ಕರ್ನಾಟಕದ ಅತೀ ದೊಡ್ಡ ಜಿಲ್ಲೆ, ಎರಡನೇ ರಾಜದಾನಿ ಎಂದೇ ಕರೆಯಲ್ಪಡುವ ಬೆಳಗಾವಿಗೆ ಬೇಕಿದೆ ಕನಿಷ್ಟ 100 ಬೆಡ್ ಗಳ ಸುಸಜ್ಜಿತ ESI-C ಅಸ್ಪತ್ರೆ.
ಕರ್ನಾಟಕದಲ್ಲೇ ಎರಡನೇ ಅತಿ ಹೆಚ್ಚು ಸಣ್ಣ ಮತ್ತು ಮದ್ಯಮ ಕೈಗಾರಿಕೆಗಳನ್ನು ಬೆಳಗಾವಿ ಹೊಂದಿದ್ದು, ಜಿಲ್ಲೆಯಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳಿವೆ. ಅವುಗಳಲ್ಲಿ 1,10,000 ನೋಂದಾಯಿತ ಕಾರ್ಮಿಕರಿದ್ದಾರೆ.
ನಿಯಮದ ಪ್ರಕಾರ ಪ್ರತಿ 1 ಲಕ್ಷ ಕಾರ್ಮಿಕರ ಸಂಖ್ಯೆಗೆ ತಲಾ 100 ಬೆಡ್ ಗಳ ಇಎಸ್‌ಐ ಆಸ್ಪತ್ರೆ ಒದಗಿಸಲು ಅವಕಾಶವಿದೆ. ಬೆಳಗಾವಿಗಿಂತ ಕಡಿಮೆ ಸಂಖ್ಯೆಯ ಕಾರ್ಮಿಕರಿರುವ ಶಿವಮೊಗ್ಗ ಸೇರಿದಂತೆ ಇತರ ಕೆಲ ನಗರಗಳಿಗೆ 100 ಬೆಡ್ ಆಸ್ಪತ್ರೆ ಮಂಜೂರಾಗಿದೆ. ಆದರೆ ಬೆಳಗಾವಿಗೆ ಮಾತ್ರ ಸೂಕ್ತ ಆಸ್ಪತ್ರೆ ಒದಗಿಸಲು ಸರಕಾರ ಹಿಂದೆ ಮುಂದೆ ನೋಡುತ್ತಿದ್ದು, ಈ ಭಾಗದ ಕಾರ್ಮಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಈಗಿರುವ ESI ಆಸ್ಪತ್ರೆಯ ಸ್ಥಿತಿ : ಬೆಳಗಾವಿ ನಗರದ ಅಶೋಕ ನಗರದಲ್ಲಿ ಹಲವು ವರ್ಷಗಳಿಂದ 50 ಬೆಡ್ ಗಳ ESI ಅಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದು, ಆ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಮಳೆಗಾಲದಲ್ಲಂತೂ ಈ ಕಟ್ಟಡದ ಸ್ಥಿತಿ ನೋಡಲಾಗದು. ಕಟ್ಟಡದ ಸ್ಥಿತಿ ಬಗ್ಗೆ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ಸರ್ಕಾರ ನಿರ್ಲಕ್ಷ್ಯತನ ತೋರುತ್ತಿದೆ.
- Advertisement -
ಕೈಗಾರಿಕಾ ಪ್ರದೇಶದಿಂದ 10-13 ಕಿಮೀ ದೂರ :
- Advertisement -
ಬೆಳಗಾವಿಯ ಉದ್ಯಮಬಾಗ, ಮಚ್ಛೆ ಮತ್ತಿತರ ಕೈಗಾರಿಕೆ ಪ್ರದೇಶಗಳಲ್ಲಿ ಹೆಚ್ಚು ಉದ್ದಿಮೆಗಳಿದ್ದು ಹೆಚ್ಚಿನ ಕಾರ್ಮಿಕರು ಈ ಭಾಗದಲ್ಲೇ ವಾಸ ಮಾಡುತ್ತಾರೆ. ಆದರೆ, ಇಎಸ್‌ಐ ಆಸ್ಪತ್ರೆ ಅಶೋಕ ನಗರದಲ್ಲಿದ್ದು ಸುಮಾರು 10-13 ಕಿಮೀ ನಷ್ಟು ದೂರವಿದೆ, ಕಾರ್ಮಿಕರಿಗೆ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ತೆರಳುವುದೂ ಕಷ್ಟವಾಗುತ್ತದೆ. ಆದ್ದರಿಂದ ಉದ್ಯಮಭಾಗ ದಲ್ಲಿ ESI ಅಸ್ಪತ್ರೆ ನಿರ್ಮಾಣದಲ್ಲಿ ಕಾರ್ಮಿಕರಿಗೆ ತಕ್ಷಣವೇ ಬೇಕಿರುವ ಚಿಕಿತ್ಸೆ ಒದಗಿಸಬಹುದು.
