ಕರ್ನಾಟಕ ಗೃಹ ಮಂಡಳಿಯು ಬೆಳಗಾವಿ ಜಿಲ್ಲೆಯಲ್ಲಿ ಅಭಿವೃದ್ಧಿಪಡಿಸಿರುವ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ ವಾಸಯೋಗ್ಯ ಮೂಲೆ/ಮಧ್ಯಂತರ/ವಾಣಿಜ್ಯ ನಿವೇಶನಗಳ ಇ-ಹರಾಜು ಪ್ರಕಟಣೆ -8 ದಿನಾಂಕ: 02/03/2022.
ಕರ್ನಾಟಕ ಗೃಹ ಮಂಡಳಿಯು ಬೆಳಗಾವಿ ಜಿಲ್ಲೆಯಲ್ಲಿ ಅಭಿವೃದ್ಧಿಪಡಿಸಿರುವ ವಿವಿಧ ಬಡಾವಣೆಗಳಲ್ಲಿ ಖಾಲಿ ಇರುವ ವಿವಿಧ ವರ್ಗದ ಮೂಲೆ ನಿವೇಶನಗಳನ್ನು ಇ-ಹರಾಜು ಮೂಲಕ ವಿಲೇವಾರಿ ಮಾಡಲು ಸಾರ್ವಜನಿಕ ಪ್ರಕಟಣೆಯನ್ನು ಪ್ರಕಟಿಸಿದೆ, ಸದು ಸ್ವತ್ತುಗಳ ಹರಾಜು ಮಾರಾಟಗಳನ್ನು “ಎಲ್ಲಿ ಹೇಗಿವೆಯೋ ಹಾಗೆ ಇರುವ ಸ್ಥಿತಿಯಲ್ಲಿ” ಹರಾಜು ಮಾಡಲಾಗುವುದು.
ಇ-ಹರಾಜನ್ನು ತೆರೆಯುವ ದಿನಾಂಕ: 13/03/2022 ಬೆಳಿಗ್ಗೆ: 10-00 ಗಂಟೆಯಿಂದ. ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ 10/03/2022 ಬೆಳಿಗ್ಗೆ 9-00 ಗಂಟೆಯವರೆಗೆ ಕ್ರಮ ಸಂಖ್ಯೆ: 1 ರಿಂದ 21 ರವರೆಗೆ ಇ ಹರಾಜು ಆರಂಭ ಹಾಗೂ ಮುಕ್ತಾಯಗೊಳಿಸುವ ದಿನಾಂಕ 10/03/2022 ಮತ್ತು ಸಮಯ: ಬೆಳಿಗ್ಗೆ 10:00 ಗಂಟೆಯಿಂದ 16:00 ಗಂಟೆಯವರೆಗೆ
ಮೂಲೆ ಮಧ್ಯಂತರ ನಿವೇಶನಗಳಿಗೆ ಪ್ರತಿ ಚ.ಮೀ.ಗೆ ರೂ.300/- ಮತ್ತು ವಾಣಿಜ್ಯ ನಿವೇಶಗಳಿಗೆ ಪ್ರತಿ 4.2Dc. pi ರೂ.600/- ರ ಗುಣಕಗಳಲ್ಲಿ ಬಿಡ್ ದರದ ಕನಿಷ್ಠ ಏರಿಕೆ ಮಾಡಬೇಕು.
- Advertisement -

ಇ-ಹರಾಜಿನ ಸಾಮಾನ್ಯ ಷರತ್ತು ಮತ್ತು ನಿಯಮ-ನಿಬಂಧನೆಗಳು ಕೆಳಕಂಡಂತಿವೆ.
- Advertisement -
1. ಹರಾಜಿಗೆ ಲಭ್ಯವಿರುವ ಸ್ವತ್ತುಗಳನ್ನು “ಎಲ್ಲಿ ಹೇಗೆ ಇವೆಯೊ ಹಾಗೆ ಇರುವ (AS IS WHERE IS BASIS)” ಸ್ಥಿತಿಯಲ್ಲಿ ಹರಾಜು ಮಾಡಲಾಗುವುದು.
