.00 (as of March 31, 2023 13:30 GMT +00:00 - More infoProduct prices and availability are accurate as of the date/time indicated and are subject to change. Any price and availability information displayed on [relevant Amazon Site(s), as applicable] at the time of purchase will apply to the purchase of this product.)
OnePlus Nord CE 2 Lite 5G (Black Dusk, 6GB RAM, 128GB Storage)
4.3 out of 5 stars(116036)
₹18,999.00 (as of March 31, 2023 13:29 GMT +00:00 - More infoProduct prices and availability are accurate as of the date/time indicated and are subject to change. Any price and availability information displayed on [relevant Amazon Site(s), as applicable] at the time of purchase will apply to the purchase of this product.)
- Advertisement -

Stay Connected

Facebook Like
Twitter Follow
Instagram Follow
Youtube Subscribe

Watch & Subscribe

https://youtu.be/Tr7-sy8tnCQ

Investment

Balu Forge industries, Belagavi
BFIL to set up state-of-the-art precision engineering center in Belagavi
Industry Investment Latest News
Indudstrial Area | Representative image - Shutterstock
KIADB promotes ‘plug and play infrastructure’ at Kanagala IA to attract investment
Industry Investment Latest News
Renewable Energy | Representative image | Shutterstock
GreenKo to invest 11,790 Cr in Belagavi for Integrated Renewable Energy Project
Investment Latest News Renewable Energy
Balaji wafers manufacturing unit Belagavi,Balaji wafers chips manufacturing unit Belagavi,Balaji wafers chips manufacturing unit Kanagala Industrial area
Balaji wafers to set up manufacturing unit in Belagavi
Investment Latest News Manufacturing

You Might also Like

Redbird Flying Training Academy, Belagavi Airport, Belagavi
AirportAviationLatest NewsTraining

Redbird Aviation starts its training facility in Belagavi

March 31, 2023
Karnataka election 2023
ElectionLatest NewsPolitics

Karnataka assembly election on May 10 – Results on May 13

March 29, 2023
Belagavi-Secunderabad express train | File photo
Latest NewsRailway

Belagavi-Secunderabad express train service extended

March 29, 2023
G R Infraprojects ltd bags Belagavi Bypass road and Belagavi-Raichur NH Projects
HighwayInfrastructureLatest News

G R Infraprojects Ltd bags Belagavi Bypass and Belagavi-Hungund-Raichur highway projects

March 29, 2023
Show More

Advertisement

Weather
21 °C
Belagavi
haze
21° _ 21°
60%
6 km/h

Sponsered Content

Subscribe to our Youtube Channel

Belagavi infra - Belagavi Latest news | Belgaum newsBelagavi infra - Belagavi Latest news | Belgaum news
Follow US

© 2022 Belagavi Infra | All Rights Reserved.

  • Web-Stories
  • Flights
  • Industries
  • Railway
  • Smart City
  • Projects
  • Transport
  • Development

Removed from reading list

Undo
Welcome Back!

Sign in to your account

Lost your password?