Sunday, October 24, 2021
HomeAirportಬೆಳಗಾವಿ-ತಿರುಪತಿ ನಡುವೆ ಅ.11 ರಿಂದ ಮತ್ತೊಂದು ಉಡಾನ್ ವಿಮಾನ ಹಾರಾಟ

ಬೆಳಗಾವಿ-ತಿರುಪತಿ ನಡುವೆ ಅ.11 ರಿಂದ ಮತ್ತೊಂದು ಉಡಾನ್ ವಿಮಾನ ಹಾರಾಟ

ಕೋವಿಡ್ ಎರಡನೇ ಅಲೆಯಿಂದ ಬೆಳಗಾವಿ ತಿರುಪತಿ ನಡುವೆ ಏಪ್ರಿಲ್ ತಿಂಗಳಿನಲ್ಲಿ ಪ್ರಾರಂಭವಾಗಬೇಕಿದ್ದ ವಿಮಾನ ಸೇವೆ ಕೊಂಚ ತಡವಾಗಿ ಇದೇ ಅಕ್ಟೋಬರ್ 11 ನೇ ತರಿಖಿನಿಂದ ಪ್ರಾರಂಭವಾಗಲಿದೆ.

ಸಂಜಯ್ ಘೋಡವತ್ ಸ್ಟಾರ್ ಏರ್ ವಿಮಾನ ಸಂಸ್ಥೆಯು ಈ ಮಾರ್ಗದಲ್ಲಿ ವಿಮಾನ ಹಾರಾಟ ಆರಂಭಿಸಲಿದೆ. ಈ ಸೇವೆಯು ವಾರದ ಎರಡು ದಿನ ಅಂದರೆ ಸೋಮವಾರ ಹಾಗೂ ಬುಧವಾರ ಸೇವೆ ನೀಡಲಿದ್ದು, ಇದು ಉಡಾನ್ ಯೋಜನೆಗೆ ಒಳಪಟ್ಟಿರುತ್ತದೆ.

ಈ ಮಾರ್ಗದಲ್ಲಿ ಈಗಾಗಲೇ ಟ್ರೂಜೆಟ್ ವಿಮಾನ ಸಂಸ್ಥೆ ತನ್ನ ಹಾರಾಟವನ್ನು ನಡೆಸುತ್ತಿದ್ದು, ಸ್ಟಾರ್ ಏರ್ ಕೂಡ ಇದರೊಂದಿಗೆ ಹಾರಾಟ ನಡೆಸಲಿದೆ. ಬೆಳಗಾವಿ ಭಾಗದ ಜನರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಒಟ್ಟು 2 ವಿಮಾನ ಹಾರಾಟ ಉಪಲಬ್ದವಾಗಲಿದೆ.

ವೇಳಾಪಟ್ಟಿ : ಸ್ಟಾರ್ ಏರ್ ನ ಈ ವಿಮಾನವು ತಿರುಪತಿಯಿಂದ ಬೆಳಿಗ್ಗೆ 11.55 ಘಂಟೆಗೆ ಹೊರಟು, ಮದ್ಯಾಹ್ನ 12.55 ಕ್ಕೆ ಬೆಳಗಾವಿ ತಲಿಪಲಿದೆ. ಹಾಗೂ ಬೆಳಗಾವಿ ವಿಮಾನ ನಿಲ್ದಾಣದಿಂದ ಮದ್ಯಾಹ್ನ 1.20 ಘಂಟೆಗೆ ಹೊರಟು, ಮದ್ಯಾಹ್ನ 2.25 ಕ್ಕೆ ತಿರುಪತಿ ತಲುಪಲಿದೆ.

ಸ್ಟಾರ್ ಏರ್ ವಿಮಾನ ಸಂಸ್ಥೆ ಬೆಳಗಾವಿಯಿಂದ ಈಗಾಗಲೇ ಮುಂಬೈ, ಸೂರತ್, ನಾಶಿಕ್, ಅಹ್ಮದಾಬಾದ್, ಜೋಧಪುರ, ಇಂದೋರ್ ನಗರಗಳಿಗೆ ನೇರ ವಿಮಾನ ಸೇವೆ ನೀಡುತ್ತಿದೆ.

RELATED ARTICLES
- Advertisment -