ರಾಜ್ಯ ಸರ್ಕಾರದ ಎಡವಟ್ಟು : ರಾಜ್ಯ ಸರಕಾರ ಕೇಂದ್ರ ಕಾರ್ಮಿಕ ವಿಮಾ ನಿಗಮದ ವತಿಯಿಂದ ಬೆಳಗಾವಿ ನಗರದ ಉದ್ಯಮಬಾಗದಲ್ಲಿ ESI ಆಸ್ಪತ್ರೆ ನಿರ್ಮಿಸುವಂತೆ ಪ್ರಸ್ತಾವನೆಯನ್ನು ಸಲ್ಲಿಸಿದೆ. 5 ಎಕರೆ ಜಾಗವನ್ನೂ ಗುರುತಿಸಲಾಗಿದೆ. ಆದರೆ, 100 ಬೆಡ್ ಆಸ್ಪತ್ರೆ ಕೇಳುವ ಬದಲು ಕೇವಲ 30 ಬೆಡ್ ಆಸ್ಪತ್ರೆಗೆ ಬೇಡಿಕೆ ಇಟ್ಟಿದೆ. ನಿಯಮದ ಪ್ರಕಾರ 1 ಲಕ್ಷಕ್ಕೂ ಹೆಚ್ಚಿನ ನೋಂದಾಯಿತ ಕಾರ್ಮಿಕರಿದ್ದಲ್ಲಿ ಕನಿಷ್ಟ 100 ಬೆಡ್ ಗಳ ESI ಅಸ್ಪತ್ರೆ ಒದಗಿಸಬೇಕು ಆದರೆ ರಾಜ್ಯ ಸರ್ಕಾರ ಕೇವಲ 30 ಬೆಡ್ ಗಳ ಅಸ್ಪತೆಗೆ ಬೇಡಿಕೆ ಇಟ್ಟಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ESI-S ಬೇಡ, ESI-C ಯೇ ಬೇಕು : ESIS ಅನ್ನು ರಾಜ್ಯ ಸರ್ಕಾರ ನಿರ್ವಹಿಸುತ್ತದೆ, ESIC ಅನ್ನು ಕೇಂದ್ರ ಸರ್ಕಾರ ನಿರ್ವಹಿಸುತ್ತದೆ. ರಾಜ್ಯ ಸರ್ಕಾರದ ESIS ನ ನಿರ್ವಹಣೆ ಅಷ್ಟೊಂದು ಸರಿಯಿಲ್ಲದ ಕಾರಣ ಕಾರ್ಮಿಕ ಮುಖಂಡರುಗಳು ESIC ಯೆ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಇದರನ್ವಯ ರಾಜ್ಯಸಭಾ ಸದಸ್ಯರಾಗಿರುವ ಈರಣ್ಣ ಕಡಾಡಿ ಯವರು ಕೇಂದ್ರದಲ್ಲಿ ESI-C ಅಸ್ಪತೆಯನ್ನು ಮಂಜೂರು ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ.
- Advertisement -
RTI ನಲ್ಲಿ ಉತ್ತರ :
ಪ್ರಶ್ನೆ – ಬೆಳಗಾವಿಯಲ್ಲಿ ಹೊಸ ESIC ಆಸ್ಪತ್ರೆ ನಿರ್ಮಿಸುವ ಪ್ರಸ್ತಾವನೆ ಇದೆಯೇ ?. ಉತ್ತರ – ಉದ್ಯಮಭಾಗ ದಲ್ಲಿ ESIS ಅಸ್ಪತ್ರೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಪ್ರಶ್ನೆ – ಬೆಳಗಾವಿಯಲ್ಲಿ ಈಗಿರುವ ESI ಆಸ್ಪತ್ರೆಯ ನಿರ್ವಹಣೆ ಯಾರ ಕೈಯಲ್ಲಿದೆ ?. ಉತ್ತರ – ಈಗಿರುವ 50 ಬೆಡ್ ಗಳ ಆಸ್ಪತ್ರೆ (ESI-S) ಕರ್ನಾಟಕ ರಾಜ್ಯ ಸರ್ಕಾರ ನಿರ್ವಹಿಸುತ್ತಿದೆ.
