ರಾಜ್ಯದಲ್ಲೇ ಅತೀ ದೊಡ್ಡ ಕ್ರೀಡಾ ಸಂಕೀರ್ಣ ಕುಂದಾನಗರಿ ಬೆಳಗಾವಿಯಲ್ಲಿ ತಲೆಯೆತ್ತಲಿದೆ. ಹೌದು, ನಗರಕ್ಕೆ ಹತ್ತಿರವಿರುವ ಯಳ್ಳೂರಿನಲ್ಲಿ ಈಗಾಗಲೇ ಈ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಬೇಕಿರುವ ಕಾರ್ಯಚಟುವಟಿಕೆಗಳು ನಡೆದಿವೆ.
ಯಳ್ಳೂರಿನಲ್ಲಿ ಬೃಹತ್ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕಾಗಿ 40 ಎಕರೆ ಜಾಗ ಗುರುತಿಸಲಾಗಿದೆ. ಈ ಜಾಗವು ಯುವಜನ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರವಾಗಲಿದೆ ಹಾಗೂ ಪೂರ್ಣ ಪ್ರಮಾಣದ ನಿರ್ಮಾಣಕ್ಕೆ 400 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಕ್ರೀಡಾಂಗಣ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅನುದಾನ ದೊರೆಯಲಿದೆ. ಬರುವ ಬಜೆಟ್ ನಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಅನುದಾನ ಮೀಸಲಿಡಲು ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರಕ್ಕೆ ಕೋರಿದ್ದಾರೆ.
ರಾಜ್ಯದಲ್ಲಿ ಹಲವಾರು ಕಡೆಗಳಲ್ಲಿ ಸ್ಟೇಡಿಯಂಗಳಿವೆ. ಆದರೆ, ಎಲ್ಲ ಬಗೆಯ ಕ್ರೀಡೆಗಳನ್ನು ಒಂದೇ ಕಡೆ ನಡೆಸುವ ಸೌಲಭ್ಯ ಇಲ್ಲ. ಈ ಕೊರತೆ ನಿವಾರಿಸಲು ಹಾಗೂ ಬೆಳಗಾವಿಯಲ್ಲಿ ಒಲಿಂಪಿಕ್ ಕ್ರೀಡೆ ನಡೆಸುವ ಗುಣಮಟ್ಟದ ಕ್ರೀಡಾ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ.
ಪಾರ್ಕಿಂಗ್ ವ್ಯವಸ್ಥೆ : ಕ್ರೀಡಾಂಗಣದ ನಿರ್ಮಾಣದ ಜೊತೆಗೆ ಹೆಚ್ಚುವರಿಯಾಗಿ 5 ಎಕರೆ ಭೂಮಿಯನ್ನು ಪಡೆಯಲಾಗುತ್ತಿದ್ದು, ಈ ಜಾಗದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ.
- Advertisement -
ಬೆಳಗಾವಿಯ ದಕ್ಷಿಣ ಮತಕ್ಷೇತ್ರದ ಜನಪ್ರತಿನಿಧಿ ಅಭಯ ಪಾಟೀಲ ಅವರು ಸರ್ಕಾರದ ಮಟ್ಟದಲ್ಲಿ ಎಲ್ಲ ಪ್ರಯತ್ನಗಳನ್ನು ನಡೆಸಿದ್ದಾರೆ.
- Advertisement -
ಯೋಜನೆ ಶೀಘ್ರ ಅನುಷ್ಠಾನಗೊಂಡರೆ ಬೆಳಗಾವಿಯ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದೆ. ಹಾಗೂ ಈ ಭಾಗದ ಕ್ರೀಡಾಪಟುಗಳಿಗೆ ಹೆಚ್ಚು ಅನುಕೂಲವಾಗಲಿದೆ.
Photo : For Representation Purpose Only. (https://www.pinterest.com/pin/296393219218024462/)