ಗೋಗಟೆ ವೃತ್ತದಲ್ಲಿ ಹೈಟೆಕ್ ಟ್ರಾಫಿಕ್ ಪೊಲೀಸ್ ಬೂತ್ ಉದ್ಘಾಟನೆ
Belagavi Traffic Latest News Police

ಗೋಗಟೆ ವೃತ್ತದಲ್ಲಿ ಹೈಟೆಕ್ ಟ್ರಾಫಿಕ್ ಪೊಲೀಸ್ ಬೂತ್ ಉದ್ಘಾಟನೆ

Gogte circle

ಬೆಳಗಾವಿಯ ಗೋಗಟೆ ವೃತ್ತದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಹೈಟೆಕ್ ಪೊಲೀಸ್ ಬೂತ್ ಅನ್ನು ಇಂದು ಬೆಳಗಾವಿ ಉತ್ತರ ಕ್ಷೇತ್ರದ ಮಾನ್ಯ ಶಾಸಕರಾದ ಅನೀಲ ಬೆನಕೆ ರವರು ಉದ್ಘಾಟಿಸಿದರು.

ಖ್ಯಾತ ಉದ್ಯಮಿ ಶ್ರೀ ಶಿರೀಷ ಗೋಗಟೆ ರವರು ಗೋಗಟೆ ವೃತ್ತದಲ್ಲಿ ನಗರ ಸಂಚಾರ ಪೊಲೀಸ್ ಸಿಬ್ಬಂದಿಗೆ ಅನುಕೂಲವಾಗುವಂತೆ ಹೊಸದಾಗಿ ನಿರ್ಮಿಸಿಕೊಟ್ಟ “ಹೈಟೆಕ್ ಟ್ರಾಫಿಕ್ ಪೊಲೀಸ್ ಬೂತ” ಅನ್ನು ಉದ್ಘಾಟಿಸಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅನಿಲ್ ಬೆನಕೆ “ಸಂಚಾರಿ ಪೊಲೀಸರಿಗೆ ಅನುಕೂಲವಾಗುವಂತೆ ನಗರದ ಗೋಗಟೆ ಸರ್ಕಲನಲ್ಲಿ ಸಂಚಾರಿ ನಿಯಂತ್ರಣ ಕಕ್ಷವನ್ನು (ಟ್ರಾಫಿಕ್ ಬೂತ್) ಉದ್ಘಾಟಿಸಲಾಗಿದೆ. ಮಳೆಗಾಳಿಯನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಟ್ರಾಫಿಕ್ ಬೂತನ್ನು ನಿರ್ಮಿಸಿ ಕೊಟ್ಟ ಗೋಗಟೆ ಪರಿವಾರಕ್ಕೆ ಧನ್ಯವಾದ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಬೆಳಗಾವಿ ಜಿಲ್ಲೆ, ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ, ಎಸಿಪಿ ಸಂಚಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯದಲ್ಲಿ ನಿರತರಾದ ಶ್ರೀ ಶಿರೀಷ ಗೋಗಟೆ ರವರಿಗೆ ಬೆಳಗಾವಿ ನಗರ ಪೊಲೀಸ್ ಇಲಾಖೆ ವತಿಯಿಂದ ಕೃತಜ್ಞತೆ ಅರ್ಪಿಸುತ್ತೇವೆ.

Leave a Reply