ಏಮ್ಸ್ ಫಾರ್ ಬೆಳಗಾವಿ (#AIIMSforBelagavi) – ಈಗಿರುವ ಜಿಲ್ಲಾಸ್ಪತ್ರೆ ಸ್ಥಿತಿ, ಖಾಸಗಿ ಆಸ್ಪತ್ರೆಗಳ ಹಾವಳಿ ನೋಡಿ ಬೇಸತ್ತ ಗಡಿಜಿಲ್ಲೆ ಬೆಳಗಾವಿ ಜನತೆ ಹೊಸ ಅಭಿಯಾನ ಆರಂಭಿಸಿದ್ದು, ಬಾರಿ ಬೆಂಬಲ ವ್ಯಕ್ತವಾಗಿದೆ.
ಕೇಂದ್ರ ಸರ್ಕಾರ (Central Government) ದ ಮಹತ್ವದ ಘೋಷಣೆಯಾದ ಏಮ್ಸ್ (ಅಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) (AIIMS) ಕರ್ನಾಟಕಕ್ಕೆ ಮಂಜೂರಾಗಿದ್ದು, ಈ ಸಂಸ್ಥೆಯನ್ನು ಬೆಳಗಾವಿ (Belagavi) ಯಲ್ಲಿ ಆರಂಭಿಸುವಂತೆ ಟ್ವಿಟರ್ ಅಭಿಯಾನ (Twitter Campaign) ಆರಂಭವಾಗಿದೆ.
#AIIMSforBelagavi ಎಂಬ ಹ್ಯಾಷ್ ಟ್ಯಾಗ್ ಮೂಲಕ ಬೆಳಗಾವಿಯ ಜನಪ್ರತಿನಿಧಿಗಳಿಗೆ, ರಾಜ್ಯ ಸರ್ಕಾರಕ್ಕೆ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ಜಿಲ್ಲೆಯ ಜನ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನ 6 ಲಕ್ಷಕ್ಕೂ ಹೆಚ್ಚು ಜನರಿಗೆ ಟ್ವಿಟರ್ ಮೂಲಕ ತಲುಪಿದೆ.
ಬೆಳಗಾವಿಯನ್ನು ಬರೀ ರಾಜ್ಯದ ರಾಜಕೀಯ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಬೆಳಗಾವಿಯು ರಾಜ್ಯದ ಎರಡನೇ ರಾಜದಾನಿ ಎಂದು ಚುನಾವಣೆ ಇದ್ದಾಗ ಹೇಳುವ ಸರ್ಕಾರಗಳು, ಜನಪ್ರತಿನಿಧಿಗಳು ಬೆಳಗಾವಿಗೆ ಇದುವರೆಗೆ ಯಾವುದೇ ದೊಡ್ಡ ಯೋಜನೆಗಳನ್ನು ತಂದಿಲ್ಲ. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮಾತ್ರ ಜಿಲ್ಲೆಯನ್ನು ಬಳಸಿಕೊಳ್ಳುತ್ತಿರುವುದು ಎದ್ದು ಕಾಣುತ್ತಿದೆ.
- Advertisement -
ಏಮ್ಸ್ ಬೆಳಗಾವಿಯಲ್ಲಿ ಸ್ಥಾಪನೆಯಾಗುವುದರಿಂದ ಕಿತ್ತೂರು ಕರ್ನಾಟಕ (Kittur Karnataka) ಭಾಗದ ಜನರಿಗೆ ಮಾತ್ರವಲ್ಲದೆ, ನೆರೆಯ ಗೋವಾ (Goa), ದಕ್ಷಿಣ ಮಹಾರಾಷ್ಟ್ರ (South Maharashtra) ದ ಬಡ ಜನರಿಗೂ ಕಡಿಮೆ ದರದಲ್ಲಿ ಚಿಕಿತ್ಸೆ (Treatment) ದೊರೆಯುತ್ತದೆ.
ಬೆಳಗಾವಿ ಜಿಲ್ಲೆಯು ರಾಜ್ಯದ ಅತೀ ದೊಡ್ಡ ಜಿಲ್ಲೆ, ಎರಡನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿದ ಜಿಲ್ಲೆಗೆ ಕೇವಲ 700 ಹಾಸಿಗೆಯ ಆಸ್ಪತ್ರೆಯಿದ್ದು, ಈ ಆಸ್ಪತ್ರೆಯಲ್ಲಿ ಕಿಮ್ಸ್ ನಂತೆ ಎಲ್ಲಾ ಚಿಕಿತ್ಸೆಯ ವಿಭಾಗಗಳಿಲ್ಲ. ಏಮ್ಸ್ ಆರಂಭಿಸಿದರೆ ಈ ಭಾಗದ ಬಡಜನರಿಗೆ ಸಹಾಯವಾಗಲಿದೆ.
