Tuesday, October 26, 2021
HomeBelagavi City Corporationಮಹಾನಗರ ಪಾಲಿಕೆ ಚುನಾವಣೆ: ಮತದಾನದ ಅವಧಿ ಒಂದು ಗಂಟೆ ವಿಸ್ತರಣೆ

ಮಹಾನಗರ ಪಾಲಿಕೆ ಚುನಾವಣೆ: ಮತದಾನದ ಅವಧಿ ಒಂದು ಗಂಟೆ ವಿಸ್ತರಣೆ

ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ 2021ರ 58 ವಾರ್ಡಗಳಿಗೆ ಚುನಾವಣೆ ವೇಳಾ ಪಟ್ಟಿ ಪ್ರಕಟಿಸಲಾಗಿದ್ದು, ಸೆಪ್ಟೆಂಬರ್ 03 ರಂದು ಮತದಾನ ನಡೆಯಲಿದೆ.

ಅದರಂತೆ, ಮತದಾನದ ಸಮಯವನ್ನು ಮುಂಜಾನೆ 7:00 ಗಂಟೆಯಿಂದ ಸಾಯಂಕಾಲ 5:00 ಗಂಟೆಯವರೆಗೆ ನಿಗದಿಪಡಿಸಲಾಗಿತ್ತು.

ಆದರೆ, ಸೆಪ್ಟೆಂಬರ್ 03 ರಂದು ಜರುಗಲಿರುವ ಮಹಾನಗರ ಪಾಲಿಕೆ ಬೆಳಗಾವಿ ಸಾರ್ವತ್ರಿಕ ಚುನಾವಣೆ ಕುರಿತು ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ರಾಯಬಾಗ ಪಟ್ಟಣ ಪಂಚಾಯತಿ ವಾರ್ಡ ನಂ. 9 ಹಾಗೂ ಪುರಸಭೆ ಸವದತ್ತಿ ಯಲ್ಲಮ್ಮ ವಾರ್ಡ ನಂ. 23 ರ ಮತದಾನದ ಸಮಯವನ್ನು ಮುಂಜಾನೆ 7:00 ಗಂಟೆಯಿಂದ ಸಾಯಂಕಾಲ 6:00 ಗಂಟೆಯವರೆಗೆ ರಾಜ್ಯ ಚುನಾವಣಾ ಆಯೋಗವು ವಿಸ್ತರಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also read : ಬೆಳಗಾವಿ, ಹುಬ್ಬಳ್ಳಿ ಧಾರವಾಡ ಮತ್ತು ಕಲಬುರಗಿ ಪಾಲಿಕೆ ಚುನಾವಣೆಗೆ ಉಸ್ತುವಾರಿಗಳ ನೇಮಕ

RELATED ARTICLES
- Advertisment -