2. ಹರಾಜಿನಲ್ಲಿ ಪಲ್ಗೊಳ್ಳುವವರು ಭಾರತೀಯ ಪ್ರಜೆಯಾಗಿರಬೇಕು, ಭಾರತ ದೇಶದಲ್ಲಿ ನೋಂದಣಿಯಾಗಿರುವ ಪಾಲುದಾರ ಸಂಸ್ಥೆ/ಲಿಮಿಟೆಡ್ ಕಂಪನಿಗಳು/ಟ್ರಸ್ಟ್‌ಗಳು ಹಾಗೂ ಅನಿವಾಸಿ ಭಾರತೀಯರು ಭಾಗವಹಿಸಬಹುದಾಗಿದೆ.
3. ಇ-ಹರಾಜಿನಲ್ಲಿ ಭಾಗವಹಿಸಲು ಇ-ಪ್ರೊಕ್ಯೂರ್‌ಮೆಂಟ್ ವೆಬ್ ಸೈಟ್ login ಆಗಿ https:\\www.eproc.karnataka.gov.in ನಲ್ಲಿ ನೋಂದಣಿ ಮಾಡಬೇಕಾಗಿರುತ್ತದೆ.
- Advertisement -
4. ಇ-ಹರಾಜಿನಲ್ಲಿ ಭಾಗವಹಿಸುವವರು ನೋಂದಣಿಗಾಗಿ ಕೊನೆಯ ದಿನಾಂಕದವ ಅವಧಿಗೆ ಮುಂಚಿತವಾಗಿ ನೋಂದಣಿ ಮಾಡತಕ್ಕದ್ದು. ಕೊನೆಯ ದಿನಾಂಕದಲ್ಲಿ 3/6 ಮಾಡುವಲ್ಲಿ ಹಾಗೂ ಹಣ ಪಾವತಿ ಮಾಡುವಲ್ಲಿ ಏನಾದರು ಅಡಚಣೆಗಳುಂಟಾದಲ್ಲಿ ಮಂಡಳಿಯು ಜವಾಬ್ದಾರಿಯಾಗುವುದಿಲ್ಲ.
5. ಇ-ಹರಾಜಿನಲ್ಲಿ ಭಾಗವಹಿಸುವವರು https:\\www.eproc.karnataka.gov.in ಕಾರ್ಡ್/ಆಧಾರ್ ಕಾರ್ಡ್‌ನ್ನು ಕಡ್ಡಾಯವಾಗಿ ಇ-ಹರಾಜಿನ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಹಾಗೂ ಲಭ್ಯವಿರುವ photo & signature identification of Auction Purchaser ನಮೂನೆಯನ್ನು ಡೌನ್ ಲೋಡ್ ಮಾಡಿಕೊಂಡು (ಹೆಸರನ್ನು ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ನಮೂದಿಸುವುದು) ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಬೇಕಾಗಿರುತ್ತದೆ. 6. ಇ-ಹರಾಜಿನಲ್ಲಿ ಕಂಪನಿಯ ಹೆಸರಿನಲ್ಲಿ ಪಾಲ್ಗೊಳ್ಳುವವರು ಕಂಪನಿಯ ನೋಂದಣಿ (Company Registration) ಪತ್ರವನ್ನು ಕಡ್ಡಾಯವಾಗಿ ಇ-ಹರಾಜಿನ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಉಳಿದವರು ಯಾವುದಾದರು ಗುರುತಿನ ದಾಖಲೆಯನ್ನು ಅಪ್‌ಲೋಡ್ ಮಾಡಬೇಕು. 7. ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಭಾರತೀಯ ಅನಿವಾಸಿಗರು (ಎನ್.ಆರ್.ಐ) ಸ್ವಯಂ ಘೋಷಿತ ದೃಢೀಕೃತ ಪ್ರಮಾಣ ಪತ್ರ (Self attested declaration) ಅನ್ನು ಅಪ್‌ಲೋಡ್ ಮಾಡುವುದು. ಯಶಸ್ವಿ ಬಿಡ್ಡುದಾರರು ತದನಂತರ ಭಾರತೀಯ ರಾಯಭಾರಿ ಕಛೇರಿ (ಎಂಬಿಸಿ) ಯಿಂದ ಪಡೆದ ದೃಢೀಕೃತ ಪತ್ರವನ್ನು ನೀಡಬೇಕು.
