ಕೇಂದ್ರ ಸರ್ಕಾರದ ‘ಆಜಾದಿ ಕಾ ಅಮೃತ ಮಹೋತ್ಸವ’ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಳಗಾವಿ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಬೆಂಗಳೂರು ಹಾಗೂ ಬೆಳಗಾವಿ ಫೌಂಡಿ ಕ್ಲಸ್ಟರ ಅಸೋಸಿಯೇಶನ್, ಬೆಳಗಾವಿ ಇವರ ಸಹಯೋಗದೊಂದಿಗೆ ಬೆಳಗಾವಿ ಫೌಂಡಿ ಕ್ಲಸ್ಟರ, ಉದ್ಯಮಬಾಗ, ಬೆಳಗಾವಿಯಲ್ಲಿ ಸೆ. 25 ರಂದು ಬೆಳಗ್ಗೆ 11.00 ಗಂಟೆಗೆ ರಫ್ತು ಉದ್ದಿಮೆದಾರರ ಸಮಾವೇಶ (Export Conclave) ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಶ್ರೀ ಅಭಯ ಪಾಟೀಲ, ಮಾನ್ಯ ಶಾಸಕರು, ಬೆಳಗಾವಿ ದಕ್ಷಿಣ ಮತಕ್ಷೇತ್ರ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಮನ್ಯ ಪ್ರಧಾನಿ ಮಂತ್ರಿಗಳು ಆತ್ಮ – ನಿರ್ಭರ ಯೋಜನೆ ಘೋಷಣೆ ಮಾಡಿದ್ದು, ಎಲ್ಲಾ ಉದ್ಯಮಿಗಳು Railways, Defence, Aerospace, Automobile ಇತ್ಯಾದಿ ಕ್ಷೇತ್ರಕ್ಕೆ ಬೇಕಾದ ಎಲ್ಲಾ ಉತ್ಪನ್ನಗಳನ್ನು ಸ್ಥಳೀಯವಾಗಿ ತಯಾರಿಸುವಂತೆ ಕೋರಿದರು. ಭಾರತ ದೇಶ ”ಡಿಜಿಟಲ್ ಇಂಡಿಯಾ’ ಆಗುವತ್ತ ನಮ್ಮೆಲ್ಲರ ಪ್ರಯತ್ನ ಇರಬೇಕಾಗಿದೆ ಎಂದು ತಿಳಿಸಿದರು. ಪ್ರತಿ ಜಿಲ್ಲೆಯಲ್ಲಿ “ಎಕ್ಸ್ ಪೋರ್ಟ್ ಹಬ್” ಪ್ರಾರಂಭಿಸುವ ಸರ್ಕಾರದ ಆಶಯಕ್ಕೆ ಕೈ ಜೋಡಿಸುವಂತೆ ಕೈಗಾರಿಕೋದ್ಯಮಿಗಳಿಗೆ ಕರೆ ನೀಡಿದರು. ದೇಶದ ಆರ್ಥಿಕತೆಗೆ ಕೈಗಾರಿಕೆಗಳು ಹೆಚ್ಚು ಹೆಚ್ಚು ರಫ್ತು ಮಾಡುವ ಮುಖಾಂತರ ಸಹಕಾರಿಯಾಗಲು, ಒಳ್ಳೆ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿ ಪಕ್ಕದ ಚೈನಾ ದೇಶಕ್ಕೆ ಸವಾಲು ನೀಡುವಂತೆ ಕರೆ ನೀಡಿದರು.