ಪ್ರಶ್ನೆ – ಈಗಿರುವ ESI ಆಸ್ಪತ್ರೆಯಲ್ಲಿ ಎಷ್ಟು ನರ್ಸಿಂಗ್ ಆಫೀಸರ್ ಗಳು ಹಾಗೂ ಎಷ್ಟು ಶಾಶ್ವತ ಮೆಡಿಕಲ್ ಆಫೀಸರ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ? ಉತ್ತರ – 16 ನರ್ಸಿಂಗ್ ಆಫೀಸರ್ ಗಳು, 13 ಶಾಶ್ವತ ಮೆಡಿಕಲ್ ಆಫೀಸರ್ ಗಳು.
ಪ್ರಶ್ನೆ – 2021 ರ ಜನೆವರಿ ತಿಂಗಳಿನಲ್ಲಿನ OPD ಸ್ಥಿತಿಗತಿ ಮಾಹಿತಿ ತಿಳಿಸಿ. ಉತ್ತರ – OBG : 328, ಮೆಡಿಸಿನ್ : 2423, ಸರ್ಜರಿ : 394
ಪ್ರಶ್ನೆ – ಎಷ್ಟು ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗಿದೆ ?. ಉತ್ತರ – KLE ಆಸ್ಪತೆಗೆ 477, ಬೇರೆ ಆಸ್ಪತ್ರೆಗಳಿಗೆ 88.
ಪ್ರಶ್ನೆ – ESIC ಅಡಿಯಲ್ಲಿ ಒಟ್ಟು ವಿಮೆ ಮಾಡಿಸಿದ ವ್ಯಕ್ತಿಗಳ ಸಂಖ್ಯೆ ? ಉತ್ತರ – ಹುಬ್ಬಳ್ಳಿಯಲ್ಲಿರುವ ESIC, SRO ನಲ್ಲಿ 4,89,824 ಜನ ವಿಮೆ ಮಾಡಿಸುತ್ತಾರೆ.
ಪ್ರಶ್ನೆ – ಜಿಲ್ಲಾವಾರು ESIC ಅಡಿಯಲ್ಲಿ ಒಟ್ಟು ವಿಮೆ ಮಾಡಿಸಿದ ವ್ಯಕ್ತಿಗಳ ಸಂಖ್ಯೆ ? ಉತ್ತರ – ಹುಬ್ಬಳ್ಳಿಯಲ್ಲಿರುವ ESIC, SRO ನಲ್ಲಿ ವಿಮೆ ಮಾಡಿಸಿದ ವ್ಯಕ್ತಿಗಳ ಸಂಖ್ಯೆ – ಜಿಲ್ಲಾವಾರು – ಧಾರವಾಡ 154620, ಬೆಳಗಾವಿ 118354, ಶಿವಮೊಗ್ಗ 76300, ಗದಗ 7803, ದಾವಣಗೆರೆ 49726 ,ಹಾವೇರಿ 11479, ಕೊಪ್ಪಳ 25706,ಚಿತ್ರದುರ್ಗ 18617,ಉತ್ತರಕನ್ನಡ 27219.


ಕರ್ನಾಟಕದಲ್ಲಿ ಈಗಾಗಲೇ ಇರುವ ESIC ಆಸ್ಪತ್ರೆಗಳು – ಕರ್ನಾಟಕದಲ್ಲಿ ಕೇವಲ 3 ಕಡೆ ESIC ಆಸ್ಪತ್ರೆಗಳಿವೆ – ಬೆಂಗಳೂರಿನ ರಾಜಾಜಿ ನಗರ, ಪೀಣ್ಯ ಹಾಗೂ ಕಲಬುರ್ಗಿ. ನಾಲ್ಕನೆಯ ESIC ಆಸ್ಪತ್ರೆಯನ್ನು ಬೆಳಗಾವಿಯಲ್ಲಿ ನಿರ್ಮಿಸಬೇಕೆಂದು ಕಾರ್ಮಿಕರ ಒತ್ತಯವಿದೆ. ಬೆಳಗಾವಿಯಲ್ಲಿ ನಿರ್ಮಿಸಿದ್ದೇ ಆದಲ್ಲಿ, ಉತ್ತರ ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ, ಗೋವಾ ಗಳ ಕಾರ್ಮಿಕ ಕುಟುಂಬಗಳಿಗೆ ಸಹಾಯವಾಗಬಹುದು.
ಕಳೆದ 7 ವರ್ಷದಲ್ಲಿ ಬಹುತೇಕ ಉತ್ತರಪ್ರದಶ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿನ ESIS ಆಸ್ಪತ್ರೆಗಳನ್ನು ESIC ಆಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಯಾವುದೇ ESIS ಆಸ್ಪತ್ರೆಗೂ ಈ ಅದೃಷ್ಟ ದೊರೆತಿಲ್ಲ.