ಶನಿವಾರ ರುಕ್ಮಿಣಿ ನಗರದಲ್ಲಿ ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಪ್ರಧಾನ ಮಂತ್ರಿ ಆವಾಸ ಯೋಜನೆ ಅಡಿಯಲ್ಲಿ ಬೆಳಗಾವಿ ಉತ್ತರ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ 905 ಮನೆಗಳ ನಿರ್ಮಿಸುವ ಕಾಮಗಾರಿಗೆ ಇಂದು (ಶನಿವಾರ ೨೯) ಚಾಲನೆ ನೀಡಲಾಯಿತು.
ದೇಶದ ಪ್ರಧಾನಿ ನರೇಂದ್ರ ಮೋದಿ ಯವರು ಕಂಡಿರುವ ಎಲ್ಲರಿಗೂ ಮನೆ ಸಿಗಬೇಕು ಎಂಬ ಕನಸು ಈಡೇರಿಸುವ ನಿಟ್ಟಿನಲ್ಲಿ ಒಂದೇ ಸಮಯಕ್ಕೆ 905 ಮನೆಗಳ ನಿರ್ಮಾಣ ಕಾಮಗಾರಿಗೆ ಸಂಸದರಾದ ಶ್ರೀಮತಿ. ಮಂಗಲ ಅಂಗಡಿ ಅವರೊಂದಿಗೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾದ ಅನಿಲ್ ಬೇನಕೆ ಅವರು ಚಾಲನೆ ನೀಡಿದರು.
ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, 2023-2024ರ ಹೊತ್ತಿಗೆ ಎಲ್ಲರಿಗೂ ಸೂರು ಸಿಗಬೇಕು ಎಂಬುವುದು ಪ್ರಧಾನಿಯವರ ಆಶಯವಾಗಿದ್ದು, ಆ ನಿಟ್ಟಿನಲ್ಲಿ 905 ಮನೆಗಳು ರುಕ್ಮಿಣಿ ನಗರದಲ್ಲಿ ಮಂಜೂರಾಗಿದೆ, ಜೊತೆಗೆ ಅಲಾರವಾಡ ಪ್ರದೇಶದಲ್ಲಿ 1600 ಮನೆಗಳ ಮಂಜುರಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನ ತಿಳಿಸಿದರು, ವಿಶೇಷವಾಗಿ ದಿವಂಗತ ಶ್ರೀ ಸುರೇಶ ಅಂಗಡಿ ಮತ್ತು ವಸತಿ ಸಚಿವ ವಿ ಸೋಮಣ್ಣ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ಮನೆಗಳು ಕಟ್ಟುವ ಸಮಯದಲ್ಲಿ ಎನೇ ತಕರಾರು ಇದ್ದರೂ ಪರಸ್ಪರ ಚರ್ಚಿಸಿ ಬಗೆ ಹರಿಸಿಕೊಳ್ಳಿ, ಯಾವುದೇ ಕಾರಣಕ್ಕೂ ಮನೆ ಕಟ್ಟುವ ಕಾಮಗಾರಿ ವಿಳಂಬ ಆಗಬಾರದು ಎಂದು ರಹವಾಸಿಗಳಿಗೆ ಶಾಸಕರು ಸೂಚಿಸಿದ್ದಾರೆ.
- Advertisement -
ಈ ವೇಳೆ ಶ್ರೀ ಬಸವರಾಜ್ ಅಂಚಿ, ಶ್ರೀ. ಶಿರಗುಪ್ಪಿ ಶೆಟ್ಟರ್, ನಗರ ಸೇವಕರಾದ ಶ್ರೀ ರಾಜಶೇಖರ್ ಡೋಣಿ, ಶ್ರೀ ಮಹದೇವ್ ರಾಠೋಡ್, ಬಿಜೆಪಿ ಪದಾಧಿಕಾರಿಗಳಾದ ಶ್ರೀ ಹಣಮಂತ ಕಾಗಲ್ಕರ್, ಶ್ರೀ ಗಣೇಶ್ ಧೀಡೆ ಸೇರಿದಂತೆ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.