ಮುಖ್ಯ ಅತಿಥಿಗಳಾದ ಆಗಮಿಸಿದ ಶ್ರೀ ಎಮ್. ಹಿರೇಮಠ, ಮಾನ್ಯ ಜಿಲ್ಲಾಧಿಕಾರಿಗಳು ಮಾತನಾಡುತ್ತ ಬೆಳಗಾವಿ ಜಿಲ್ಲೆಯು ಕರ್ನಾಟಕ ರಾಜ್ಯದಲ್ಲಿ ರಪ್ತಿನಲ್ಲಿ 4ನೇ ಸ್ಥಾನದಲ್ಲಿದ್ದು ಇನ್ನೂ ಹೆಚ್ಚಿನ ಸಾಧನೆ ಮಾಡಲು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಿಗಳು ಎಕ್ಸಪೋರ್ಟ ಮಾಡುವತ್ತ ಗಮನ ಹರಿಸಲು ಮತ್ತು ಅದಕ್ಕೆ ಪೂರಕವಾಗಿ ಜಿಲ್ಲಾ ಆಡಳತದಿಂದ ಬೇಕಾಗುವ ಭೂಮಿ ಹಂಚಿಕೆ, ಕೈಗಾರಿಕೆ ಉದ್ದೇಶಕ್ಕಾಗಿ ಬೇಕಾಗುವ ಎನ್.ಎ. ಪರಿವರ್ತನೆ, ಏಕಗವಾಕ್ಷಿ ಸಭೆಯ ಅನುಮೋದನೆ ಕೂಡಲೇ ನೀಡುವುದಾಗಿ ಭರವಸೆ ನೀಡಿದರು. ಮುಂದುವರೆದು ಬೋರಗಾಂವದ ಬಿಕ್ಕಟ್ಟಿಲ ಪಾರ್ಕದಲ್ಲಿ ಘಟಕಗಳು ಉನ್ನತ ತಾಂತ್ರಿಕ ಯಂತ್ರೋಪಕರಣ ಬಳಸಿ ಬಟ್ಟೆ ತಯಾರಿಸುತ್ತಿದ್ದು, ಅದು ಎಕ್ಸಪೋರ್ಟ ಆಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಈಗಾಗಲೇ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ಸೌಂಡ್ತಿ, ಮಷಿನ್ ಕಾಂಪೋನಂಟ ಪರಿಗಣಿಸಲಾಗಿದೆ ಹಾಗೂ ಕೃಷಿಗೆ ಸಂಬಂಧಿಸಿದಂತೆ ‘ಬೆಲ್ಲ'” ತಯಾರಿಕೆ ಪರಿಗಣಿಸಲಾಗಿದೆ ಎಂದು ತಿಳಿಸಿದರು. ಉದ್ಯಮಿಗಳಗೆ ಅದರಲ್ಲೂ ವಿಶೇಷವಾಗಿ ಎಂ.ಎಸ್.ಎಂ.ಇ.ಗಳಿಗೆ ಸಾಲ ಸೌಲಭ್ಯ ನೀಡುವಲ್ಲಿ ಬೆಳಗಾವಿ ಜಿಲ್ಲೆ ದೇಶದಲ್ಲಿ ಅತ್ತುನ್ನತ ಸ್ಥಾನದಲ್ಲಿ ಇದೆ ಎಂದು ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಳಗಾವಿ ಜಂಟಿ ನಿರ್ದೇಶಕರು, ಶ್ರೀ ದೊಡ್ಡಬಸವರಾಜ ಇವರು ಸಮಾವೇಶದ ಉದ್ದೇಶದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡುತ್ತಾ, ಜಿಲ್ಲೆಯ ಉದ್ಯಮಿಗಳು ತುಂಬಾ ಕ್ರೀಯಾಶೀಲರಾಗಿದ್ದಾರೆಂದು ತಿಳಿಸಿದರು. ರಾಜ್ಯದಲ್ಲಿ ರಫ್ತು ಮಾಡುವ ಸಾಲಿನಲ್ಲಿ ಜಿಲ್ಲೆಯು ಪ್ರಮುಖ ಸ್ಥಾನದಲ್ಲಿದ್ದು, ಪ್ರಸ್ತುತ ಸುಮಾರು 100 ಘಟಕಗಳು ಫೌಂಡ್ರಿ, ಅಟೋಮೋಬೈಲ್, ಕಾಂಪೋನಂಟ ಇತ್ಯಾದಿ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದು. ಮುಂದಿನ ದಿನಗಳಲ್ಲ ಸಂಖ್ಯೆ ಮತ್ತು ಪ್ರಮಾಣ ದುಪ್ಪಟ್ಟುಗೊಳಸಬೇಕೆಂದು ಕೋರಿದರು. 2020-21 ನೇ ಸಾಲಿನಲ್ಲಿ ಸೆಪ್ಟೆಂಬರ್ 2020 ರಿಂದ ಮಾರ್ಚ 2021 ರ ವರೆಗೆ ಜಿಲ್ಲೆಯಿಂದ 1032 ಕೋಟಿ ಮೊತ್ತದಷ್ಟು ವಿವಿಧ ಉತ್ಪನ್ನಗಳನ್ನು 164 ವಿವಿಧ ದೇಶಗಳಿಗೆ ರಫ್ತು ಮಾಡಿರುವುದಾಗಿ ತಿಳಿಸಿದರು. ಈಗ ರಫ್ತು ಮಾಡುತ್ತಿರುವ ಉದ್ಯಮಿಗಳು ಮತ್ತೊಬ್ಬ ಉದ್ಯಮಿಯನ್ನು ರಫ್ತುದಾರನ್ನಾಗಿ ಮಾಡಿ ಜಿಲ್ಲೆ ರಪ್ಲಿನಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಎಲ್ಲ ಉದ್ಯಮಿಗಳಿಗೆ ಪ್ರೇರೇಪಿಸಿದರು.