8. ಹರಾಜಿಗೊಳಪಡಿಸಿರುವ ಪ್ರತಿ ಮೂತಿ ನಿವೇಶನ/ಮನೆ/ಫ್ಲಾಟ್ ಗಳಿಗೆ ಮೊತ್ತ ರೂ. 50,000/-, ಹುಸ್ಕೂರು ಬಡಾವಣೆಯ ವಾಣಿಜ್ಯ ನಿವೇಶನಕ್ಕೆ ಇ.ಎಂ.ಡಿ. ಮೊತ್ತ ರೂ. 1 ಕೋಟಿ ಮತ್ತು ಹಾಸನ-ಚನ್ನಪಟ್ಟಣ ವಾಣಿಜ್ಯ ಸಂಕೀರ್ಣಕ್ಕೆ ಇ.ಎಂ.ಡಿ. ಮೊತ್ತ ರೂ.25 ಲಕ್ಷವನ್ನು ನಿಗಧಿಗೊಳಿಸಲಾಗಿದ್ದು, ಸದರಿ ಮೊತ್ತವನ್ನು ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿರುವಂತೆ ಕರ್ನಾಟಕ ಗೃಹ ಮಂಡಳಿ ಖಾತೆಗೆ debit card/credit card/net Banking ಮೂಲಕ ಅಥವಾ ಇ-ಹರಾಜಿನ ಪೋರ್ಟಲ್‌ನಲ್ಲಿ generate ಆಗುವ challen ಮೂಲಕ ಪಾವತಿ ಮಾಡಬೇಕಾಗಿರುತ್ತದೆ, ಹರಾಜು ಸೇವಾ ಶುಲ್ಕ ಮತ್ತು ಬ್ಯಾಂಕ್ ನ ಸೇವಾ ಶುಲ್ಕವನ್ನು ಬಿಡ್ಡುದಾರರೇ ಭರಿಸತಕ್ಕದ್ದು.
9. ಮೂಲೆ ನಿವೇಶನಗಳಿಗೆ ಪ್ರತಿ ಚದರ ಮೀಟರ್‌ಗೆ ರೂ.300/- ವಾಣಿಜ್ಯ ನಿವೇಶನಗಳಿಗೆ ಪ್ರತಿ ಚದರ ಮೀಟರ್‌ಗೆ ರೂ.600/- ಹಾಗೂ ಮನೆ/ಫ್ಲ್ಯಾಟ್ ಗಳಿಗೆ ರೂ.5000/- ಗಳ ಗುಣಕಗಳಲ್ಲಿ ಬಿಡ್ ಏರಿಕೆ ಮಾಡಬೇಕು.
10. ಇ-ಹರಾಜಿನಲ್ಲಿ ಒಂದು ಸ್ವತ್ತಿಗೆ ಒಬ್ಬನೇ ಬಿಡ್ಡುದಾರ ಮಾತ್ರವಿದ್ದು, ಒಂದೇ ಬಿಡ್ (Single Bidder with single bid) ಮಾಡಿದಲ್ಲಿ ಪರಿಗಣಿಸಲಾಗುವುದಿಲ್ಲ. ಆದರೆ ಒಬ್ಬನೇ ಬಿಡ್ಡುದಾರ 2 ಅಥವಾ ಹೆಚ್ಚು (single bidder with 2 bids or above) ಬಿಡ್ ಮಾಡಿದಲ್ಲಿ ಅಂತಹ ಬಿಡ್ಡುದಾರನನ್ನು ಪರಿಗಣಿಸಲಾಗುವುದು.
