ಬೆಳಗಾವಿ ಲೋಕಮಾನ್ಯ ತಿಲಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಹಾಮಂಡಲದ ವತಿಯಿಂದ ಮುಂಬರುವ ಗಣೇಶೋತ್ಸವದ ನಿಮಿತ್ತ ಬೆಳಗಾವಿ (Belagavi) ಯ ಎಲ್ಲಾ ಗಣೇಶೋತ್ಸವ ಮಂಡಲ (Ganeshotsav Mandals) ಗಳ ಪದಾಧಿಕಾರಿಗಳೊಂದಿಗೆ ನಗರದ ಶ್ರೀ ಸಮಾದೇವಿ ಮಂಗಲ ಕಾರ್ಯಾಲಯದಲ್ಲಿ ಗುರುವಾರ ಶಾಸಕ ಅನಿಲ್ ಬೆನಕೆ (Anil Benake) ಸಭೆ ನಡೆಸಿದರು.
ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು (Belagavi City Police Commissioner), ಮಹಾನಗರ ಪಾಲಿಕೆ ಆಯುಕ್ತರು (City Corporation Commissioner), ಹೆಸ್ಕಾಂ (Hescom), ಜಲಮಂಡಳಿ (Water Board), ಎಲ್ ಅಂಡ್ ಟಿ (L&T), ಕಂಟೋನ್ಮೆಂಟ್ ಬೋರ್ಡ್(Cantonment Board), ಅಗ್ನಿಶಾಮಕ ದಳದ (Fire and Emergency service dept.) ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು, ಎಲ್ಲಾ ಗಣೇಶೋತ್ಸವ ಮಂಡಳಗಳ ಅಗತ್ಯತೆ ಮತ್ತು ನಿರೀಕ್ಷೆಗಳ ಬಗ್ಗೆ ಚರ್ಚಿಸಿ ಶೀಘ್ರವಾಗಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.
ಪ್ರಮುಖವಾಗಿ ಗಣೇಶೋತ್ಸವ ಮಂಡಳಗಳಿಗೆ ಬೇಕಾಗುವ ಅನುಮತಿ ಪ್ರತಿಗಳನ್ನು ಸಿಂಗಲ್ ವಿಂಡೋ (Single-window permission) ಮುಖಾಂತರ ಅನುಷ್ಠಾನಗೊಳಿಸಿ ಅನುಕೂಲ ಮಾಡಿಕೊಡಲಾಗುವುದು, ನಗರದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ಆರ್ಒ ಪ್ಲಾಂಟ್ (RO Plant) ಚಾಲ್ತಿಗೊಳಿಸಿ ಗಣೇಶೋತ್ಸವ ಸಂದರ್ಭದಲ್ಲಿ 11 ದಿನ ಉಚಿತ ನೀರಿನ ವ್ಯವಸ್ಥೆ (Free Water), ಸಾರ್ವಜನಿಕ ಶೌಚಾಲಯ ವಿದ್ಯುತ್ ದೀಪಗಳ ಅಳವಡಿಕೆ, ಸಂಶಯಾಸ್ಪದ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ನಿಯುಕ್ತಿ , ಸಿಸಿಟಿವಿ ಕ್ಯಾಮೆರಾ ಅಳವಡಿಕೆ (CCTV), ಮೆರವಣಿಗೆ ರಸ್ತೆಗಳ ದುರಸ್ತಿಕರಣ, ವಿದ್ಯುತ್ ಕಂಬಗಳ ಅಳವಡಿಕೆ , ಸ್ವಚ್ಛ ಭಾರತ್ ಮತ್ತು ಸ್ಮಾರ್ಟ್ ಸಿಟಿ ಅಡಿಯಲ್ಲಿ ಡಸ್ಟ್ಬಿನ್ ಬಳಕೆ, ಹೆಸ್ಕಾಂ ವತಿಯಿಂದ ಮಂಡಳಗಳಿಗೆ ಮೀಟರ್ ಅಳವಡಿಕೆಯಲ್ಲಿ ರಿಯಾಯತಿ (Rebit), ಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನ ಸಂದರ್ಭದಲ್ಲಿ ಹೆಸ್ಕಾಂ (Hescom) ಅಧಿಕಾರಿಗಳಿಂದ ಹೆಚ್ಚುವರಿ ಲೆನ್ ಮ್ಯಾನ್ ನಿಯುಕ್ತಿ, ವಾಹನ ನಿಲುಗಡೆ ವ್ಯವಸ್ಥೆ, ಪೊಲೀಸ್ ಇಲಾಖೆ ವತಿಯಿಂದ ಕಾನೂನು ಸುವ್ಯವಸ್ಥೆ, 24×7 ಅಂಗಡಿಗಳಿಗೆ ಅನುಮತಿ (Shops), ಧ್ವನಿ ವರ್ಧಕಗಳ ಬಳಕೆಗೆ ಅವಕಾಶ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಿ ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲು ಎಲ್ಲ ಗಣೇಶೋತ್ಸವ ಮಂಡಳ, ಮಹಾಮಂಡಳ ಹಾಗೂ ಶಾಸಕ ಅನಿಲ್ ಬೆನಕೆ ಅವರಿಂದ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀ ನಿತೇಶ್ ಪಾಟೀಲ್, ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ, ಮಹಾನಗರ ಪಾಲಿಕೆ ಆಯುಕ್ತ ಶ್ರೀ ರುದ್ರೇಶ ಘಾಳಿ, ಹೆಸ್ಕಾಂ ಅಧಿಕಾರಿ ಶ್ರೀ ಹಮ್ಮಣ್ಣನವರ್, ಎಸ್.ಇ. ಶ್ರೀಮತಿ ಲಕ್ಷ್ಮೀ ನಿಪಾಣಿಕರ್, ಎಲ್ ಅಂಡ್ ಟಿ ಅಧಿಕಾರಿ ಶ್ರೀ ಹಾರ್ದಿಕ್ ದೇಸಾಯಿ, ಜಲಮಂಡಳಿ, ಕಂಟೋನ್ಮೆಂಟ್ ಬೋರ್ಡ್, ಅಗ್ನಿಶಾಮಕ ದಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಲೋಕಮಾನ್ಯ ಟೀಲಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಹಾಮಂಡಳದ ಅಧ್ಯಕ್ಷ ಶ್ರೀ ವಿಜಯ ಜಾಧವ್, ಪದಾಧಿಕಾರಿಗಳಾದ ಶ್ರೀ ರಾಜು ಖಟಾವ್ಕರ್, ಶ್ರೀ ಅರ್ಜುನ್ ರಜಪೂತ, ಶ್ರೀ ರವಿ ಕಲಘಟಗಿ, ಶ್ರೀ ನಿತಿನ್ ಜಾಧವ್, ಶ್ರೀ ಹೇಮಂತ್ ಹಾವಳ, ಶ್ರೀ ಶರದ್ ಪಾಟೀಲ್, ಶ್ರೀ ಶಂಕರ್ ಪಾಟೀಲ್ ಹಾಗೂ ಕು. ಸೌರಭ್ ಸಾವಂತ್ ಉಪಸ್ಥಿತರಿದ್ದರು.