ಬೆಳಗಾವಿ ವಿಮಾನ ನಿಲ್ದಾಣ ಈಗ ರಾಜ್ಯದಲ್ಲಿ ೨ ನೇ ಸ್ಥಾನಕ್ಕೇರಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಹೌದು ರಾಜ್ಯ ಸರ್ಕಾರ, ಕೋವಿಡ್ ಎರಡನೇ ಅಲೆಯ ಹಿನ್ನೆಲೆ ಘೋಷಿಸಿದ್ದ ಲಾಕ್ ಡೌನ್ ನಲ್ಲಿ ಅಂದರೆ ಮೇ ತಿಂಗಳಿನಲ್ಲಿ ಅತೀ ಹೆಚ್ಚು ವಿಮಾನಗಳ ಹಾರಾಟ ನಡೆದ ಎರಡನೇ ಬಿಸಿಯೆಸ್ಟ್ ಏರ್ಪೋರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿಮಾನಗಳ ಹಾರಾಟ – ಮೊದಲನೇ ಸ್ಥಾನದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಂದುವರೆದಿದ್ದು, ಬೆಳಗಾವಿ ಮತ್ತು ಮಂಗಳೂರು ನಂತರದ ಸ್ಥಾನದಲ್ಲಿರುತ್ತವೆ. ಮೇ ತಿಂಗಳಿನಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದ 6356 ವಿಮಾನಗಳು ಹಾರಾಟ ನಡೆಸುತ್ತವೆ. ಬೆಳಗಾವಿ ವಿಮಾನ ನಿಲ್ದಾಣದಿಂದ ನಾಲ್ಕು ವಿಮಾನ ಸಂಸ್ಥೆಗಳು ಬರೋಬ್ಬರಿ 492 ವಿಮಾನಗಳು ಹಾರಾಟ ನಡೆಸಿರುತ್ತವೆ. ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 440 ವಿಮಾನಗಳ ಹಾರಾಟ ನಡೆದಿರುತ್ತದೆ.
ಪ್ರಯಾಣಿಕರ ಬಳಕೆ – ಪ್ರಯಾಣಿಕರ ಬಳಕೆಯಲ್ಲೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೊದಲನೇ ಸ್ಥಾನದಲ್ಲಿದ್ದು, ಒಟ್ಟು 3,97,085 ಜನ ಬೆಂಗಳೂರಿಂದ/ಗೆ ಪ್ರಯಾಣಿಸುತ್ತಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎರಡನೇ ಸ್ಥಾನದಲ್ಲಿದ್ದು, ಒಟ್ಟು 23,412 ಜನ ಮಂಗಳೂರಿಂದ/ಗೆ ಪ್ರಯಾಣಿಸುತ್ತಾರೆ ಹಾಗೂ ಬೆಳಗಾವಿ ವಿಮಾನ ನಿಲ್ದಾಣ ಮೂರನೇ ಸ್ಥಾನದಲ್ಲಿದ್ದು, ಒಟ್ಟು 11,271 ಜನ ಬೆಳಗಾವಿಯಿಂದ/ಗೆ ಪ್ರಯಾಣಿಸುತ್ತಾರೆ.
ಉಳಿದಂತೆ, ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ/ಗೆ 4474 ಜನ ಪ್ರಯಾಣಿಸುತ್ತಾರೆ ಮತ್ತು 202 ವಿಮಾನಗಳ ಹಾರಾಟ ನಡೆದಿರುತ್ತದೆ. ಕಲಬುರ್ಗಿ ವಿಮಾನ ನಿಲ್ದಾಣದಿಂದ/ಗೆ 3483 ಜನ ಪ್ರಯಾಣಿಸುತ್ತಾರೆ ಮತ್ತು 155 ವಿಮಾನಗಳ ಹಾರಾಟ ನಡೆದಿರುತ್ತದೆ. ಮೈಸೂರು ವಿಮಾನ ನಿಲ್ದಾಣದಿಂದ/ಗೆ 1951 ಜನ ಪ್ರಯಾಣಿಸುತ್ತಾರೆ ಮತ್ತು 224 ವಿಮಾನಗಳ ಹಾರಾಟ ನಡೆದಿರುತ್ತದೆ. ವಿಜಯನಗರ ವಿಮಾನ ನಿಲ್ದಾಣದಿಂದ/ಗೆ 1074 ಜನ ಪ್ರಯಾಣಿಸುತ್ತಾರೆ ಮತ್ತು 68 ವಿಮಾನಗಳ ಹಾರಾಟ ನಡೆದಿರುತ್ತದೆ. ಬೀದರ್ ವಿಮಾನ ನಿಲ್ದಾಣದಿಂದ/ಗೆ 697 ಜನ ಪ್ರಯಾಣಿಸುತ್ತಾರೆ ಮತ್ತು 34 ವಿಮಾನಗಳ ಹಾರಾಟ ನಡೆದಿರುತ್ತದೆ.