ಉದಾಹರಣೆ: ಒಬ್ಬನೇ ಬಿಡ್ಡುದಾರ ಒಂದೇ ಬಿಡ್ ದರ (Single Bidder with single bid) ರೂ. 300 ಮಾಡಿದಲ್ಲಿ ಪರಿಗಣಿಸಲಾಗುವುದಿಲ್ಲ. ಆದರೆ 2 ಬಿಡ್ ರೂ. 600 ಅಥವಾ ಹೆಚ್ಚು ಬಿಡ್ ಮಾಡಿದಾಗ ಅಂತಹ ಬಿಡ್ ಅನ್ನು ಪರಿಗಣಿಸಲಾಗುವುದು.
11. ಯಶಸ್ವಿ ಬಿಡ್ಡುದಾರ ಬಿಡ್ ಮಾಡಿದ ಸ್ವತ್ತಿನ ಒಟ್ಟು ಮೌಲ್ಯದ ಪೈಕಿ ಶೇ.25ರಷ್ಟು ಮೌಲ್ಯವನ್ನು “ಇ.ಎಂ.ಡಿ. ಮೊತ್ತ ಸೇರಿದಂತೆ” ಇ-ಹರಾಜು ಮುಕ್ತಾಯಗೊಂಡ ಅವಧಿಯ 12 ಘಂಟೆಯೊಳಗೆ ಹಾಗೂ ಒಂದು ವೇಳೆ ಶೇ.25ರಷ್ಟು ಮೌಲ್ಯವು ರೂ.1.00 ಕೋಟಿಗಿಂತ ಹೆಚ್ಚಾಗಿದ್ದಲ್ಲಿ 10 ದಿನಗಳ ಒಳಗಾಗಿ (ಸಾರ್ವತ್ರಿಕ ರಜೆ ಮತ್ತು ಬ್ಯಾಂಕ್ ರಜೆ ಹೊರತು ಪಡಿಸಿ) ಮಂಡಳಿಯ ವೆಬ್ ಸೈಟ್ https://www.khb.karnataka.gov.in aut ಮಾಡತಕ್ಕದ್ದು. ನಿಗಧಿತ ಅವಧಿಯೊಳಗೆ ಪಾವತಿ ಮಾಡದೇ ಇದ್ದಲ್ಲಿ, ಬಿಡ್ಡುದಾರರು ಈಗಾಗಲೇ ಪಾವತಿಸಿರುವ ಇ.ಎಂ.ಡಿ. ಮೊತ್ತವನ್ನು ಯಾವುದೇ ಮುನ್ಸೂಚನೆ ಮತ್ತು ಪತ್ರ ವ್ಯವಹಾರ ಇಲ್ಲದೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
12. ಇ-ಹರಾಜಿನಲ್ಲಿ ಯಾರ ಹೆಸರಿನಲ್ಲಿ ಬಿಡ್ ಮಾಡಲಾಗಿದೆಯೋ, ಅವರ ಹೆಸರಿಗೆ ಮಾತ್ರ ಹರಾಜು ಮಾರಾಟ ದೃಢೀಕರಣ ಪತ್ರ ನೀಡಲಾಗುವುದು.