- Advertisement -
ಶ್ರೀ ಸಚಿನ್ ಸಬನಿಸ್, ಅಧ್ಯಕ್ಷರು, ಲಘು ಉದ್ಯೋಗ ಭಾರತಿ, ಬೆಳಗಾವಿ ಇವರು ಮಾತನಾಡುತ್ತ ಉದ್ಯಮಿಗಳಿಗೆ ರಫ್ತು ಮಾಡಲು ಬೇಕಾದ ಮಟೀರಿಯಲ್ ಟೆಸ್ಟಿಂಗ್ ಸೌಲಭ್ಯ ಕಲ್ಪಿಸಿಕೊಡುವಂತೆ ಮತ್ತು ಸೂಕ್ತ ತರಬೇತಿ ಸಂಸ್ಥೆಯ ಅವಶ್ಯಕತೆಯಿದೆ ಎಂದು ತಿಳಿಸಿದರು. ಬೆಳಗಾವಿ ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ 1000 ಎಕರೆ ಕ್ಷೇತ್ರದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಿ, ಫೌಂಡಿ ಕ್ಲಸ್ಟರ, ಮಶಿನ್ ಪಾರ್ಕ್ ಮತ್ತು ಆಟೋ ಪಾರ್ಕ ಸ್ಥಾಪನೆಗೆ ಸರ್ಕಾರ ಒತ್ತು ನೀಡುವಂತೆ ವಿನಂತಿಸಿದರು.
- Advertisement -
ಶ್ರೀ ಪರಾಗ ಭಂಡಾರ ಇವರು ತಾಂತ್ರಿಕ ಉಪನ್ಯಾಸದಲ್ಲಿ ಬೆಳಗಾವಿ ಎಕ್ಸಪೋರ್ಟನಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡುವ ಕುರಿತು ವಿವರವಾಗಿ ತಿಳಿಸಿದರು. ಶ್ರೀ ಚಿ. ಎ. ವಾದಿರಾಜ, ವಿಜ್ಞಾನಿಗಳು, ಸಾಂಬಾರು ಮಂಡಳ, ಸಕಲೇಶಪುರ ಇವರು ಮಾತನಾಡಿ ಭಾರತದ ಕೃಷಿ ಮತ್ತು ಆಹಾರಪದಾರ್ಥಗಳಿಗೆ ಹೊರ ದೇಶಗಳಲ್ಲಿ ಸಾಕಷ್ಟು ಬೇಡಿಕೆ ಇದ್ದು, ಈ ಕುರಿತು
ವಿವರವಾದ ಮಾಹಿತಿ ನೀಡಿದರು. ಶ್ರೀ ರಾಹುಲ ವಿ. ಜಿಲ್ಲಾ ಅಗ್ರಣೀಯ ಮುಖ್ಯ ವ್ಯವಸ್ಥಾಪಕರು, ಹಾಗೂ ಶ್ರೀ ಮಹ್ಮದ ಅಜೀಮುದ್ದೀನ. ವಿಭಾಗೀಯ ವ್ಯವಸ್ಥಾಪಕರು, ಕೆನರಾ ಬ್ಯಾಂಕ ಇವರು ಮಾತನಾಡಿ ರಫ್ತು ಉದ್ಯಮದಾರರಿಗೆ ಪ್ರತ್ಯೇಕ ಕೋಶ
ಸ್ಥಾಪಿಸಿದ್ದು ಕೆನರಾ ಬ್ಯಾಂಕವತಿಯಿಂದ ಎಲ್ಲ ರಫ್ತುದಾರರಿಗೆ ಪ್ರಾಶ್ಯಶದ ಮೇರೆಗೆ ಹಣಕಾಸಿನ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದರು. ಶ್ರೀ ಟಿ. ಎಸ್. ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕರು, ವಿಜಪಿಸಿ, ಧಾರವಾಡ ರವರು ಮಾತನಾಡಿ ರಫ್ತು ಉದ್ಯಮದಾರರಿ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.
- Advertisement -
ಸಭೆಯ ಅಧ್ಯಕ್ಷತೆಯನ್ನು ಶ್ರೀ ಹೇಮಂತ ಲಟ್ಟೆ, ಉಪಾಧ್ಯಕ್ಷರು, ಬೆಳಗಾವಿ ಫೌಂಡ್ರಿ ಕ್ಲಸ್ಟರ, ಬೆಳಗಾವಿ ವಹಿಸಿ ಮಾತನಾಡುತ್ತಾ ರಫ್ತುದಾರರಿಗೆ ಮಾಹಿತಿ ನೀಡಲು ರಫ್ತುದಾರರ ಕೋಶವನ್ನು ಸ್ಥಾಪಿಸಿ ಭಾವಿ ರಫ್ತು ಉದ್ಯಮದಾರರಿಗೆ ಮಾರ್ಗದರ್ಶನ ನೀಡಲಾಗುವುದೆಂದು ತಿಳಿಸಿದರು.
ಶ್ರೀ ಭರತ ಚಿ. ಉಪನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಳಗಾವಿ ವಂದಿಸಿದರು. ಶ್ರೀ ಆರ್,