ಕಿತ್ತೂರು ಕೋಟೆ (Kittur Fort) ಯ ಅರಮನೆ ಪ್ರತಿರೂಪ (Replica of Palace) ದ ನಿರ್ಮಾಣವನ್ನು ಮೊದಲು ಪ್ರಸ್ತಾವನೆಯಿದ್ದಂತೆ ಕೋಟೆಯ ಆವರಣದ ನಿರ್ಮಿಸುವ ಬದಲು ಬಚ್ಚನಕೆರಿ ಗ್ರಾಮ (Bachankeri village) ದಲ್ಲಿ ಮಾಡಲು ನಿರ್ಧರಿಸಿದ ಜಿಲ್ಲಾಡಳಿತದ ನಡೆಗೆ ರಾಣಿ ಚೆನ್ನಮ್ಮ (Rani Chennamma) ಳ ಅಭಿಮಾನಿಗಳು ಬಾರಿ ವಿರೋಧ ವ್ಯಕ್ತಪಡಿಸಿದ್ದಾರೆ.
ಕಿತ್ತೂರಲ್ಲಿರುವ ಕೋಟೆ (Kittur Fort) ಆವರಣದಲ್ಲಿ ಅರಮನೆ (Palace) ಮರುಸೃಷ್ಟಿ ನಿರ್ಮಾಣದ ಬೇಡಿಕೆ ಹಾಗೂ ಪ್ರಸ್ತಾವನೆ ಇದೆ. ಆದರೆ ಈಗ ಕಿತ್ತೂರು ತಾಲೂಕಿನ ಬಚ್ಚನಕೇರಿ ಗ್ರಾಮದಲ್ಲಿ 57 ಎಕರೆ ಜಾಗದಲ್ಲಿ ಅರಮನೆ ಪ್ರತಿರೂಪ ನಿರ್ಮಾಣಕ್ಕೆ ಬೆಳಗಾವಿ ಜಿಲ್ಲಾಡಳಿತ (Belagavi District administration) ಉದ್ದೇಶಿಸಿದೆ.
ಇದನ್ನು ಓದಿ – ಕಿತ್ತೂರ ಕೊಟೆಯ ಆವರಣದಲ್ಲಿ ರಾಣಿ ಚನ್ನಮ್ಮನ ಅರಮನೆಯ ಪ್ರತಿರೂಪದ ಕಟ್ಟಡ – ಪೂರ್ವಭಾವಿ ಸಭೆ
ಈ ಸಂಬಂಧ ಬೈಲಹೊಂಗಲ ಉಪವಿಭಾಗಾಧಿಕಾರಿಗೆ ಜಿಲ್ಲಾಧಿಕಾರಿಗಳು ಪತ್ರ ಕೂಡ ಬರೆದಿದ್ದಾರೆ. ಈ ಸಂಬಂಧ ಆಕ್ಷೇಪಗಳಿದ್ದರೆ ಸಮರ್ಥನಿಯ ಕಾರಣ ನೀಡಲು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದೇ ಕಾರಣವಾಗಿ ಆಗಸ್ಟ್ 2 ರಂದು ಕಿತ್ತೂರು ಬಂದ್ ಗೆ ಅಭಿಮಾನಿಗಳು ಕರೆ ನೀಡಿದ್ದಾರೆ.
ಇದನ್ನು ಓದಿ – ಕಿತ್ತೂರಿನ ಐತಿಹಾಸಿಕ ತಾಣಗಳ ಅಭಿವೃದ್ಧಿಗೆ 10 ಕೋಟಿ ಅನುದಾನ