ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಮತ್ತಿತರ ಅನುಕೂಲಕ್ಕಾಗಿ ವೋಟರ್ಸ್ ಹೆಲ್ಪ್ ಲೈನ್ ಆ್ಯಪ್ ಲಭ್ಯವಿದ್ದು, ಎಲ್ಲರೂ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ಸಾರ್ವಜನಿಕರು Voters Helpline App(VHA) ನ್ನು Google Play Store ನಿಂದ Download ಮಾಡಿಕೊಳ್ಳಬಹುದು. Download here : https://play.google.com/store/apps/details?id=com.eci.citizen
ಸದರಿ ಆ್ಯಪ್ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿ ಕೊಳ್ಳಲು, ತಿದ್ದುಪಡಿ ಹಾಗೂ ಬೇರೆ ಕಡೆ ವರ್ಗಾಯಿಸಿಕೊಳ್ಳಲು, ಮತದಾರರ ಪಟ್ಟಿಯಿಂದ ಹೆಸರು ಕಡಿಮೆ ಮಾಡಿಕೊಳ್ಳಲು ಸದರಿ App ನ ಸದುಪಯೋಗವನ್ನು ಪಡೆದುಕೊಳ್ಳಬೇಕು ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.