ಬೆಳಗಾವಿಯ ಮೃಗಾಲಯ ಪ್ರವಾಸಿಗರಿಗೆ ಮುಕ್ತ

ಬೆಳಗಾವಿಯ ಭೂತರಾಮನಹಟ್ಟಿ ಯಲ್ಲಿರುವ ರಾಣಿ ಚೆನ್ನಮ್ಮ ಕಿರು ಮೃಗಾಲಯ ಪ್ರವಾಸಿಗರಿಗೆ ಮುಕ್ತವಾಗಿದ್ದು, ನಿನ್ನೆ ಶುಕ್ರವಾರದಿಂದ ಮೃಗಾಲಯದ ಬಾಗಿಲು ತೆರೆದುಕೊಂಡಿದೆ.

ಬೆಳಗಾವಿಯ ಮೃಗಾಲಯದ ಜೊತೆಗೆ ಹಂಪಿ, ಬೆಳಗಾವಿ, ಗದಗ, ಶಿವಮೊಗ್ಗ, ಚಿತ್ರದುರ್ಗ, ಕಲಬುರಗಿ ಮತ್ತು ದಾವಣಗೆರೆಯಲ್ಲಿನ ಮೃಗಾಗಲಯಗಳು ಲಾಕ್‌ಡೌನ್ ಬಳಿಕ ಬಾಗಿಲು ತೆರೆದಿವೆ ಎಂದು ಮೃಗಾಲಯ ಪ್ರಾಧಿಕಾರ ತಿಳಿಸಿದೆ.

ಮೊದಲ ದಿನ ಮೃಗಾಲಯಗಳಿಗೆ ಕಡಿಮೆ ಜನರು ಆಗಮಿಸಿದ್ದು. ದಿನಕಳೆದಂತೆ ಹೆಚ್ಚು ಜನರು ಬರುವ ನಿರೀಕ್ಷೆ ಇದೆ. ಅವರ ಸುರಕ್ಷತೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಪಿ. ರವಿ ಹೇಳಿದ್ದಾರೆ.

ಬೇಟಿ ನೀಡುವವರಿಗೆ ಕೋವಿಡ್ ಪರೀಕ್ಷೆ

ಮೃಗಾಲಯಗಳಿಗೆ ಬರುವ ಜನರಿಗೆ ಕೋವಿಡ್ ಪರೀಕ್ಷೆ ಮಾಡಬೇಕೆ ಎಂದು ಅಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ಬನ್ನೇರುಘಟ್ಟದಲ್ಲಿ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲು ಆರೋಗ್ಯ ಇಲಾಖೆ ಮತ್ತು ಬೆಂಗಳೂರು ಜಿಲ್ಲಾಡಳಿತ ಅನುಮತಿಗಾಗಿ ಕಾಯಲಾಗುತ್ತಿದೆ. ಜೂನ್ 28ರ ಸೋಮವಾರದಿಂದ ಬಾಗಿಲು ತೆರೆಯುವ ನಿರೀಕ್ಷೆ ಇದೆ.

Leave a Reply