ಉತ್ತರ ಕರ್ನಾಟಕದ ಮಂದಿಗೆ ಇಲ್ಲಿದೆ ಸಿಹಿ ಸುದ್ದಿ. ಬೆಳಗಾವಿ-ದೆಹಲಿ ನಡುವಿನ ನೇರ ವಿಮಾನ ಸೇವೆ ಇನ್ನು ಇರಲಿದೆ ನಿತ್ಯ.
ಹೌದು ಉತ್ತರ ಕರ್ನಾಟಕದ ಜನರ ಬಹುದಿನಗಳ ಬೇಡಿಕೆಯಾಗಿದ್ದ ದೆಹಲಿ-ಬೆಳಗಾವಿ ನೇರ ಸೇವೆ ಕಳೆದ ಆಗಸ್ಟ್ ತಿಂಗಳಿನಲ್ಲಿ ಪ್ರಾರಂಭವಾಗಿತ್ತು. ಪ್ರಾರಂಭದಿಂದ ಈ ವಿಮಾನ ಸೇವೆ ಒಳ್ಳೆಯ ಪ್ರತಿಕ್ರಿಯೆ ದೊರೆತಿದ್ದರಿಂದ ಈ ಸೇವೆಯನ್ನು ಸ್ಪೈಸ್ ಜೆಟ್ ವಿಮಾನ ಸೇವೆಯು ನಿತ್ಯ ನೀಡಲು ಮುಂದಾಗಿದೆ.
ಪ್ರಾರಂಭಿಕ ಸೇವೆಯಾಗಿ ವಾರದಲ್ಲಿ ಎರಡು ದಿನ ಹಾರಾಟ ನಡೆಸುತ್ತಿದ್ದ ಸಂಸ್ಥೆ, ಇದೇ ಮಾರ್ಚ್ 27 ರಿಂದ ವಾರದಲ್ಲಿ ಎಲ್ಲ ದಿನವೂ ವಿಮಾನ ಹಾರಾಟ ನಡೆಸಲಿದೆ. ವಿಮಾನ ಸೇವೆಯ ದರ 5686 ರೂ ಇರಲಿದ್ದು, ಬುಕಿಂಗ್ ಕೂಡ ಆರಂಭವಾಗಿದೆ.
ಈ ಪ್ರಮುಖ ನಗರಗಳ ಮದ್ಯೆ ಹಾರಾಟ ನಡೆಸಲು ಸ್ಪೈಸ್ ಜೆಟ್ ಸಂಸ್ಥೆ ದೊಡ್ಡ ಹಾಗೂ ಹೆಚ್ಚು ಆಸನಗಳುಳ್ಳ ವಿಮಾನ ಗಳಾದ ಬೋಯಿಂಗ್ 737 ಅಥವಾ ಬೋಯಿಂಗ್ 738 ಗಳನ್ನು ಬಲಸಲಿದೆ. ಈ ವಿಮಾನಗಳಲ್ಲಿ 149 ಅಥವಾ 189 ಅಸನಗಳಿರಲಿವೆ.
- Advertisement -
ವೇಳಾಪಟ್ಟಿ – ಸ್ಪೈಸ್ ಜೆಟ್ ನ ವಿಮಾನ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಜಾನೆ 6.05 ಕ್ಕೆ ಹೊರಟು ಮುಂಜಾನೆ 8.45 ಕ್ಕೆ ಬೆಳಗಾವಿ ವಿಮಾನ ಕ್ಕೆ ಬರಲಿದೆ. ಇದೇ ವಿಮಾನ ಮರಳಿ ದೆಹಲಿ ಹೊರಡಲಿದ್ದು, ಬೆಳಗಾವಿ ವಿಮಾನ ನಿಲ್ದಾಣವನ್ನು ಮುಂಜಾನೆ 9.15 ಕ್ಕೇ ಬಿಟ್ಟು ಮುಂಜಾನೆ 11.45 ಕ್ಕೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ಅಂದರೆ ದೆಹಲಿಯನ್ನು ಬೆಳಗಾವಿಯಿಂದ ಕೇವಲ 2 ಘಂಟೆ 40 ನಿಮಿಷ ದಲ್ಲಿ ತಲುಪಬಹುದು.
- Advertisement -
ಚಿತ್ರ ಕೃಪೆ – ಅಶ್ವಿನ್ ಪಾಟೀಲ್