ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮತ್ತು ಕಾನೈಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಶಿಕ್ಷಣ ಸೇರಿ ವಿವಿಧ ಅಂಶಗಳ ಮೇಲೆ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಬೆಳಗಾವಿಯ ಕೆಎಲ್‌ಎಸ್ ಸಂಸ್ಥೆಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯವು ಪ್ಲಾಟಿನಂ ಸ್ಥಾನ ಗಳಿಸಿದೆ.
ಎಐಸಿಟಿಇ ಅನುಮೋದಿತ ತಾಂತ್ರಿಕ ಸಂಸ್ಥೆಗಳು ಮತ್ತು ಉದ್ಯಮದ ನಡುವಿನ ಸಹಭಾಗಿತ್ವದ ಪ್ರಸ್ತುತ ಸ್ಥಿತಿ ನಿರ್ಣಯಿಸಲು ಇತ್ತೀಚೆಗೆ ಭಾರತದಾದ್ಯಂತ ತಾಂತ್ರಿಕ ಸಂಸ್ಥೆಗಳ ಸಮೀಕ್ಷೆ ನಡೆಸಲಾಗಿತ್ತು. ಶೈಕ್ಷಣಿಕ ಪಠ್ಯಕ್ರಮ, ಬೋಧನಾ ವಿಭಾಗ, ಆಡಳಿತ, ಮೂಲ ಸೌಕರ್ಯ, ನಿಯೋಜನೆ-ಸಂಶೋಧನೆ ಮತ್ತು ಸೇವೆಗಳು,ಯೋಜನೆ ಮತ್ತು ಕೌಶಲ ಅಭಿವೃದ್ಧಿ ಮುಂತಾದ ವಿಷಯಗಳನ್ನು ಗಣನೆಗೆ 1 ತೆಗೆದುಕೊಳ್ಳಲಾಗಿತ್ತು.
ಸಮೀಕ್ಷೆಯಲ್ಲಿ 9,500ಕ್ಕೂ ಹೆಚ್ಚು ಸಂಸ್ಥೆಗಳು ಭಾಗವಹಿಸಿದ್ದವು. ಕ 4,400 ಸಂಸ್ಥೆಗಳ ಅಂತಿಮ ಪಟ್ಟಿ ಮಾಡಿ ಸಮೀಕ್ಷೆಗೆ ಒಳಪಡಿಸಲಾಗಿತ್ತು. ರಾಷ್ಟ್ರಮಟ್ಟದ ಈ – ಸ್ಪರ್ಧೆಯಲ್ಲಿ 262 ಸಂಸ್ಥೆಗಳು ಚಿನ್ನದ ವಿಭಾಗ ಮತ್ತು 368 ಸಂಸ್ಥೆಗಳು ಬೆಳ್ಳಿ ವಿಭಾಗದಲ್ಲಿ ಸ್ಥಾನ ಗಳಿಸಿವೆ.
184 ಸಂಸ್ಥೆಗಳು ಪ್ಲಾಟಿನಂ ವಿಭಾಗದಲ್ಲಿ ಸ್ಥಾನ ಪಡೆದ್ದು, ಕೆಎಲ್‌ಎಸ್ ಜಿಐಟಿ ಸಂಸ್ಥೆಯೂ ಈ ಸ್ಥಾನ ಗಳಿಸಿದೆ. ಕೆಎಲ್‌ಎಸ್ ಜಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್. ಕುಲಕರ್ಣಿ ಮತ್ತು ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.