ಬೆಳಗಾವಿ ಮಹಾನಗರ ಪಾಲಿಕೆ – ವಾರ್ಡ್‌ವಾರು ಮತದರಾರರ ಕರಡುಪಟ್ಟಿ ಪ್ರಕಟ

ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ್‌ವಾರು ಕರಡು ಮತದರಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಮಹಾನಗರ ‌ಪಾಲಿಕೆ‌ ಆಯುಕ್ತ ಜಗದೀಶ್ ಕೆ.ಎಚ್.ತಿಳಿಸಿದ್ದಾರೆ.

ಮಹಾನಗರ ಪಾಲಿಕೆಗೆ 2011 ರ ಸಾಲಿನ ಜನಗಣತಿಯನ್ನು ಆಧರಿಸಿ ವಾರ್ಡ್‌ವಾರು
ಮೀಸಲಾತಿಯನ್ನು ನಿಗದಿಪಡಿಸಿ, ಅಂತಿಮ ಅಧಿಸೂಚನೆಯನ್ನು ಏಪ್ರಿಲ್‌ 19 ರಂದು ಕರ್ನಾಟಕ ವಿಶೇಷ ರಾಜ್ಯಪತ್ರದಡಿ ಪ್ರಕಟಿಸಿ, ಅಧಿಸೂಚನೆ ಹೊರಡಿಸಲಾಗಿತ್ತು.

ಈ ಅಧಿಸೂಚನೆ ಹಾಗೂ ರಾಜ್ಯ ಚುನಾವಣಾ ಆಯೋಗದ ಸೂಚನೆಗಳ‌ ಅನ್ವಯ ಜನವರಿ 01
ರ ಅರ್ಹತಾ ದಿನಾಂಕಕ್ಕೆ ಪರಿಷ್ಕರಣೆಯಾದ, ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಜನವರಿ 18 ರ ಮತದಾರ ಪಟ್ಟಿಯ ಡಾಟಾ ಪಡೆದುಕೊಂಡು ಪ್ರಸ್ತುತ ಮತದಾರರ ಪಟ್ಟಿಯನ್ನು ಸಿದ್ಧಡಿಸಲಾಗಿದೆ‌ ಎಂದು ಅವರು ತಿಳಿಸಿದ್ದಾರೆ.

ಅಲ್ಲದೇ, ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡುಗಳ ವಾರ್ಡ್‌ವಾರು ಕರಡು ಮತದಾರರ ಪಟ್ಟಿಯನ್ನು ಜೂನ್ 28 ರಂದು ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ, ತಾಲ್ಲೂಕು ಕಚೇರಿ, ಮಹಾನಗರ ಪಾಲಿಕೆಯ ಕಚೇರಿ ಹಾಗೂ ಮತಗಟ್ಟೆ ವ್ಯಾಪ್ತಿಗಳಲ್ಲಿ ಪ್ರಚುರಪಡಿಸಲಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡುಗಳ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ, ಆಕ್ಷೇಪಣಿಗಳು ಇದ್ದಲ್ಲಿ ಜುಲೈ 01 ರ ಒಳಗಾಗಿ ಬೆಳಗಾವಿ ಮಹಾನಗರ ಪಾಲಿಕೆಗೆ ಸಲ್ಲಿಸಬಹುದು ಎಂದು ಮಹಾನಗರ ‌ಪಾಲಿಕೆ‌ ಆಯುಕ್ತ ಜಗದೀಶ್ ಕೆ.ಎಚ್.ತಿಳಿಸಿದ್ದಾರೆ.

Leave a Reply