ಬೆಳಗಾವಿಯ ಸಮಸ್ತರಿಗೆ ಕೃತಜ್ಞತೆ ಸಲ್ಲಿಸಿದ ಶ್ರೀ ಗೋವಿಂದ ಎಂ. ಕಾರಜೋಳ
Latest News

ಬೆಳಗಾವಿಯ ಸಮಸ್ತರಿಗೆ ಕೃತಜ್ಞತೆ ಸಲ್ಲಿಸಿದ ಶ್ರೀ ಗೋವಿಂದ ಎಂ. ಕಾರಜೋಳ

GOVIND KARJOL,GOVIND KARJOL Belagavi,GOVIND KARJOL Belagavi thanked,GOVIND KARJOL Belagavi tenure,Belagavi district incharge,belgaum district incharge minister

ತಾವು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ತೀವ್ರವಾಗಿದ್ದ ಕೋವಿಡ್ ೧೯ ಎರಡನೇ ಅಲೆ, ಪ್ರವಾಹ, ಅತಿವೃಷ್ಠಿ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ ಪರಿಹಾರೋಪಾಯ ಕಾರ್ಯಗಳನ್ನು ಕೈಗೊಳ್ಳಲು ಹಾಗೂ ಜಿಲ್ಲೆಯ ಮತ್ತಷ್ಟು ಅಭಿವೃದ್ಧಿಗಾಗಿ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸಲು ಸಹಕರಿಸಿದ ಜಿಲ್ಲೆಯ ಎಲ್ಲಾ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ. ಕಾರಜೋಳ ರವರು ತಿಳಿಸಿದ್ದಾರೆ.

ಆ ಕೊರೋನಾ ಸಂಕಷ್ಟದ ಅವಧಿಯಲ್ಲಿ ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮ ಕೈಗೊಂಡ ಸಂದರ್ಭದಲ್ಲಿ ಸಹಕರಿಸಿ ಕೊರೋನಾ ನಿಯಂತ್ರಣಕ್ಕೆ ಸ್ಪಂದಿಸಿದ ಬೆಳಗಾವಿ ಜಿಲ್ಲೆಯ ಸಮಸ್ತ ನಾಗರೀಕರಿಗೆ ಅಭಾರಿಯಾಗಿದ್ದೇನೆ. ಮುಂದೆಯೂ ಇದೇ ರೀತಿ ತಮ್ಮೆಲ್ಲರ ಸಹಕಾರ ಮುಂದುವರೆಯಲಿ ಎಂದು ಅಪೇಕ್ಷಿಸಿ ಸಮಸ್ತರಿಗೆ ಧನ್ಯವಾದಗಳನ್ನು ಶ್ರೀ ಗೋವಿಂದ ಎಂ. ಕಾರಜೋಳ ರವರು ತಿಳಿಸಿದ್ದಾರೆ.

Leave a Reply