ಬೀಮ್ಸ್ ಆಡಳಿತಾಧಿಕಾರಿಯಾದ ಆದಿತ್ಯ ಅಮ್ಲನ್ ಬಿಸ್ವಾಸ್ ಅವರ ಕೋರಿಕೆಯ ಮೇರೆಗೆ ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ವಿಶೇಷ ಅನುದಾನ ನೀಡುವಂತೆ ಅನಿಲ್ ಬೆನಕೆ ಮುಖ್ಯಮಂತ್ರಿಗಳಿಗೆ ನೇರ ಬೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ.
ಬೀಮ್ಸ್ ಆಸ್ಪತ್ರೆಗೆ ವಿಶೇಷ ಅನುದಾನ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಗುರುವಾರ ಬೇಟಿ ಮಾಡಿರುವ ಬೆಳಗಾವಿಯ ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ, “ಕೋರೋಣ ಮಾರಾಮಾರಿಯ ಸಂದರ್ಭದಲ್ಲಿ ನನ್ನ ಮತಕ್ಷೇತ್ರದ ವ್ಯಾಪ್ತಿಯ ನಗರ ಆರೋಗ್ಯ ಕೇಂದ್ರಗಳಿಗೆ ಇಲಾಖೆಯ ವೈದ್ಯರು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಬೇಟಿ ಮಾಡಲಾಗಿ, ಅಲ್ಲಿನ ಸಮಸ್ಯೆಗಳು ನನಗೆ ತಿಳಿದು ಬಂದಿರುತ್ತದೆ, ಸದರಿ ಆರೋಗ್ಯ ಕೇಂದ್ರಗಳಿಗೆ ನೀಡಲಾದ ಉಪಕರಣಗಳು ಹಾಗೂ ಇನ್ನಿತರೇ ಔಷಧೋಪಕರಣಗಳ ಖರ್ಚು ವೆಚ್ಚಗಳ ಬಗ್ಗೆ ತಿಳಿದುಬಂದಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಅದರ ದರಗಳನ್ನು ಪಡೆದುಕೊಂಡು ವರದಿ ನೀಡುವಂತೆ ಕೋರಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
“ಬೆಳಗಾವಿ ಜಿಲ್ಲೆಯು ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿದ್ದು, ಬೇರೆ ಎಲ್ಲ ತಾಲೂಕಿಗಿಂತ ಬೆಳಗಾವಿಯು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುತ್ತದೆ. ಜಿಲ್ಲೆಯಲ್ಲಿಯೇ ಪ್ರತಿಷ್ಟಿತ ಹಾಗೂ ಉತ್ತಮ ಆಸ್ಪತ್ರೆ ಬೀಮ್ಸ್ ಆಸ್ಪತ್ರೆಯಾಗಿದ್ದು, ಬೇರೆ ತಾಲೂಕಿನಿಂದ ಹೆಚ್ಚಿನ ಕೊರೊನಾ ಪೀಡಿತ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮೂರನೆ ಅಲೆ ಮಕ್ಕಳಿಗೆ ವ್ಯಾಪಿಸುತ್ತಿರುವುದರಿಂದ ಮಕ್ಕಳ ಆರೋಗ್ಯ ಬಲಿಷ್ಠವಾಗಿಸುವ ನಿಟ್ಟಿನಲ್ಲಿ ಆದ್ಯತೆ ನೀಡಿ ನನ್ನ ಉತ್ತರ ವಿಧಾನಸಭಾ ಮತಕ್ಷೇತ್ರದಲ್ಲಿ ಲಸಿಕಾ ಕೇಂದ್ರಗಳನ್ನು ತೆರೆದು, ರೋಗಿಗಳಿಗೆ ಒಳ್ಳೆಯ ಸವಲತ್ತುಗಳನ್ನು ನೀಡುವುದು ಅವಶ್ಯಕವಾಗಿರುತ್ತದೆ. ದಿನಂಪ್ರತಿ ಸುಮಾರು 30,000 ಗೌಡ ಲಸಿಕೆ ನೀಡುವ ವ್ಯವಸ್ಥೆಯನ್ನು ಕಲಿಸುವುದು ಅತೀ ಸೂಕ್ತವಾಗಿರುತ್ತದೆ”.
“ಪ್ರಯುಕ್ತ ಸದರಿ ವೆಚ್ಚಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರೂ. 50 ಲಕ್ಷಗಳ ಹೆಚ್ಚುವರಿಯಾಗಿ ವಿಶೇಷ ಅನುದಾನವನ್ನು ಸರ್ಕಾರದ ಬಜೆಟ್ ಹೆಡ್ ನಿಂದ ಬೀಮ್ಸ್ ಆಸ್ಪತ್ರೆ ಬೆಳಗಾವಿಗೆ ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿ ಅನುಕೂಲ ಮಾಡುವಂತೆ ತಮ್ಮನ್ನು ವಿನಂತಿಸುತ್ತೇನೆ.” ಎಂದು ಪತ್ರದಲ್ಲಿ ಕೋರಿದ್ದಾರೆ.
- Advertisement -
ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು ಆದಷ್ಟು ಬೇಗ ಹಣ ಬಿಡುಗಡೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆಂದು ಶಾಸಕ ಅನಿಲ್ ಬೆನಕೆ ಹೇಳಿದ್ದಾರೆ.