ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಆರಂಭಿಸಲಾಗಿರುವ ನಾಮಪತ್ರ ಸ್ವೀಕೃತಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಬುಧವಾರ (ಆ.18) ಭೇಟಿ ನೀಡಿದರು.
ಪಾಲಿಕೆಯ ಕಚೇರಿ, ವಿಶ್ವೇಶ್ವರಯ್ಯ ನಗರ, ಗೋವಾವೇಸ್ ನಲ್ಲಿರುವ ಪಾಲಿಕೆ ಕಚೇರಿ, ಕೊನವಾಳಗಲ್ಲಿ ಹಾಗೂ ಅಶೋಕ ನಗರದಲ್ಲಿ ಇರುವ ನಾಮಪತ್ರ ಸ್ವೀಕೃತಿ ಕೇಂದ್ರಗಳಿಗೆ ಅವರು ಭೇಟಿ ನೀಡಿದರು.
ನಾಮಪತ್ರ ಸ್ವೀಕೃತಿ ಸಂದರ್ಭದಲ್ಲಿ ಗೊಂದಲ ಉಂಟಾಗದಂತೆ ನಗರದ ವಿವಿಧ ಕಡೆಗಳಲ್ಲಿ ನಾಮಪತ್ರ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ.
ಆಯಾ ವಾರ್ಡುಗಳ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಸಮೀಪದ ಕೇಂದ್ರಗಳಲ್ಲಿ ನಾಮಪತ್ರಗಳನ್ನು ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿರುತ್ತದೆ.
Also read : ಮಹಾನಗರ ಪಾಲಿಕೆ ಚುನಾವಣೆ: ಕಂಟ್ರೋಲ್ ರೂಮ್ ಆರಂಭ
- Advertisement -
ನಾಮಪತ್ರಗಳ ಸಲ್ಲಿಕೆ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿ ಹಾಗೂ ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅಧಿಕಾರಿಗಳಿಗೆ ತಿಳಿಸಿದರು.
- Advertisement -
ಪಾಲಿಕೆಯ ಅಭಿಯಂತರರಾದ ಲಕ್ಷ್ಮಿ ನಿಪ್ಪಾಣಿಕರ ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.