13. ಯಶಸ್ವಿ ಬಿಡ್ಡುದಾರ ಬಿಡ್ ಮಾಡಿದ ಸ್ವತ್ತಿನ ಒಟ್ಟು ಮೌಲ್ಯದ ಬಾಕಿ ಶೇ. 75 ರಷ್ಟು ಮೊತ್ತವನ್ನು ಮಂಡಳಿಯ ವೆಬ್ ಸೈಟ್ https:www.khh.karnataka.gov.in ಮೂಲಕ ಇ-ಪಾವತಿ ಮಾಡಲು ಮಂಡಳಿಯಿಂದ ಹರಾಜು ದೃಢೀಕರಣ ಪತ್ರ ತಲುಪಿದ ದಿನಾಂಕದಿಂದ 60 ದಿನಗಳು ಅವಕಾಶವಿರುತ್ತದೆ. ತಪ್ಪಿದಲ್ಲಿ ಈಗಾಗಲೇ ಮಂಡಳಿಗೆ ಪಾವತಿಸಿರುವ ಶೇ.25ರಷ್ಟು ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
14. ಯಶಸ್ವಿಯಾಗದ ಬಿಡ್ಡುದಾರರಿಗೆ ಅವರು ಪಾವತಿಸಿರುವ ತಿಂಗಳೊಳಗಾಗಿ ಅವರ ಖಾತೆಗೆ ಹಿಂದಿರುಗಿಸಲಾಗುವುದು. 15. ಬಿಡ್ಡುದಾರರು ಕರ್ನಾಟಕ ಪಾಲಿಸಬೇಕಾಗಿರುತ್ತದೆ. ಗೃಹ ಮಂಡಳಿಯ ಇ.ಎಂ.ಡಿ ಮೊತ್ತವನ್ನು ಒಂದು ಕಾಯ್ದೆ ಮತ್ತು ನಿಯಮಾವಳಿಗಳನ್ನು
16. ಯಾವುದೇ ಕಾರಣ ನೀಡದೆ ನೋಂದಣಿ ಅಥವಾ ಹರಾಜು ಅವಧಿಯನ್ನು ಕಡಿತಗೊಳಿಸುವ ಅಥವಾ ಮುಂದೂಡುವ ಮತ್ತು ಹರಾಜಿಗೆ ಪ್ರಕಟಿಸಿದ ನಿವೇಶನಗಳನ್ನು ಹರಾಜು ಅವಧಿಯ ಯಾವುದೇ ಸಮಯದಲ್ಲಿ ಹಿಂಪಡೆಯುವ ಹಾಗೂ ಬಿದ್ದನ್ನು ಪುರಸ್ಕರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಕರ್ನಾಟಕ ಗೃಹ ಮಂಡಳಿಯು ಕಾಯ್ದಿರಿಸಿಕೊಂಡಿದೆ.
17. ಯಾವುದೇ ಕಾರಣಕ್ಕೆ ಹರಾಜು ಪ್ರಕಟಣೆಯನ್ನು ರದ್ದುಪಡಿಸುವ/ಹಿಂಪಡೆಯುವ ಹಕ್ಕನ್ನು ಕರ್ನಾಟಕ ಗೃಹ ಮಂಡಳಿಯು ಕಾಯ್ದಿರಿಸಿಕೊಂಡಿದೆ. ಅಂಥಹ ಸಂದರ್ಭದಲ್ಲಿ ಅರ್ಜಿದಾರರಿಗೆ ಕೇವಲ ಇ.ಎಂ.ಡಿ ಮೊತ್ತವನ್ನು ಮಾತ್ರ ಹಿಂತಿರುಗಿಸಲಾಗುವುದು.
18. ಇ-ಹರಾಜಿನ ಕೊನೆಯ ಕ್ಷಣದಲ್ಲಿ ಬರುತ್ತಿರುವ ಬಿಡ್ಡುಗಳಿಗೆ ಡೆಲ್ಟಾ ಟೈಮ್ 5 ನಿಮಿಷಗಳ ಕಾಲ ವಿಸ್ತರಣೆಯಾಗಿರುತ್ತದೆ.