ಹುಬ್ಬಳ್ಳಿ – ಧಾರವಾಡದಲ್ಲಿ ಆರಂಭಿಸಲು ಹುನ್ನಾರ : ಮಾಹಿತಿಗಳ ಪ್ರಕಾರ ಕರ್ನಾಟಕ ಸರ್ಕಾರ (Government of Karnataka) ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಹುಬ್ಬಳ್ಳಿ (Hubballi) ಯಲ್ಲಿ ಏಮ್ಸ್ ಸ್ಥಾಪಿಸುವಂತೆ ಪ್ರಸ್ತಾವನೆ (Proposal) ಯನ್ನು ಸಲ್ಲಿಸಲಾಗಿದ್ದು, ಅದರನ್ವಯ ಕೇಂದ್ರದ ತಂಡ (Centre Team) ಸ್ಥಳ ಪರಿಶೀಲನೆ ಮಾಡಿ ಹೋಗಿದೆ. ಆದರೆ ಹುಬ್ಬಳ್ಳಿಯಲ್ಲಿ ಈಗಾಗಲೇ ಅತೀ ದೊಡ್ಡ ಕಿಮ್ಸ್ ಆಸ್ಪತ್ರೆ (KIMS Hospital) ಇದ್ದು, 2100 ಬೆಡ್ ಗಳ ಆಸ್ಪತ್ರೆ ಇದಾಗಿದೆ. ಕೆಲವೇ ತಿಂಗಳುಗಳ ಹಿಂದೆ ಈ ಆಸ್ಪತ್ರೆಯನ್ನು ಕೇಂದ್ರ ಸರ್ಕಾರ PMSSY ಫೇಸ್ 3 ಅಡಿಯಲ್ಲಿ 150 ಕೋಟಿ ವೆಚ್ಚದಲ್ಲಿ ಹೆಚ್ಚುವರಿ 200 ಬೇಡಗಳ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಅಭಿವೃದ್ಧಿಗೊಳಿಸಿದೆ.
ಇದಲ್ಲದೇ, ಕರ್ನಾಟಕ ಸರ್ಕಾರ 2022 ರ ರಾಜ್ಯ ಬಜೆಟ್ (Karnataka Budget 2022-23) ನಲ್ಲಿ ಹುಬ್ಬಳ್ಳಿಯಲ್ಲಿ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆ (SJICR Jayadeva) 350 ಕೋಟಿ ವೆಚ್ಚದಲ್ಲಿ 350 ಹಾಸಿಗೆಯ ಆಸ್ಪತ್ರೆ ನಿರ್ಮಿಸಲು ಗ್ರೀನ್ ಸಿಗ್ನಲ್ ನೀಡಿದೆ, ಇವಲ್ಲದೇ ಮತ್ತೆ ಏಮ್ಸ್ ಕೂಡ ಹುಬ್ಬಳ್ಳಿಯಲ್ಲೇ ಆರಂಭಿಸಿದರೆ ಉಳಿದ ಜಿಲ್ಲೆಗಳ ಪರಿಸ್ಥಿತಿ ಏನು ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
ಆಶ್ಚರ್ಯವೆಂದರೆ, ಈಗಿರುವ ಕಿಮ್ಸ್ ಆಸ್ಪತ್ರೆಯಲ್ಲಿ ಏಮ್ಸ್ ನಲ್ಲಿ ಬರಬಹುದಾದ ಎಲ್ಲಾ ಚಿಕಿತ್ಸಾ ವಿಭಾಗಗಳು ಇವೆ ಹಾಗಾಗಿ ಮತ್ತೆ ಹುಬ್ಬಳ್ಳಿಗೆ ಏಮ್ಸ್ ಮಂಜೂರು ಮಾಡಿಸುವ ಅಗತ್ಯವೇನು ಎಂಬ ವಾದ ಬೆಳಗಾವಿಗರದ್ದು.
ಬೆಳಗಾವಿ ಸರ್ಕಾರಿ ಆಸ್ಪತ್ರೆಯಲ್ಲಿ ತೃತೀಯ ಹಂತದ ಆರೋಗ್ಯ ಸೇವೆ (Tertiary level health care centres) ಗಳಿಲ್ಲದ ಕಾರಣ ಖಾಸಗಿ ಆಸ್ಪತ್ರೆಗಳ ಮೇಲೆಯೇ ಹೆಚ್ಚಿನ ಜನ ಅವಲಂಬಿತರಾಗಿದ್ದಾರೆ. ಬಡವರು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಹೋಗುವುದು ಅನಿವಾರ್ಯವಾಗಿದೆ, ಏಮ್ಸ್ ಬೆಳಗಾವಿಯಲ್ಲಿ ಆರಂಭಿಸಿದರೆ ಹೆಚ್ಚಿನ ಅನುಕೂಲವಾಗಲಿದೆ.
ಏಮ್ಸ್ ಗೆ ಜಾಗ – ಕೇಂದ್ರ ಸರ್ಕಾರ ರಾಜ್ಯಕ್ಕೆ ಏಮ್ಸ್ ಮಂಜೂರು ಮಾಡಿದ್ದು, ಇದಕ್ಕೆ 200 ಎಕರೆ ಜಾಗ ಬೇಕೆಂದು ರಾಜ್ಯ ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ ಮತ್ತು ಏಮ್ಸ್ ಆರಂಭಿಸಲು ಬರೋಬ್ಬರಿ 2000 ಕೋಟಿ ರೂಪಾಯಿ ಮೀಸಲಿಟ್ಟಿದೆ.
ಬೆಳಗಾವಿಯಲ್ಲಿ ಏಮ್ಸ್ ಅರಂಭವಾದಲ್ಲಿ, ಈ ಭಾಗದ ಬಡಜನರು ನೆರೆಯ ರಾಜ್ಯದ ಮೀರಜ್, ಸಾಂಗ್ಲಿ ಗಳಿಗೆ ಅಲೆಯುವುದನ್ನು ತಪ್ಪಿಸಬಹುದು.
It is requested to open on dharwad city