ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಸಾಯಿಮಂದಿರದ ವರೆಗೆ ಸಿಮೆಂಟ್ ರಸ್ತೆ ಒಳಗೊಂಡಂತೆ ಅಥಣಿ ತಾಲೂಕಿನ ರಾಜ್ಯ ಗಡಿಯಿಂದ ಬೀಳೆಗಾಂವ, ಅಥಣಿ, ಸತ್ತಿ, ಹಿಪ್ಪರಗಿ ಮಾರ್ಗದ ಜಿಲ್ಲಾ ಗಡಿಯವರೆಗೆ ನೂತನ ರಾಜ್ಯ ಹೆದ್ದಾರಿಯ ಈ ರಸ್ತೆಯು ಅಂಬೇಡ್ಕರ್ ವೃತ್ತದಿಂದ ಸಾಯಿ ಮಂದಿರ ದವರೆಗೆ ರಸ್ತೆ ಸುಧಾರಣೆಯನ್ನು ಒಳಗೊಂಡಿದ್ದು 6 ಕೋಟಿ ರೂಪಾಯಿಗಳನ್ನು ಸರಕಾರ ಬಿಡುಗಡೆ ಮಾಡಲಾಗಿದೆ.
ಅಂಬೇಡ್ಕರ್ ವೃತ್ತದಿಂದ ಸಾಯಿ ಮಂದಿರದವರೆಗೆ ಸುಸಜ್ಜಿತ ಸಿಮೆಂಟ್ ರಸ್ತೆ ನಿರ್ಮಾಣಕ್ಕಾಗಿ ಅಪೆಂಡಿಕ್ಸ್ ಇ ನಲ್ಲಿ ಒಟ್ಟು ಆರು ಕೊಟಿ ರೂಪಾಯಿಗಳ ಅನುದಾನವನ್ನು ಸರಕಾರ ಬಿಡುಗಡೆ ಮಾಡಿದ್ದು ಸಾರ್ವಜನಿಕರ ಹಾಗೂ ವಾಹನಗಳ ಸುಗಮ ಸಂಚಾರಕ್ಕಾಗಿ ಅನುಕೂಲವಾಗುವಂತೆ ಈ ರಸ್ತೆಯನ್ನು ಉತ್ತಮ ಗುಣಮಟ್ಟದೊಂದಿಗೆ ನಿಗದಿತ ಕಾಲಮಿತಿಯೊಳಗೆ ಅಭಿವೃದ್ಧಿ ಪಡಿಸಲಾಗುವುದು ಎಂದು ಉಪಮುಖ್ಯ ಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ತಿಳಿಸಿದರು.