19. ಸ್ವತ್ತುಗಳ ವಿಸ್ತೀರ್ಣವು ಅಂತಿಮ ಅಳತೆಗಳಿಗೆ ಒಳಪಟ್ಟಿರುತ್ತದೆ. 20, ಇ-ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವವರು ಇ-ಹರಾಜಿಗೆ ಸಂಬಂಧಿಸಿದ ಮಾಹಿತಿ (simplified e-auction user guide) https:\\ ಮುಖಪುಟದ ಸಿಟಿಜೆನ್ ವಿಭಾಗದಲ್ಲಿ ಅಥವಾ ಮಂಡಳಿಯ ಅಧಿಕೃತ ವೆಬ್ ಸೈಟ್ https: www.khh.karnataka.gov.in ನ ಮುಖಪುಟದ Online ಸೇವೆಗಳಲ್ಲಿ ಇ-ಹರಾಜು ಕೈಪಿಡಿ ಯನ್ನು ಡೌನ್‌ಲೋಡ್ ಮಾಡಬಹುದಾಗಿದೆ.
21, ಇ-ಹರಾಜು ಸ್ವತ್ತುಗಳ ಸ್ಥಳ ವೀಕ್ಷಣೆಗಾಗಿ “Geo-Tag” ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಮಂಡಳಿಯ ಅಧಿಕೃತ ವೆಬ್‌ಸೈಟ್ https://www.khb.karnataka.gov.in ನಲ್ಲಿ ಪ್ರಕಟಿಸಲಾಗಿದೆ.
ಸೂಚನೆ:
1. ಇಬಿಡ್ಡಿಂಗ್‌ಗೆ ನೋಂದಣಿಯಾಗಲು ಹಾಗೂ ಭಾಗವಹಿಸುವ ವಿಧಾನ ಮತ್ತು ಇತರೆ ಸ್ಪಷ್ಟಿಕರಣಗಳು ಹಾಗೂ ಆಕ್ಷೇಪಣೆಗಳಿಗಾಗಿ ಕೆಳಕಂಡ ಇ-ಪಕ್ಯೂರ್‌ಮೆಂಟ್ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ, ಸಹಾಯವಾಣಿ ದೂರವಾಣಿ ಸಂಖ್ಯೆ: 080-46010000/68948777.
2. ಇ-ಹರಾಜಿನಲ್ಲಿ ಭಾಗವಹಿಸುವಾಗ ನೀಡಬೇಕಾದ ದಾಖಲಾತಿ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಕೇಂದ್ರ ಕಛೇರಿಯ ಇ-ಹರಾಜು ಕೋಶ, ಬೆಂಗಳೂರು ದೂರವಾಣಿ ಸಂಖ್ಯೆ: 080-222735II, ಆಂತರಿಕ 223/249 ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ 287, ಕಂದಾಯ ಅಧಿಕಾರಿ, ಹಂಚಿಕೆ ಶಾಖೆ, ದೂರವಾಣಿ ಸಂಖ್ಯೆ: 080-222735ll, ಆಂತರಿಕ 307/308
3. ನಿವೇಶನ/ಸ್ಥಳದ ಮಾಹಿತಿಗಾಗಿ ಕಛೇರಿ ಸಮಯದಲ್ಲಿ ಸಂಪರ್ಕಿಸಬೇಕಾದ ಸಹಾಯವಾಣಿ: > ಬೆಳಗಾವಿ ಜಿಲ್ಲೆ: ಶ್ರೀ ವಿಜಯ್ ದೇಶಿಂಗೆ, ಸಹಾಯಕ ಕಾರ್ಯಪಾಲಕ ಅಭಿಯಂತರರು: 9742085271, ಶ್ರೀಮತಿ, ಜ್ಯೋತಿ ನಾಜರೇ, ಸಹಾಯಕ ಅಭಿಯಂತರರು:- 9844849319, ಶ್ರೀ. ಮುದ್ದೇ ಗೌಡರು – 8660474705.